ಕೊಡಗು : ಸಂಕಷ್ಟದ ಹಾದಿಯ ಮರೆತು ಮತ್ತೆ "ನಾಟಿ" ಗೆ ಚಾಲನೆ
ವರದಿ :ಅಜರುದ್ದೀನ್ ವಯಕೋಲ್
Times Of Coorg : ಜಿಲ್ಲೆಯಾದ್ಯಂತ ಕೊರೋನ ಮಹಮಾರಿ ವ್ಯಾಪಕವಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜನಸಾಮಾನ್ಯರು ದೈನಂದಿನ ಬದುಕನ್ನು ಅತೀವ ಜಾಗರೂಕತೆಯಿಂದ ಮುಂದೂಡುವಂತಾಗಿದೆ.
ಈ ಸಾಲಿನಲ್ಲಿ ನಾಪೋಕ್ಲು ಭಾಗಕ್ಕೆ ಈ ವರೆಗೆ ಮಳೆ ಕೊಂಚ ಕಡಿಮೆ ಪ್ರಮಾಣದಲ್ಲಿ ಸುರಿದಿದ್ದು ಮತ್ತೆ ಕಳೆದ ಸಾಲಿನಲ್ಲಿ ಆಗಸ್ಟ್ ತಿಂಗಳಲ್ಲಿ ಅತೀವ ಮಳೆ ನೀರಿನಿಂದ ನದಿ ಬಯಲು ಪ್ರದೇಶಗಳು ಜಲಾವ್ರತವಾಗಿ ಬಹುತೇಕ ನಾಟಿ ಕ್ರಷಿಗಾರರು ಸಂಕಷ್ಟಕ್ಕೆ ಸಿಲುಕಿರುದು ಇನ್ನೂ ಹಸಿ ನೆನಪಾಗಿಯೆ ಉಳಿದಿದೆ.
ಪ್ರತೀ ವರ್ಷವು ಜಿಲ್ಲೆಯ ರೈತರೀಗೆ ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಕ್ರಷಿ ಚಟುವಟಿಕೆಗಳಲ್ಲಿ ಸಮಸ್ಯೆಗಳನ್ನು ಮೆಟ್ಟಿ ನಿಂತು ಮುಂದೆ ಸಾಗೂದು ಹವ್ಯಾಸವಾಗಿ ಹೋಗಿದೆ. ಪ್ರಕ್ರತಿ ವಿಕೋಪ,ಅತೀವ ಮಳೆ ಹಾನಿ ಮತ್ತು ಕಾಡಾನೆಗಳ ನಿರಂತರ ಸಮಸ್ಯೆ ಮದ್ಯೆ ಇದೀಗ ಕೊರೋನ ಎಂಬ ಮತ್ತೊಂದು ವಿಪತ್ತನ್ನು ಮುಂದಿಟ್ಟುಕೊಂಡು ಈ ಸಾಲಿನಲ್ಲಿಯೂ ನಾಟಿ ಕೂಡಗು ಜಿಲ್ಲೆಯಾದ್ಯಂತ ನಾಟಿ ಕ್ರಷಿಯ ತಯಾರಿಯಲ್ಲಿದ್ದಾರೆ.
ಕೆಲವೆಡೆ ಈಗಾಗಲೇ ಪ್ರಥಮ ಹಂತದ ನಾಟಿ ಮುಗಿದಿದ್ದು ಮತ್ತೆ ಕೆಲವೆಡೆ ಕೆಲಸ ಪ್ರಗತಿಯಲ್ಲಿದೆ.

No comments
Post a Comment