ಕೊಡಗು ಜಿಲ್ಲೆಯಲ್ಲಿ ಇಂದು 2 ಹೊಸ ಕೋವಿಡ್ ಪ್ರಕರಣಗಳು ಧೃಢ

No comments

ಮಡಿಕೇರಿ (Times Of Coorg):-ಕೋವಿಡ್-19 ಸಂಬಂಧಿಸಿದಂತೆ ಮಂಗಳವಾರ 2 ಪ್ರಕರಣ ವರದಿಯಾಗಿದೆ. ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಬಳಿಯ ಹುಲುಸೆ ಗ್ರಾಮದ 30 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಡಿಕೇರಿ ನಗರದ ದೇಚೂರು ಬಡಾವಣೆಯ 45 ವರ್ಷದ ಪುರುಷನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಒಟ್ಟಾರೆ ಇದುವರೆಗೆ 356 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರಲ್ಲಿ 266 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 84 ಸಕ್ರಿಯ ಪ್ರಕರಣಗಳು ಇವೆ. 6 ಮಂದಿ ಮೃತಪಟ್ಟಿದ್ದಾರೆ. 80 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment