ಆಶಿಕ್ ಜುವೆಲ್ಲರಿ ವತಿಯಿಂದ ಮಾಸ್ಕ್ ವಿತರಣೆ

No comments

ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಕೊಡಗಿನಲ್ಲಿ ವ್ಯಾಪಕವಾಗಿ ಕೊರೋನಾ ಮಹಾ ಮಾರಿ  ಹರಡುತ್ತಿರೋದರಿಂದ  ನಾಪೋಕ್ಲು ಸುತ್ತಮುತ್ತಲಿನ ಜನರು ಆತಂಕಕ್ಕೊಳಗಾಗಿದ್ದಾರೆ.

   ಈ ದಿನ ನಾಪೋಕ್ಲುವಿನ ಆಶಿಕ್ ಜುವೆಲ್ಲರಿ  ಚಿನ್ನದ ಅಂಗಡಿ  ವತಿಯಿಂದ ನಾಪೋಕ್ಲುವಿನ ಆಟೋ ಚಾಲಕರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಮರುಬಳಕೆಗೆ ಯೋಗ್ಯ ವಾದಂತಹ ಮಾಸ್ಕ್ ವಿತರಿಸಲಾಯಿತು. ಅದಲ್ಲದೆ ಕೊರೋನಾ ಮಹಾಮಾರಿ ಪ್ರಾರಂಭವಾದಾಗಿನಿಂದಲೂ ಆಶಿಕ್ ಜಿವೆಲ್ಲರಿ ವತಿಯಿಂದ ಅವರ ಎಲ್ಲಾ ಗ್ರಾಹಕರಿಗೂ ಉಚಿತವಾಗಿ ನೀಡುತ್ತಾ ಬಂದಿರುತ್ತಾರೆ.

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಬ್ದುಲ್ ರಜಾಕ್ ಮಾತನಾಡಿ ನಾಪೋಕ್ಲು ಸುತ್ತಮುತ್ತಲಿನಲ್ಲಿ ಕೋರೋಣ ಪ್ರಕರಣಗಳು ಕಾಣಿಸಿದ್ದು ಹಾಗೂ  ಇನ್ನಷ್ಟು ಹರಡುವ ಸಾಧ್ಯತೆ ದಟ್ಟವಾಗಿರುವುದರಿಂದ ಮಾಸ್ಕ್ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು,

ಸಂಘದ ಕಾರ್ಯದರ್ಶಿ ಝಕರಿಯ ಕೆ . ಎಂ ಮಾತನಾಡಿ     ನಾಪೋಕ್ಲು ಸುತ್ತ ಮುತ್ತಲು ಕೊರೋನಾ ಪ್ರಕರಣಗಳು ದೃಢ ಆಗಿರೋದ್ರಿಂದ ನಾಪೋಕ್ಲು ವಿನ ಆಟೋ ಚಾಲಕರು ಅವರ ಸುರಕ್ಷತೆ ಗೋಸ್ಕರ ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಪೋಯೋಗಿಸಬೇಕು ಆಟೋದಲ್ಲಿ ಬರುವ ಪ್ರಯಾಣಿಕರಿಗೆ ಪ್ರತಿ ಚಾಲಕರು ಮಾಸ್ಕ್ ಹಾಕಲು ತಿಳಿ ಹೇಳಬೇಕು ಎಂದರು

 ಇದೇ ಸಂದರ್ಭದಲ್ಲಿ  ಆಶಿಕ್ ಜುವೆಲ್ಲರಿ ಮಾಲೀಕರು ಹಾಗೂ ಸಿಬ್ಬಂದಿ ಅವರಿಗೂ ಮಾಸ್ಕ್ ನೀಡಿದಕ್ಕೆ ನಾಪೋಕ್ಲು ವಾಹನ ಚಾಲಕರು ಹಾಗೂ ಮಾಲೀಕರ ಸಂಘದ ಪರವಾಗಿ ಅಭಿನಂದನೆ  ಸಲ್ಲಿಸಿದರು.

ಈ ಸಂದರ್ಭ ಆಶಿಕ್ ಜಿವೆಲ್ಲರಿ ಮಾಲೀಕರಾದ ಹನೀಫ್ ಆಶಿಕ್  , ಆಟೋ ಚಾಲಕರಾದ ಮಂಜುನಾಥ್, ಶ್ರೀಜೇಶ್ ,ಗಣಪತಿ, ಹಮೀದ್, ಮತ್ತಿತರರು ಹಾಜರಿದ್ದರು.


No comments

Post a Comment