ನಾಪೋಕ್ಲುವಿನಲ್ಲಿ ತಂಪೆರೆದ ವರುಣ
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲುವಿನಲ್ಲಿ ಕಳೆದ 5 ದಿನಗಳ ಉರಿ ಬಿಸಿಲು ಮರೆಯಾಗಿ, ಈ ದಿನ ಮಧ್ಯಾಹ್ನ ದಿಡೀರನೆ ಧಾರಾಕಾರ ಸುರಿದ ಪುಷ್ಯ ಮಳೆಯು ನಾಪೋಕ್ಲು ವ್ಯಾಪ್ತಿಯಲ್ಲಿ ತಂಪು ವಾತಾವರಣ ಸೃಷ್ಟಿಯಾಗಿ
ಮಳೆಗಾಲ ವೆಂದೇ ಮರೆತುಹೋದ ಜನರಲ್ಲಿ ಇದು ಮಳೆಗಾಲ ಎಂಬುದನ್ನು ನೆನಪಿಸಿತು.
ಮಳೆಯಿಲ್ಲದೆ ಕಂಗಾಲಾಗಿದ್ದ ಕೃಷಿಕರು ಈ ದಿನದ ಮಳೆಯ ಪ್ರಾರಂಭದಿಂದ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದು ಇಂದಿನಿಂದ ನಿರಂತರ ಮಳೆ ಸುರಿಯುವ ವಾತಾವರಣ ಕೂಡ ಸೃಷ್ಟಿಯಾಗಿದೆ.

No comments
Post a Comment