ಕೊಡಗು ಜಿಲ್ಲೆಯಲ್ಲಿ ಅರ್ಧ ಶತಕ ಬಾರಿಸಿದ ಕೊರೊನಾ: ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆ.

No comments

ವರದಿ : ಕೆ.ಎಂ ಇಸ್ಮಾಯಿಲ್ ಕಂಡಕರೆ
ಮಡಿಕೇರಿ (Times Of Coorg) :ಕೊಡಗು ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 13ಜನರಿಗೆ ಕೊರೊನಾ ಸೋಂಕು ತಗುಲಿದ್ದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅರ್ಧ ಶತಕ ದಾಟಿ, 60ಕ್ಕೆ ಏರಿಕೆಯಾಗಿದೆ.
ಇದುವರೆಗೆ ಮೂವರು ಡಿಸ್ಟಾರ್ಜ್ ಆಗಿದ್ದು ,57 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೊಡಗು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನೆಲ್ಲಿಹುದಿಕೇರಿ ಸೋಂಕಿತನ ಸಂಪರ್ಕದಿಂದ 09 ಜನರಿಗೆ  ಕೊರೊನಾ ಸೋಂಕು

ಸೋಮವಾರಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಈ ಹಿಂದೆ ಸೋಂಕು ತಗುಲಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ, ಬುಧವಾರ ಒಂದೇ ದಿನ  ವಿರಾಜಪೇಟೆ ತಾಲ್ಲೂಕಿನ ಹುಂಡಿ ಗ್ರಾಮದ  09 ಮಂದಿಗೆ  ಕೊರೊನಾ ಸೋಂಕು ವಕ್ಕರಿಸಿದ್ದು, ಹುಂಡಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಸೋಂಕಿತನ ಸಂಪರ್ಕದಿಂದ ಹುಂಡಿ ಗ್ರಾಮದ 03 ತಿಂಗಳು ಮಗು , ಆರು ವರ್ಷದ ಹಾಗೂ 11 ವರ್ಷದ ಮಕ್ಕಳಿಗೂ ಕೂಡ ಕೊರೊನಾ ಸೋಂಕು ತಗುಲಿದೆ.

ಈ ಹಿಂದೆ ಸೋಂಕು ತಗುಲಿದ್ದ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಶಿರಂಗಾಲದ  ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ ಗುಂಡೂರಾವ್ ಬಡಾವಣೆಯ 47 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದ್ದು,ಶನಿವಾರಸಂತೆಯ ಗುಂಡೂರಾವ್ ಬಡಾವಣೆಯೂ ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಟ್ಟಿದೆ.ಹಾಗೂ ಶಿರಂಗಾಲದ ಸೋಂಕಿತನ ದ್ವಿತೀಯ ಸಂಪರ್ಕದಿಂದ ಸೋಮವಾರಪೇಟೆ ತಾಲ್ಲೂಕಿನ ಬಳಗುಂದ ಗ್ರಾಮದ 47 ವರ್ಷದ ಪುರುಷರೊಬ್ಬರಿಗೂ ಹಾಗೂ ಅದೇ ಗ್ರಾಮದ 37 ವರ್ಷದ ಸ್ತ್ರೀಯೊಬ್ಬರಿಗೆ ಸೋಂಕು ತಗುಲಿದೆ.


ವಿರಾಜಪೇಟೆ ತಾಲ್ಲೂಕಿನ ತಿತಿಮತಿ ಗ್ರಾಮದ 65 ವರ್ಷದ ವ್ಯಕ್ತಿಯೊಬ್ಬರಿಗೆ ಜ್ವರದ ಲಕ್ಷಣವಿದ್ದು ,ಅವರಿಗೂ ಕೂಡ ಬುಧವಾರ ಸೋಂಕು ತಗುಲಿದ್ದು ಧೃಡಪಟ್ಟಿದೆ‌.
ತಿತಿಮತಿ‌ ಕೂಡ ಹೊಸದಾಗಿ ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 24 ಪ್ರದೇಶಗಳು ಕಂಟೈನ್ಮೆಂಟ್ ಝೋನ್  ವ್ಯಾಪ್ತಿಗೆ ಒಳಪಟ್ಟಿದೆ.

No comments

Post a Comment