ಕೆಸರುಮಯವಾದ ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆ
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg): ಮೂರ್ನಾಡು ನಾಪೋಕ್ಲು ಸಂಪರ್ಕ ಮುಖ್ಯ ರಸ್ತೆ ಹೊದ್ದೂರು ಭಗವತಿ ಹರಿಜನ ಕಾಲೋನಿ ಬಳಿ ನೀರಿನ ಜಲ ಇರುವುದರಿಂದ ಇಲ್ಲಿಗೆ ಕಾಂಗ್ರೆಟ್ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಹಳೆಯ ಡಾಂಬರು ರಸ್ತೆ ಅಗೆದು 7 ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭಿಸಿದೆ ಇರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನ ಸಂಚರಿಸುತ್ತಿದ್ದು ಇದೀಗ ಕಾಮಗಾರಿ ಅರ್ಧದಲ್ಲೇ ಮೊಟಕು ಗಳಿಸಿರುವುದರಿಂದ ಮಳೆ ಬಂದು ರಸ್ತೆಯಲ್ಲಿ ಕೆಸರು ತುಂಬಿಕೊಂಡಿದ್ದು ರಸ್ತೆಯಲ್ಲ ಕೆಸರುಮಯವಾಗಿದೆ
ವಾಹನ ಸವಾರರಿಗೆ ಸಂಚಾರ ಸವಾಲಾಗಿದೆ. ಇದರ ಸಂಬಂಧ ಎರಡು ತಿಂಗಳ ಹಿಂದೆ ಪತ್ರಿಕೆಯಲ್ಲಿ ವರದಿಯಾಗಿದ್ದು ಈ ಸಂದರ್ಭದಲ್ಲಿ ಲಾಕ್ ಡೌನ್ ಕಾರಣ ಕಾರ್ಮಿಕರ ಕೊರತೆಯಿಂದ ಕಾಮಗಾರಿ ಕುಂಠಿತಗೊಂಡಿದ್ದು
ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಯಾದ ಶಿವರಾಂ ಮಾದ್ಯಮಕ್ಕೆ ಮಾಹಿತಿ ನೀಡಿದ್ದರು. ತದನಂತರ ಒಂದೆರಡುಬಾರಿ ಜೆಸಿಬಿ ಮುಖಾಂತರ ಮಣ್ಣು ತೆಗೆಯುವ ಕೆಲಸ ಮಾಡಿದ್ದರು. ನೀರಿನಲ್ಲಿ ಹೋಮ ಮಾಡಿದಂತೆ ಯಾವುದೇ ಪ್ರಯೋಜನವಾಗಲಿಲ್ಲ.
ಇದೀಗ ಮತ್ತೆ ಮಳೆ ಪ್ರಾರಂಭವಾಗಿ ಇಲ್ಲಿನ ಸಂಚಾರ ದುಸ್ತರವಾಗಿದೆ ಕಾಲ್ನಡಿಗೆ ಹಾಗೂ ದ್ವಿಚಕ್ರ ವಾಹನ ಸಂಚರಿಸುವುದೇ ದೊಡ್ಡ ಹರಸಾಹಸ ಪಡಬೇಕಾಗಿದೆ ಎಂದು ಈ ರಸ್ತೆಯಲ್ಲಿ ಸಂಚರಿಸುವವರ ಆಕ್ರೋಶ.
ಈ ರಸ್ತೆಯನ್ನು ಆದಷ್ಟು ಬೇಗ ಸಂಬಂಧಪಟ್ಟವರು ಕಾಳಜಿವಹಿಸಿ ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿ ಕೊಡದಿದ್ದಲ್ಲಿ ಬಾಳೆ ಗಿಡ ನೆಟ್ಟು ಉಗ್ರ ಪ್ರತಿಭಟನೆ ಮಾಡುವುದಾಗಿ ನಾಪೋಕ್ಲುವಿನ ಆಟೋ ಚಾಲಕರು ಹಾಗೂ ಸ್ಥಳೀಯರು ಎಚ್ಚರಿಕೆ ಕೊಟ್ಟಿರುತ್ತಾರೆ

No comments
Post a Comment