ಹುಂಡಿ ಸೀಲ್ ಡೌನ್ ಕುಟುಂಬಗಳಿಗೆ ಕಿಟ್ ವಿತರಿಸಿ ಮಾನವೀಯತೆ ಮೆರೆದ ಕಾರುಣ್ಯ ಸಹಾಯ ನಿಧಿ

No comments

ಸಿದ್ದಾಪುರ (Times Of Coorg) : ಕೊರೋನಾ ವೈರಸ್ ಪತ್ತೆಯಾಗಿರುವ ಹುಂಡಿ ಗ್ರಾಮದಲ್ಲಿ  ಹಲವು ದಿನಗಳಿಂದ ಜಿಲ್ಲಾಡಳಿತ ಸೀಲ್ ಡೌನ್ ಮಾಡಲಾಗಿದೆ. ಕಾರ್ಮಿಕ ಕುಟುಂಬಗಳೇ ಅಧಿಕವಾಗಿರುವ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೊಳಗಾಗಿ ರುವುದನ್ನು ಮನಗಂಡು
ಕಾರುಣ್ಯ ಸಹಾಯ ನಿಧಿ ಸಂಘಟನೆ ಗ್ರಾಮದ 64 ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ .

ಕಾರುಣ್ಯ ಸಹಾಯ ನಿಧಿ ಸಂಘಟನೆಯ ಕಾರ್ಯದರ್ಶಿ 
ಚೊಕ್ಕಂಡಹಳ್ಳಿ ಮಜೀದ್ ಮಾತನಾಡಿ 
ವಿಶ್ವದಾದ್ಯಂತ  ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಮಹಾಮಾರಿ ವೈರಸ್ ನಿಂದ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಹುಂಡಿ ಗ್ರಾಮವನ್ನು ಹಲವು ದಿನಗಳಿಂದ ಸೀಲ್ ಡೌನ್ ಮಾಡಲಾಗಿದೆ. ಗ್ರಾಮದಲ್ಲಿ ಕಾರ್ಮಿಕ ಕುಟುಂಬಗಳೇ ಅಧಿಕವಾಗಿದ್ದು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳಿಗೆ  ಸರ್ಕಾರ ಆಹಾರ ಕಿಟ್ಟು ವಿತರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು 
ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಾನಿಗಳು ನೆರವಾಗಬೇಕೆಂದರು.

ಕಳೆದ ಹಲವು ವರ್ಷಗಳಿಂದ ಕಾರುಣ್ಯ ಸಹಾಯ ನಿಧಿ ಸಂಘಟನೆ ಸಮಾಜ ಸೇವೆಯಲ್ಲಿ  ಸಕ್ರಿಯವಾಗಿ ತೊಡಗಿಸಿಕೊಂಡು ಕಡು ಬಡ
ಹೆಣ್ಣು ಮಕ್ಕಳ ವಿವಾಹ ಕಾರ್ಯ ಹಾಗೂ ಅನಾರೋಗ್ಯಕ್ಕೊಳಗಾದವರಿಗೆ ದಾನಿಗಳ ಸಹಕಾರ ದಿಂದ ನೆರವು ನೀಡುವ ಮೂಲಕ ಸ್ವಂದಿಸುತಿದೆ ಎಂದರು.

ಕಾರುಣ್ಯ ಸಹಾಯ ನಿಧಿ ಸಂಘಟನೆ ದಾನಿಗಳ ಸಹಕಾರದಿಂದ  ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ನಿರ್ಗತಿಕ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯ, ಅನಾರೋಗ್ಯಕ್ಕೊಳಗಾಗಿರುವ ಮಂದಿಗೆ ಚಿಕಿತ್ಸೆಗೆ ನೆರವು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು .ಗ್ರಾ ಪಂಚಾಯಿತಿ ಸದಸ್ಯ ನಿಯಾಜ್ ಮಾತನಾಡಿ  ಹುಂಡಿ ಗ್ರಾಮದಲ್ಲಿ ಕಾರ್ಮಿಕ ಕುಟುಂಬಗಳ ಅಧಿಕವಾಗಿದ್ದು ಸೀಲ್ ಡೌನ್ ನಿಂದ  ಸಂಕಷ್ಟಕ್ಕೊಳಗಾಗಿದ್ದರು.
ಕಾರುಣ್ಯ ಸಹಾಯ ನಿಧಿ ಸಂಘಟನೆಯವರು ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿರುವ
ಸಂಘಟನೆ ಕಾರ್ಯವನ್ನು ಶ್ಲಾಘಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಸಜಿ ತೋಮಸ್ ಮಾತನಾಡಿ
ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಹುಂಡಿ ಗ್ರಾಮವನ್ನು ಸೀಲ್ ಡೌನ್  ಮಾಡಲಾಗಿದ್ದು 60ಕ್ಕೊ ಹೆಚ್ಚು ಕುಟುಂಬಗಳಿಗೆ  ಸರ್ಕಾರ ಹಾಗೂ ಜಿಲ್ಲಾಡಳಿತ ಯಾವುದೇ ಆಹಾರ ಕಿಟ್ ನೀಡದೇ ಕಡೆಗಣಿಸಿದ್ದಾರೆ.
ನಿವಾಸಿಗಳ ಸಂಕಷ್ಟವನ್ನು ತಿಳಿದು ಕಾರುಣ್ಯ ಸಹಾಯ ನಿಧಿ ದಾನಿಗಳು ಸಹಾಯ ಮಾಡಿರುವದರಿಂದ ಹಸಿವು ನೀಗಿದೆ
ಲಾಕ್ ಡೌನ್ ಸಂದರ್ಭದಲ್ಲೂ ತಿಂಗಳುಗಳ ಕಾಲ ಸಂಕಷ್ಟ ಎದುರಿಸುತ್ತಿದ್ದ ಜನರಿಗೆ ಇದೀಗ ಸೀಲ್ ಡೌನ್   ಸಂಕಷ್ಟವೂ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಬೇಕಾದ ಅಗತ್ಯ ಆಹಾರ ಪದಾರ್ಥಗಳನ್ನು ವಿತರಿಸಬೇಕೆಂದು ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭ ಕಾರುಣ್ಯ ಸಹಾಯ ನಿಧಿ ಸಂಘಟನೆಯ ಅಧ್ಯಕ್ಷ ನಜೀರ್ ಚಾಮಿಯಾಲ.
ಸಮಿತಿಯ ಪ್ರಮುಖರಾದ ಅಬ್ದುಲ್ಲಾ ಹುಂಡಿ, ಕರೀಂ ಸಿದ್ದಾಪುರ , ನಜಿರ್ ಹೊಲಮಾಳ ,ನೂರ್ ಚೊಕ್ಕಂಡಹಳ್ಳಿ ಗ್ರಾಮ ಪ್ರಮುಖರಾದ ಸಮೀರ್  ಸೇರಿದಂತೆ ಮತ್ತಿತರರು ಇದ್ದರು.


No comments

Post a Comment