ಆನೆ ದಾಳಿಗೆ ತುತ್ತಾದ ಆದಿವಾಸಿ ಕುಟುಂಬಕ್ಕೆ ನಮ್ಮ ಕೊಡಗು ತಂಡದಿಂದ ಸಹಾಯ
ಸಿದ್ಧಾಪುರ (Times Of Coorg) : ವಿರಾಜಪೇಟೆ ತಾಲ್ಲೂಕಿನ ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿಗೆ ಒಳಪಡುವ ಚೆನ್ನಂಗಿ -ಬಸವನಹಳ್ಳಿ ಗ್ರಾಮದ ಆದಿವಾಸಿಗಳು ವಾಸಿಸುವ ಹಾಡಿಗೆ ಕಳೆದ ರಾತ್ರಿ ಕಾಡಾನೆಯೊಂದು ನುಗ್ಗಿ ದಾಂದಲೆ ನಡೆಸಿದ್ದು, ಸಣ್ಣ ಎರಡು ಮಕ್ಕಳೊಂದಿಗೆ ಆ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದ್ದು, ಆನೆ ದಾಳಿಯಲ್ಲಿ ಹಾಡಿಯ ನಿವಾಸಿ ಚಂದ್ರ ಎಂಬುವವರ ಮನೆ ಜಖಂಗೊಂಡಿದ್ದು ಅವರುಗಳು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಮನೆಯಲ್ಲಿದ್ದ ಸಾಮಗ್ರಿಗಳನ್ನೆಲ್ಲಾ ಆನೆ ನಾಶ ಪಡಿಸಿ ಧವಸ ಧಾನ್ಯಗಳನ್ನು ತಿಂದಿದ್ದು ಆ ಕುಟುಂಬ ಆಹಾರಕ್ಕಾಗಿ ಪರದಾಡುತ್ತಿದ್ದಾರೆ ಎಂದು ಮಾಧ್ಯಮ ಮಿತ್ರರೊಬ್ಬರು ಮಾಹಿತಿ ಕೊಟ್ಟ ಮೇರೆಗೆ ಇಂದು ನಮ್ಮ ಕೊಡಗು ತಂಡ ಆ ಹಾಡಿಗೆ ಭೇಟಿ ನೀಡಿ ಆ ಕುಟುಂಬಕ್ಕೆ ಸಾಂತ್ವನ ಹೇಳುವುದರ ಮೂಲಕ ದಾನಿಗಳಾದ ಅಕ್ಕಳತಂಡ ಮೊಯ್ದು, ಮಜೀದ್ ಅಮ್ಮತ್ತಿ, ರುಬೀನಾ ಸೋಮವಾರಪೇಟೆ, ಸರಿತಾ ಪಟ್ಟಡ, ಅಶ್ರಫ್ ವಿರಾಜಪೇಟೆ, ಆಶೀಶ್ ಬೋಯಿಕೇರಿ, ಜಿನಾಸ್ ಸುಂಟಿಕೊಪ್ಪ, ಅಜಿತ್ ಕೊಟ್ಟಕೇರಿಯನ, ಲೋಹಿತ್ ಕುಶಾಲನಗರ* ಅವರುಗಳ ಸಹಾಯದಿಂದ ಆ ಆದಿವಾಸಿ ಕುಟುಂಬಕ್ಕೆ ಸುಮಾರು ಒಂದೂವರೆ ತಿಂಗಳಿಗೆ ಬೇಕಾಗುವ ಧವಸ ದಾನ್ಯಗಳು, ತರಕಾರಿ, ಪಾತ್ರೆಗಳು, ಚಾಪೆ ಕಂಬಳಿಗಳನ್ನು ಕೊಡುವುದರ ಜೊತೆಗೆ ಒಂದು ತಿಂಗಳಿಗೆ ಬೇಕಾಗುವ ಖರ್ಚಿನ ಹಣವನ್ನು ನಮ್ಮ ಕೊಡಗು ತಂಡ ದಿಂದ ಕೊಡಲು ಸಾಧ್ಯವಾಯಿತು ಎಂದು ತಿಳಿಸಲು ಹರ್ಷ ವ್ಯಕ್ತಪಡಿಸುತ್ತೇವೆ.
ಜೊತೆಗೆ ಮಾಹಿತಿ ಕೊಟ್ಟು ಸಹಾಯಕ್ಕೆ ಮನವಿ ಮಾಡಿದ ಪತ್ರಕರ್ತ ಮುಬಾರಕ್ ರವರಿಗೂ ಮಾಧ್ಯಮ ಮತ್ತು ಪತ್ರಿಕೆಯವರಿಗೂ, ಸಹಾಯಕ್ಕೆ ಬಂದ ದಾನಿಗಳಿಗೂ ಈ ಮೂಲಕ ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇವೆ ಎಂದು ನಮ್ಮ ಕೊಡಗು ತಂಡ ತಿಳಿಸಿದೆ.


No comments
Post a Comment