ಕೊಡಗು ಜಿಲ್ಲೆಯಲ್ಲಿ ಇಂದು ಹೊಸ 09 ಕೋವಿಡ್ ಸೋಂಕು ಪ್ರಕರಣಗಳು ಧೃಡ : ಸೋಂಕಿತರ ಸಂಖ್ಯೆ 131 ಏರಿಕೆ

No comments


ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯಲ್ಲಿ ಇಂದು ಬೆಳಗ್ಗೆ 9 ಕೋವಿಡ್ ಪ್ರಕರಣಗಳು ಧೃಡವಾಗಿದ್ದು, ಸೋಂಕಿತರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ. ಪ್ರಾಥಮಿಕ ಸಂಪರ್ಕವಾದ 65 ವರ್ಷದ ಮಹಿಳೆ, 32 ವರ್ಷದ ಪುರುಷ, 45 ವರ್ಷದ ಪುರುಷ , 35 ವರ್ಷದ ಮಹಿಳೆ, 20 ವರ್ಷದ ಪುರುಷ, 19 ವರ್ಷದ ಹುಡುಗ ಮತ್ತು 45 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕಿನ ಅಪ್ಪಯ್ಯ ಸ್ವಾಮಿ ರಸ್ತೆಯ ನಿವಾಸಿ ಜ್ವರ ಲಕ್ಷಣಗಳಿದ್ದ 55 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.  ಇವರು ಪ್ರಸ್ತುತ ವಿರಾಜಪೇಟೆಯ ಗೋಣಿಕೊಪ್ಪದಲ್ಲಿ ವಾಸವಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದ ಜ್ವರ ಲಕ್ಷಣಗಳಿದ್ದ 34 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್ ತಿಳಿಸಿದ್ದ್ರರೆ.

*ಜಿಲ್ಲೆಯಲ್ಲಿ ಹೊಸದಾಗಿ 03 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.  ವಿವರ ಕೆಳಕಂಡಂತಿದೆ.*
• ಅಪ್ಪಯ್ಯ ಸ್ವಾಮಿ ರಸ್ತೆ, ವಿರಾಜಪೇಟೆ
. ಗೋಣಿಕೊಪ್ಪ
. ಕುಟ್ಟ

ಸರ್ಕಾರದ ನಿಯಮಾನುಸಾರ ಅವಧಿ ಮುಗಿದ ಈ ಕೆಳಗಿನ 08 ನಿಯಂತ್ರಿತ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.

ಬಿಟ್ಟಂಗಾಲ, ವಿರಾಜಪೇಟೆ ತಾಲ್ಲೂಕು. ಕಗ್ಗೋಡ್ಲು, ಮಡಿಕೇರಿ ತಾಲ್ಲೂಕು. ಕೋಟೆ ಮಾರಿಯಮ್ಮ ದೇವಸ್ಥಾನ ರಸ್ತೆ, ಮಡಿಕೇರಿ. ಮುಳ್ಳೂರು, ಸೋಮವಾರಪೇಟೆ ತಾಲ್ಲೂಕು. ಮಡಿಕೇರಿಯ ಪುಟಾಣಿ ನಗರ. ರಥಬೀದಿ, ಕುಶಾಲನಗರ. ತಾಳತ್ತಮನೆ, ಮಡಿಕೇರಿ ತಾಲ್ಲೂಕು. ಬಳಗುಂದ, ಸೋಮವಾರಪೇಟೆ ತಾಲ್ಲೂಕು.

ಜಿಲ್ಲೆಯಲ್ಲಿ ವರದಿಯಾದ ಸೋಂಕಿತ ಪ್ರಕರಣಗಳು : 131
ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳು: 18
ಸಕ್ರಿಯ ಪ್ರಕರಣಗಳು: 112
ಮೃತ ಪಟ್ಟ ಪ್ರಕರಣಗಳು: 01
ಒಟ್ಟು ನಿಯಂತ್ರಿತ ಪ್ರದೇಶಗಳು: 53

No comments

Post a Comment