ವರದಿ : ಚಂದನ್ ನಂದರಬೆಟ್ಟು
ಮಡಿಕೇರಿ (Times Of Coorg) : ಶಿಕ್ಷಣ, ಸಂಘಟನೆ, ಹೋರಾಟ, ರಾಜ್ಯಾಧಿಕಾರವನ್ನು ಧ್ಯೇಯವನ್ನಾಗಿಸಿಕೊಂಡಿರುವ ಕರ್ನಾಟಕ
ದಲಿತ ಸಂಘರ್ಷ ಸಮಿತಿಯಿಂದ ಕೊಡಗು ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಬೆಂಗಳೂರಿಗೆ ವರ್ಗಾವಣೆಗೊಳ್ಳುತ್ತಿರುವ ಪೋಲೀಸ್ ವರಿಷ್ಠಾಧಿಕಾರಿಗಳಾದ ಡಾ.ಸುಮನ್ ಡಿ ಪನ್ನೇಕರ್ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಕೊಡಗು ಜಿಲ್ಲೆಯಲ್ಲಿ ಸುಮನ್ ಪನ್ನೇಕರ್ ಅವರು ನೀಡಿದ ಅತ್ಯುತ್ತಮ ಸೇವೆಯು ಜನರ ಮನದಲ್ಲಿ ಅಚ್ಚೊತ್ತಿದೆ. ಈ ವರ್ಗಾವಣೆಯು ಬೇಸರ ಉಂಟುಮಾಡಿದೆ ಎಂದು ಡಿ.ಎಸ್ ಎಸ್ ನ ಕೊಡಗು ಜಿಲ್ಲಾ ಸಂಚಾಲಕರಾದ ದಿವಾಕರ್ ಹೇಳಿದರು. ನಂತರ ಡಿ ಎಸ್ ಎಸ್ ನ ವತಿಯಿಂದ ನಿರ್ಗಮಿತ ವರಿಷ್ಠಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.
ಸನ್ಮಾನ ಸ್ವಿಕರಿಸಿ ಡಿ.ಎಸ್ ಎಸ್ ನ ಕುರಿತು ಸದಭಿಪ್ರಾಯ ವ್ಯಕ್ತಪಡಿಸಿದ ಎಸ್.ಪಿ, ಜನರ ಸಂಕಷ್ಟಗಳಿಗೆ ಜೊತೆಯಾಗಿ ನಿಂತು ಅವರನ್ನು ಚೇತರಿಸಿಕೊಳ್ಳುವಂತೆ ಮಾಡಿದ್ದಲ್ಲದೆ, ಕೊರೋನಾ ಪಿಡುಗಿನ ಸಮಯದಲ್ಲಿ ನಡೆಸಿದ ಸಾಮಾಜಿಕ ಕಾರ್ಯ ಪ್ರಶಂಸನೀಯ ಎಂದರು.
ಸರಳವಾಗಿ ನಡೆಸಿದ ಈ ಕಾರ್ಯಕ್ರಮದಲ್ಲಿ ಡಿ.ಎಸ್.ಎಸ್ ಕರ್ನಾಟಕ ಸಮಿತಿಯ ವಿಭಾಗೀಯ ಸಂಚಾಲಕರಾದ ಎನ್. ವೀರಭದ್ರಯ್ಯ, ಜಿಲ್ಲಾ ಸಂಚಾಲಕರಾದ ದಿವಾಕರ್ ಹೆಚ್.ಎಲ್, ತಾಲೂಕು ಸಂಚಾಲಕರಾದ ದೀಪಕ್.ಎ.ಪಿ ಹಾಗು ನಗರ ಸಂಚಾಲಕರಾದ ಸಿದ್ದೇಶ್ವರ ಹಾಜರಿದ್ದರು.

No comments
Post a Comment