ಮಾದಾಪುರ ಸರ್ಕಾರಿ ಶಾಲೆಯ ಸಮೀಪ ಸ್ಥಳೀಯರಿಂದ ಸ್ವಚ್ಛತಾ ಕಾರ್ಯಕ್ರಮ
ಮಾದಾಪುರ (Times Of Coorg) : ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಮುತ್ತಲಿನಲ್ಲಿ ಬೆಳೆದಿದ್ದ ಕಾಡು ಕಡಿದು ಸ್ವಚ್ಛಗೊಳಿಸಲಾಯಿತು. ಶ್ರೀ ಭಗತ್ ಸಿಂಗ್ ಯುವಕ ಯುವಕ ಸಂಘ ಮಾದಾಪುರ ಹಾಗೂ ಸ್ಥಳೀಯ ಗ್ರಾಮಸ್ಥರ ವತಿಯಿಂದ ತಮ್ಮ ಗ್ರಾಮದ ಶಾಲೆಯ ಮೈದಾನದ ಒಳಗಡೆ ಯಾವುದೇ ವಾಹನಗಳು ಬಾರದಂತೆ ಸ್ವಂತ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಮೂಲಕ ಕೊರೋನ ವೈರಸ್ ತಡೆಯಲು ಹಾಗೂ ಇತರ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ.
ಈ ಮೈದಾನದ ಒಳಗಡೆ ಯಾವುದೇ ವಾಹನಗಳು ಬಾರದಂತೆ ಸುತ್ತಮುತ್ತಲಿನ ಕಾಡು ಕಡಿಯಲಾಯಿತು.
ಹಾಗೂ ಬೇರೆ ಊರುಗಳಿಂದ ಮೈದಾನಕ್ಕೆ ಬಂದು ಕುಡಿದು ಬಾಟಲಿಗಳನ್ನು ಹೊಡೆದು ತ್ಯಾಜ್ಯವನ್ನು ಅಲ್ಲಿ ಎಸೆಯುವುದಲ್ಲದೇ ಇತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಸಂಘದ ಮತ್ತು ಗ್ರಾಮಸ್ಥರ ಗಮನಕ್ಕೆ ಕಂಡುಬಂದಿದ್ದರಿಂದ ಶಾಲಾ ಸುತ್ತ ಮುತ್ತಲಿನ ಪರಿಸರವನ್ನು ಹಾಗೂ ಕ್ರೀಡಾಂಗಣವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದ್ದು ಹಾಗಾಗಿ ಮೈದಾನಕ್ಕೆ ಹೋಗುವ ರಸ್ತೆಯನ್ನು ಬೇಲಿ ತಂತಿಯಿಂದ ಮುಚ್ಚಲಾಯಿತು. ಅಲ್ಲದೆ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದಿರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


No comments
Post a Comment