ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ ಡಿ ನಾಗರಾಜು ಅವರಿಗೆ ಬೀಳ್ಕೊಡುಗೆ ಸಮಾರಂಭ

No comments

ವರದಿ : ಹನೀಪ್ ಕೊಡ್ಲಿಪೇಟೆ

ಕೊಡ್ಲಿಪೇಟೆ (Times Of Coorg) :ಕೊಡ್ಲಿಪೇಟೆ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿಯಾಗಿ  ಸೇವೆ ಸಲ್ಲಿಸಿ ನಿವೃತಿಯಾಗುತ್ತಿರುವ ಕೆ .ಡಿ ನಾಗರಾಜು ರವರನ್ನು ಸನ್ಮಾನಿಸಿ ಅದ್ದೂರಿಯಾಗಿ ಬೀಳ್ಕೊಡಲಾಯಿತು.

ನಾಗರಾಜು ರವರು 1980 ರಲ್ಲಿ  ದಿನಗೂಲಿ ನೌಕರರಾಗಿ ಸಹಕಾರ ಸಂಘದಲ್ಲಿ ತಮ್ಮ ವೃತ್ತಿ ಜೀವನ ಆರಂಬಿಸಿದರು ತಮ್ಮ ದಕ್ಷ ಸೇವೆಯಿಂದ ವಿವಿಧ ಹುದ್ದೆ ಅಲಂಕರಿಸಿ  2015 ರಲ್ಲಿ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಾಗಿ ಬಡ್ತಿ ಹೊಂದಿರುತ್ತಾರೆ,  ತಮ್ಮ ಸೃಜನ ಶೀಲತೆಯಿಂದ ಆಡಳಿತ ಮಂಡಳಿಯ ಮತ್ತು ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದರು .ಕೊಡ್ಲಿಪೇಟೆ ಸಹಕಾರ ಸಂಘವೂ  ಹೆಚ್ಚು ಸಾಲ ಕೊಟ್ಟಿದ್ದು ಮಾತ್ರ ವಲ್ಲದೆ ಸಾಲ ವಸೂಲಿ ಮಾಡುವುದರಲ್ಲೂ ಪ್ರಶಂಸೆಗೆ ಪಾತ್ರರಾಗಿದ್ದರು.


ಬ್ಯಾಂಕ್ ಅದ್ಯಕ್ಷರಾದ ಎಸ್.ಡಿ.ತಮ್ಮಯ್ಯ ನವರು  ಕೊಡಗು ಜಿಲ್ಲಾ ಡಿ ಸಿ ಸಿ ಬ್ಯಾಂಕಿನ ನಿರ್ದೆಶಕರಾದ ಬಿ.ಕೆ .ಚಿನ್ನಪ್ಪ , ಹಾಗೂ ಉಪಾದ್ಯಕ್ಷರಾದ ಬಿ‌.ಕೆ.ಯತೀಶ್ ರವರು ಶಾಲು  ಹೊದಿಸಿ ಹಾರ ಹಾಕಿ ಸನ್ಮಾನಿಸಿದರು,

ಎಲ್ಲಾ ನಿರ್ದೆಶಕರುಗಳು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ಶಾಲು ಹೊದಿಸಿ ನಾಗರಾಜ್ ರವರ ದಕ್ಷ ಸೇವೆಯನ್ನು ವಿವರಿಸಿ ತಮ್ಮ ನಿವೃತ್ತಿ ಜೀವನವೂ ಸಂತೋಷವಾಗಿ ಸಾಗಲಿ ಎಂದು ಶುಭ ಹಾರೈಸಿದರು ,ನಿರ್ದೆಶಕರುಗಳಾದ ಕೆ.ಸಿ ಪ್ರಸನ್ನ,  ವಹಾಬ್, ತೇಜ್ ಕುಮಾರ್ ,ಸುಬ್ರಮಣ್ಯ ,ಆಶೋಕ್ ,ರಾಜು, ಮಲ್ಲೇಶ್ ,ರಂಜಿತಾ ಲೋಕೇಶ್, ಭಾನುಮತಿ ಜಯರಾಜ್ ,ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರೂ.ಬ್ಯಾಂಕಿನ ಮುಂದಿನ ಮುಖ್ಯ  ಕಾರ್ಯನಿರ್ವಾಹಕರಾಗಿ ಮುಂಬಡ್ತಿ ಆಧಾರದಲ್ಲಿ ಸುರೇಶ್ ರವರು ಕಾರ್ಯನಿರ್ವಹಿಸಲಿದ್ದಾರೆಂದು ಆಡಳಿತ ಮಂಡಳಿಯವರು ತಿಳಿಸಿದರು.




No comments

Post a Comment