ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ.76 ಕ್ಕೆ ಏರಿಕೆ

No comments

     ಮಡಿಕೇರಿ (Times Of Coorg):-ಕೋವಿಡ್–19 ಸೋಂಕಿತ ಪ್ರಕರಣಗಳು ಎಲ್ಲಾ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಸೋಂಕಿತರ ಉತ್ತಮ ಆರೈಕೆ ಮತ್ತು ಸೂಕ್ತ ಚಿಕಿತ್ಸೆಯಿಂದಾಗಿ ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಬಿಡುಗಡೆ ಪ್ರಮಾಣ ಶೇ. 76 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

     ಕೊಡಗು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿರುವ ಐಸಿಯು ವಿಭಾಗದ ಹಾಸಿಗೆ ಸಾಮಥ್ರ್ಯವನ್ನು 56 ಹಾಸಿಗೆಗೆ ಹೆಚ್ಚಿಸಲಾಗಿದೆ. ಕೋವಿಡ್ ಐಸಿಯು ವಿಭಾಗವನ್ನು ಅರವಳಿಕೆ (ಅನಸ್ತೇಶಿಯಾ) ವಿಭಾಗದಿಂದ ನಿಭಾಯಿಸಲಾಗುತ್ತಿದೆ. ಈ ವಿಭಾಗದಿಂದ ಕೋವಿಡ್ ಸಂಬಂಧಿತ ತುರ್ತು ಕ್ರಮಕ್ಕಾಗಿ ಹೆಚ್ಚುವರಿ ಸಿಬ್ಬಂದಿ ದಾದಿ (ಸ್ಟಾಫ್ ನರ್ಸ್) ಗಳಿಗೆ ತರಬೇತಿ ನೀಡಲಾಗುತ್ತಿದೆ.

     ಜಿಲ್ಲೆಯಲ್ಲಿ ಈವರೆಗೆ ಒಟ್ಟು 356 ಕೋವಿಡ್ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಕಳೆದ ತಿಂಗಳಿನಲ್ಲಿ 30 ಮಂದಿ ಕೋವಿಡ್ ಐಸಿಯುನಲ್ಲಿ ದಾಖಲಾಗಿರುತ್ತಾರೆ. 2 ಪ್ರಕರಣದಲ್ಲಿ ಮೃತರಾಗಿದ್ದು, ಹಾಲಿ 5 ಮಂದಿ ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 23 ಮಂದಿ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.



No comments

Post a Comment