ನಾಪೋಕ್ಲು : ದುಬಾರಿಯಾಗಿರುವ ಕುರಿ ಮಾಂಸ

No comments

ವರಧಿ : ಹಾರಿಸ್ ನಾಪೋಕ್ಲು
          ನಾಪೋಕ್ಲು (Times Of Coorg): ನಾಪೋಕ್ಲು ವ್ಯಾಪ್ತಿಯಲ್ಲಿ ಕುರಿ ಮಾಂಸಕ್ಕೆ 600ರೂ ಆಗಿರೋದರಿಂದ ಬಡವರು ಕುರಿ ಮಾಂಸತಿನ್ನೊದು ಸ್ವಪ್ನವಾಗಿದೆ. ಮಾನ್ಯ ಜಿಲ್ಲಾಧಿಕಾರಿಯವರು ಕಳೆದ ಲಾಕ್ ಡೌನ್ ಸಂದರ್ಭದಲ್ಲಿ 450 ರು ಇದ್ದ ಕುರಿ ಮಾಂಸ ಕುರಿಗಳನ್ನು ಕೊಡಗಿನ ವ್ಯಾಪಾರಸ್ಥರು ಹೊರರಾಜ್ಯಗಳಿಂದ ತರಲು ಆಗದಿರೋದ್ದರಿಂದ ಸ್ಥಳೀಯಮಟ್ಟದಲ್ಲಿ ದುಬಾರಿ ಬೆಲೆಕೊಟ್ಟು ಖರೀದಿ ಮಾಡುತ್ತಿದ್ದರು.

 ಆದ್ದರಿಂದ ಮಾಂಸ ವ್ಯಾಪಾರಸ್ಥರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಯವರು ರೂ 600 ನಿಗದಿ ಪಡಿಸಿದ್ದರು ಈಗ ಕುರಿಸಾಗಾಟಕ್ಕೆ ಯಾವುದೇ ನಿರ್ಬಂಧ ಇಲ್ಲದಿದ್ದರೂ
ಜಿಲ್ಲಾಧಿಕಾರಗಳ  ಅಂದಿನ ತಾತ್ಕಾಲಿಕ  ಆದೇಶವನ್ನು ಬಂಡವಾಳವಾಗಿಸಿ  ಹೆಚ್ಚಿನ ದರಕ್ಕೆ  ಮಾಂಸ ಮಾರಾಟ ಮಾಡುತ್ತಿದ್ದು ಇದರಿಂದ  ದುಬಾರಿ ಬೆಲೆ ಕೊಟ್ಟು ಜನ ಸಾಮಾನ್ಯರು ಮಾಂಸ ತಿನ್ನೋದು ಈ ಕೊರೋನಾ ಸಂಕಷ್ಟದಲ್ಲಿ ಕೆಲಸವಿಲ್ಲದೇ ಇರೋದರಿಂದ ಕಷ್ಟವಾಗಿದೆ
ಆದ್ದರಿಂದ ಜಿಲ್ಲಾಡಳಿತ ಅತೀ ಶೀಘ್ರದಲ್ಲಿ ಮಾಂಸ ಮಾರಾಟದಬಗ್ಗೆ ಒಂದು ದರ ನಿಗದಿ ಪಡಿಸಬೇಕೆಂದು ನಾಪೋಕ್ಲು ಸುತ್ತಮುತ್ತಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

No comments

Post a Comment