ಕೊಡಗು ಜಿಲ್ಲೆಯಲ್ಲಿ ಇಂದು 13 ಹೊಸ ಕೋವಿಡ್ ಪ್ರಕರಣಗಳು ದೃಢ

No comments

      ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ವೇಳೆಗೆ 13 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

      ವಿರಾಜಪೇಟೆ ತಾಲೂಕಿನ ಹೈಸೊಡ್ಲೂರುವಿನಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 50 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

      ಮಡಿಕೇರಿಯ ಪೋಸ್ಟಲ್ ಕ್ವಾರ್ಟಸ್‍ನ 49 ಮತ್ತು 21 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ ವೀರಾಜಪೆಟೆ ತಾಲೂಕಿನ ಜೋಡ್‍ಬತ್ತಿಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 23 ಮತ್ತು 20 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.

      ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ಎಂ.ಜಿ ನಗರದ ನಿವಾಸಿ 41 ವರ್ಷದ ಪುರುಷ ಮತ್ತು ಮಡಿಕೇರಿಯ ಮುನೀಶ್ವರ ದೇವಾಲಯದ ಸಮೀಪವಿರುವ ಸುದರ್ಶನ ಬಡಾವಣೆಯ 32 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ.

      ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ರಸ್ತೆಯ ರಾಘವೇಂದ್ರ ದೇವಾಲಯದ ಬಳಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಾದ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಸೋಮವಾರಪೇಟೆ ತಾಲೂಕಿನ ಅಬೂರ್ ಕಟ್ಟೆ ನಿವಾಸಿ 69 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.

       ಬೆಂಗಳೂರಿನಿಂದ ಮರಳಿರುವ ಕುಶಾಲನಗರದ ಹೆಬ್ಬಾಲೆಯ ಬನಶಂಕರಿ ರಸ್ತೆಯ 31 ವರ್ಷದ ಪುರುಷನಿಗೆ ಮತ್ತು ವೀರಾಜಪೇಟೆ ತಾಲೂಕಿನ ಕೊಡವ ಸಮಾಜ ಸಮೀಪದ ಅಪ್ಪಯ್ಯ ಸ್ವಾಮಿ ರಸ್ತೆಯ 75 ಮತ್ತು 23 ವರ್ಷದ ಮಹಿಳೆಯರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.

       ಇದರೊಂದಿಗೆ ಜಿಲ್ಲೆಯಲ್ಲಿ 6 ಕಂಟೈನ್‍ಮೆಂಟ್ ವಲಯಗಳನ್ನು ಹೊಸದಾಗಿ ತೆರೆಯಲಾಗಿದೆ ಎಂ.ಜಿ.ನಗರ ಪೆÇನ್ನಂಪೆಟೆ, ಮುನಿಶ್ವರ ದೇವಸ್ಥಾನದ ಹತ್ತಿರ ಸುದರ್ಶನ್ ಬಡಾವಾಣೆ ಮಡಿಕೇರಿ, ಅಂಚೆ ಕ್ವಾರ್ಟರ್ಸ್ ಮಡಿಕೇರಿ, ರಾಘವೇಂದ್ರ ದೇವಸ್ಥಾನದ ಹತ್ತಿರ, ಮ್ಯಾನ್ಸ್ ಕಂಪೌಂಡ್ ರಸ್ತೆ ಮಡಿಕೇರಿ, ಅಬೂರ್‍ಕಟ್ಟೆ ಸೋಮವಾರಪೇಟೆ ಮತ್ತು ಬನಶಂಕರಿ ದೇವಾಲಯ ರಸ್ತೆ, ಹೆಬ್ಬಾಲೆ ಕುಶಾಲನಗರ ಭಾಗದಲ್ಲಿ ಕಂಟೈನ್‍ಮೆಂಟ್ ವಲಯಗಳನ್ನು ಹೊಸದಾಗಿ ತೆರೆಯಲಾಗಿದೆ.

       ಅಲ್ಲದೆ 21 ಕಂಟೈನ್‍ಮೆಂಟ್ ವಲಯಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಬಾವಲಿ ಮಡಿಕೇರಿ, ಚೇರಂಬಾಣೆ ಮಡಿಕೇರಿ, ಅಪ್ಪಯ್ಯಸ್ವಾಮಿ ರಸ್ತೆ ವೀರಾಜಪೇಟೆ, ಬೊಳ್ಳೂರು ಸೋಮವಾರಪೇಟೆ, ಗೋಣಿಕೊಪ್ಪ ಮೋರ್ ಸ್ಟೋರ್ ಎದುರು ಪ್ರದೇಶ, ಹೆಬ್ಬಾಲೆ ಮುಖ್ಯ ರಸ್ತೆ ಪ್ರದೇಶ, ಕೈಕಾಡು ಪಾರಣೆ, ಕಿರಾಂದಾಡು ಪಾರಣೆ, ಕೊಟ್ಟಲು ಸಂಪಾಜೆ, ಕೊಟ್ಟೂರು ಮಡಿಕೇರಿ, ಕುದುರೆಪಾಯ ಮಡಿಕೇರಿ, ಮಣಜೂರು, ಸೋಮವಾರಪೇಟೆ, ಮರಪಾಲ ತಿತಿಮತಿ ವೀರಾಜಪೇಟೆ, ನಂಜರಾಯಪಟ್ಟಣ, ಬೆಳ್ಳಿ ಕಾಲೋನಿ, ನಂಜರಾಯಪಟ್ಟಣ ಪೈಸಾರಿ, ಪೆರಾಜೆ ಮಡಿಕೇರಿ, ಸಂಪಾಜೆ ಆರೋಗ್ಯ ವಸತಿ ಗೃಹ, ಸಣ್ಣ ಪಿಲಿಕೋಟು ಮಡಿಕೇರಿ, ತಲಕಾವೇರಿ ಮಡಿಕೇರಿ, ತಾಮರ ಕಕ್ಕಬ್ಬೆ ಮತ್ತು ತಣ್ಣಿಮನಿ ಮಡಿಕೇರಿ.

      ಈ ಸಂಬಂಧ ಜಿಲ್ಲೆಯಲ್ಲಿ ಒಟ್ಟು 311 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು,  212 ಜನ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 94 ಸಕ್ರಿಯ ಪ್ರಕರಣಗಳಿದ್ದು, 05 ಮಂದಿ ಕೋವಿಡ್-19 ನಿಂದ ಮೃತರಾಗಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ 100 ಕಂಟೈನ್‍ಮೆಂಟ್ ವಲಯಗಳಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment