.ಮುಸ್ಲಿಂ ಜಮಾಅತ್ ಕಮಿಟಿ ಕಳೆದ ಪ್ರವಾಹ ಸಂದರ್ಭದಲ್ಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತುರ್ತು ಅಗತ್ಯಕ್ಕೆ ಬೇಕಾಗಿರುವ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಕೊಂಡಗೇರಿ ಗ್ರಾಮದಲ್ಲಿ ದಾನಿಗಳ ಸಹಕಾರದಿಂದ ನಿರ್ಮಾಣವಾಗಿರುವ ಮನೆಯನ್ನು ಕೊಡಗು ಜಿಲ್ಲಾ ನಾಹಿಬ್ ಖಾಝಿ ಮಹಮ್ಮೂದ್ ಮುಸ್ಲಿಯಾರ್ . ಉಮ್ಮರ್ ಕುಟುಂಬಕ್ಕೆ ಕೀ ಹಸ್ತಾಂತರಿಸಿ ಶುಭ ಹಾರೈಸಿದರು .ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ ಯೂಸುಫ್ ಹಾಜಿ ಶಕ್ತಿ ಪತ್ರಿಕೆಯೊಂದಿಗೆ ಮಾತನಾಡಿ . ಕಳೆದ ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡ ಕುಟುಂಬಗಳು ಸಂಕಷ್ಟದಲ್ಲಿರುವುದನ್ನು ಮನಗಂಡು ದಾನಿಗಳ ಸಹಕಾರದಿಂದ ಮನೆ ನಿರ್ಮಿಸಿಕೊಡಲಾಗಿದೆ .ಗ್ರಾಮದಲ್ಲಿ ನೂರಾರು ಕುಟುಂಬಗಳ ಮನೆ ಇಲ್ಲದೆ ಸಂಕಷ್ಟದಲ್ಲಿದ್ದು ಇದೀಗ ಮತ್ತೆ ಮಳೆ ಸುರಿಯುತ್ತಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದ ಅವರು ದಾನಿಗಳ ಸರಕಾರದಿಂದ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಡಲಾಗಿದೆ .
ಮತ್ತಷ್ಟು ಮನೆಗಳ ನಿರ್ಮಾಣ ಕಾರ್ಯಕ್ಕೆ ದಾನಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಪ್ರಧಾನ ಕಾರ್ಯದರ್ಶಿ ಪಿ.ಇ ಸಾದಲಿ ಮಾತನಾಡಿ ಕಡು ಬಡ ನಿವಾಸಿಗಳೇ ಅಧಿಕವಾಗಿರುವ ಗ್ರಾಮದಲ್ಲಿ ಹಲವು ಕುಟುಂಬಗಳು ಸಂಕಷ್ಟದಲ್ಲಿದ್ದು ದಾನಿಗಳು ಹೆಚ್ಚಿನ ಸಹಕಾರ ನೀಡಿದಲ್ಲಿ ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಸಾಧ್ಯವಾಗಲಿದೆ ಎಂದರು.ಗ್ರಾಮದ ನಿವಾಸಿ ಉಮ್ಮರ್ ಮಾತನಾಡಿ ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ನಮಗೆ ದಾನಿಗಳ ಸಹಕಾರದಿಂದ ಮನೆ ನಿರ್ಮಿಸಿಕೊಟ್ಟ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಕಮಿಟಿಯವರು ಕೃತಜ್ಞತೆ ಹೇಳಿದರು ಈ ಸಂದರ್ಭ ಪ್ರಮುಖರಾದ ಪಿ. ಎ ಯೂಸುಫ್ ,ಹಮೀದ್ ,ಇಸ್ಮಾಯಿಲ್ ಸಖಾಫಿ,ಇಕ್ಬಾಲ್ ,ಅಲಿ,ಯಹೀಯ, ಮೊಹಮ್ಮದ್ ಹಾಜಿ,ಹನೀಫ್ ಸಖಾಫಿ,ಮೂಸ ಅಮಾನಿ,ಜಕ್ರಿಯ,ಮುಜೀಬ್,ಸಲೀಂ ಸಖಾಫಿ. ಷರೀಪ್ ಸಖಾಫಿ.ಸೇರಿದಂತೆ ಮತ್ತಿತರರು ಹಾಜರಿದ್ದರು

No comments
Post a Comment