ಕಾರ್ಮಾಡು ವಲಯ ಕಾಂಗ್ರೆಸ್ ವತಿಯಿಂದ ಪದಗ್ರಹಣ ಕಾರ್ಯಕ್ರಮ ವೀಕ್ಷಣೆ

No comments

ಅಮ್ಮತ್ತಿ (Times Of Coorg) :- ಅಮ್ಮತ್ತಿ ಕಾರ್ಮಾಡು ವಲಯ ಕಾಂಗ್ರೆಸ್ ವತಿಯಿಂದ ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮವನ್ನು ನೇರ ವೀಕ್ಷಣೆ ಮಾಡಲಾಯಿತು.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಝೂಂ ಆಪ್ ಮೂಲಕ ನೂತನ ಕೆಪಿಸಿಸಿ ಅದ್ಯಕ್ಷರನ್ನು ಹಾಗು ಮೂರು ಕಾರ್ಯಾದ್ಯಕ್ಷರನ್ನು ಶುಭಹಾರೈಸಲಾಯಿತು.
ಈ ಸಂದರ್ಭ ಕಾರ್ಮಾಡು ವಲಯ ಕಾಂಗ್ರೆಸ್ ಅದ್ಯಕ್ಷರಾದ ಕುಟ್ಟಂಡ ಕೃಷ್ಣ , ಪ್ರಧಾನ ಕಾರ್ಯದರ್ಶಿ ಆಂತೋಣಿ ಪಿ.ಜೆ  , ವಿರಾಜಪೇಟೆ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಕೆ.ಎಂ. ಹಂಸ , ಮಹಿಳಾ ಕಂಗ್ರೆಸ್ ಮುಖಂಡರಾದ ಸರೋಜಿನಿ ಸೇರಿದಂತೆ ಹಲವಾರು ಗಣ್ಯರು-ಕಾರ್ಯಕರ್ತರು ಉಪಸ್ಥಿತರಿದ್ದರು.




No comments

Post a Comment