ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ 09 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಎಮ್ಮೆಮಾಡುವಿನ ಮಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 68 ಮತ್ತು 39 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.
ಮಡಿಕೇರಿಯ ಪೋಸ್ಟಲ್ ಕ್ವಾರ್ಟಸ್‍ನಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 46 ವರ್ಷದ ಮಹಿಳೆ ಮತ್ತು 18 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆಯ ಸುಂಟಿಕೊಪ್ಪದ ಬಿಎಂ ರಸ್ತೆಯ ಮಯೂರ ಕಾಂಪ್ಲೆಕ್ಸ್‍ನ 36 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ಕುಶಾಲನಗರ ಹುಲುಸೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 65 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆಯ ಸಿದ್ದಾಪುರ ಮಾರುಕಟ್ಟೆಯ 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಈ ಹಿಂದೆ ಸೋಂಕು ದೃಢಪಟ್ಟ ಪೋಸ್ಟಲ್ ಕ್ವಾರ್ಟರ್ಸ್‍ನ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ ಮಡಿಕೇರಿಯ ಓಂಕಾರೇಶ್ವರ ರಸ್ತೆಯ 36 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ 5 ಕಂಟೈನ್‍ಮೆಂಟ್ ವಲಯಗಳನ್ನು ಹೊಸದಾಗಿ ತೆರೆಯಲಾಗಿದೆ. ಮಯೂರ ಕಾಂಪ್ಲೆಕ್ಸ್ ಬಿ.ಎಂ.ರಸ್ತೆ, ಸುಂಟಿಕೊಪ್ಪ, ಸೋಮವಾರಪೇಟೆ, ಮಸೀದಿ ಹತ್ತಿರ, ಎಮ್ಮೆಮಾಡು, ನಾಪೋಕ್ಲು ಮಾರುಕಟ್ಟೆ ಸಿದ್ದಾಪುರ, ವಿರಾಜಪೇಟೆ, ಜಿ.ಟಿ ಶಾಲೆ ಹಿಂಭಾಗ, ಓಂಕಾರೇಶ್ವರ ದೇವಾಲಯ ರಸ್ತೆ, ಮಡಿಕೇರಿ ಮತ್ತು ಭರತ್ ಬ್ಯಾಂಗಲ್ಸ್ ಸಮೀಪ ಮಹದೇವಪೇಟೆ ಮಡಿಕೇರಿಯಲ್ಲಿ ಹೊಸ ಕಂಟೈನ್‍ಮೆಂಟ್ ವಲಯಗಳನ್ನು ತೆರೆಯಲಾಗಿದೆ.
ಈ ಸಂಬಂಧ ಜಿಲ್ಲೆಯಲ್ಲಿ ಒಟ್ಟು 323 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 246 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ ಜಿಲ್ಲೆಯಲ್ಲಿ 72 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, 05 ಮಂದಿ ಕೋವಿಡ್-19 ನಿಂದ ಮೃತರಾಗಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಒಟ್ಟು 105 ಕಂಟೈನ್‍ಮೆಂಟ್ ವಲಯಗಳಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments
Post a Comment