ಅರ್ಧ ದಿನ ವ್ಯಾಪಾರ ಸಮಯ ಹಿಂತೆಗೆತ.ಸರ್ಕಾರದ ನಿಯಮ ಪಾಲಿಸಲು ಮನವಿ.ಕೆ ಕೆ ಶ್ರೀನಿವಾಸ್

No comments

ಸಿದ್ದಾಪುರ (Times Of Coorg) : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿಸಿದ್ದಾಪುರ ಸುತ್ತಮುತ್ತಲ ವರ್ತಕರಿಗೆ ಬೆಳಗಿನಿಂದ ಮಧ್ಯಾಹ್ನದವರೆಗೆ   ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿರುವ ಸಮಯವನ್ನು ಹಿಂತೆಗೆದು ಕೊಳ್ಳಲಾಗಿದ್ದು. ವರ್ತಕರು ಸರ್ಕಾರದ ಆದೇಶವನ್ನು ಪಾಲಿಸುವಂತೆ ಸಿದ್ದಾಪುರ  ವರ್ತಕರ ಸಂಘದ ಅಧ್ಯಕ್ಷ ಕೆ.ಕೆ ಶ್ರೀನಿವಾಸ್ ಪತ್ರಿಕೆಗೆ ತಿಳಿಸಿದ್ದಾರೆ.ಸಂಘದ ಕಚೇರಿಯಲ್ಲಿ  ಪದಾಧಿಕಾರಿಗಳೊಂದಿಗೆ ಸಂಘದ ಸಭೆಯ ನಂತರ ಮಾತನಾಡಿಸಿದ್ದಾಪುರದಲ್ಲಿ ನಾಲ್ಕು ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಸಂದರ್ಭದಲ್ಲಿ ಚೇಂಬರ್ ಆಫ್ ಕಾಮರ್ಸ್ ಮನವಿಗೆ 7 ದಿನಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಹಕರಿಸಿರುವ  ವರ್ತಕರಿಗೆ ಕೃತಜ್ಞತೆ ಸಲ್ಲಿಸಿದ ಅವರು ಸರಕಾರ ಹಾಗೂ ಜಿಲ್ಲಾಡಳಿತ ಕೈಗೊಂಡಿರುವ  ಮುಂಜಾಗ್ರತಾ ಕ್ರಮಕ್ಕೆ ಎಲ್ಲ ವರ್ತಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು ಭಾನುವಾರ ಸಂಪೂರ್ಣ ಲಾಕ್  ಡೌನ್ ಇದ್ದು.ಇತರ ದಿನಗಳಲ್ಲಿ ಸರ್ಕಾರದ ನಿಯಮದಂತೆ  ಮುಂದುವರಿಯಬೇಕೆಂದರು.

ಮಾಸ್ಕ್,ಸ್ಯಾನಿಟೈಸರ್   ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಗ್ರಾಹಕರು ಹಾಗೂ ವರ್ತಕರು ಸಹಕರಿಸಬೇಕೆಂದು ಮನವಿಮಾಡಿದರು.ಈ ಸಂದರ್ಭ ಜಿಲ್ಲಾ ವರ್ತಕರ ಸಂಘದ ನಿರ್ದೇಶಕ  ಜೋಸೆಫ್ ಸ್ಯಾಮ್, ಸಿದ್ದಾಪುರ ವರ್ತಕರ ಸಂಘದ ಉಪಾಧ್ಯಕ್ಷ  ರವೂಫ್ ಹಾಜಿ,ಕಾರ್ಯದರ್ಶಿ ರೋಹಿತ್,  ಬಿಜಯ್, ದಿನೇಶ್ . ನಾಫಿಲ್. ಶಂಕರ ಸೇರಿದಂತೆ ಮತ್ತಿತರರು  ಇದ್ದರು.

No comments

Post a Comment