ಡಿ.ಕೆ.ಶಿ. ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ನಡೆಸಿದ ವಿರಾಜಪೇಟೆ ಬ್ಲಾಕ್ ಕಾಂಗ್ರೇಸ್
ವಿರಾಜಪೇಟೆ (Times Of Coorg) : ಕೆ.ಪಿ.ಸಿ.ಸಿ ರಾಜ್ಯ ಅಧ್ಯಕ್ಷರಾಗಿ ಪದವಿ ಸ್ವೀಕಾರ ಸಮಾರಂಭದ ನೇರ ಪ್ರಸಾರ ಎಲ್ಲಾ ವಲಯಗಳಲ್ಲಿ ವೀಕ್ಷಣೆ ಮಾಡಲು ಸಂಭಂದಿಸಿದಂತೆ ವಿರಾಜಪೇಟೆ ಬ್ಲಾಕ್ ಕಾಂಗ್ರೇಸ್ ವತಿಯಿಂದ ಇಂದು ಪೂರ್ವಭಾವಿ ಸಭೆ ನಡೆಸಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೇಸ್ ವತಿಯಿಂದ ಇಂದು ನಗರದ ಗಣಪತಿ ಅರ್ಕಿಡ್ ಸಭಾಂಗಣದಲ್ಲಿ ನಡೆದ ಡಿ.ಕೆ.ಶಿ.ಪದಗ್ರಹಣ ಸಮಾರಂಭದ ನೇರ ಪ್ರಸಾರ ಕಾರ್ಯಕ್ರಮವನ್ನು ವಿಕ್ಷಣೆಗೆ ರೂಪುರೇಷೆಗಳ ಬಗ್ಗೆ ಪೂರ್ವಭಾವಿ ಸಭೆ ನಡೆಸಿದರು.
ಸಮಾರಂಭದಲ್ಲಿ ಮಾತನಾಡಿದ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು, ಡಿ.ಕೆ.ಶಿವಕುಮಾರ್ ಅವರು ದಿನಾಂಕ ಜುಲೈ 02 ರಂದು ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭ ಕೆ..ಪಿ.ಸಿ,ಸಿ ಕಛೇರಿಯಲ್ಲಿ ನಡೆಯಲಿದೆ.
ಕೊವಿಡ್ 19 ಸೊಂಕು ಹಿನ್ನಲೆಯಲ್ಲಿ ಕೆಲವು ರಾಜ್ಯ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುವುದರಿಂದ ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ನೇರ ಪ್ರಸಾರದ ಮೂಲಕ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಲಯದಲ್ಲಿ ಟಿ.ವಿ ಪರದೆಯ ಮೇಲೆ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.
ಕಾರ್ಯಕರ್ತರು ಶುಭಹಾರೈಸುವಂತೆ ಮನವಿ ಮಾಡಿದರು.
ಕೊಡಗು ಕಾಂಗ್ರೇಸ್ ಪಕ್ಷದ ವೀಕ್ಷಕರಾಗಿ ಆಗಮಿಸಿದ್ದ ಮಂಜುಳ ರಾಜ್ ಅವರು ಮಾತನಾಡಿ ಪಕ್ಷದ ಬಲವರ್ಧನೆಗೆ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ. ಇವರ ಸಾರ ಥ್ಯದಲ್ಲಿ ಮುಂದಿನ ಚುನಾವಣೆ ಎದುರಿಸುವಂತಾಗಿ ರಾಜ್ಯದಲ್ಲಿ ಮ ತ್ತೋಮ್ಮೆ ಕಾಂಗ್ರೇಸ್ ಪಕ್ಷವು ಅಧಿಕಾರ ನಡೆಸುತ್ತದೆ. ನೇರ ಪ್ರಸಾರ ವೀಕ್ಷಣೆ ಮಾಡಿ ಕಾರ್ಯಕರ್ತರು ಶುಭಹಾರೈಸಿ, ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಕರೆ ನೀಡಿದರು.
ಕೊಡಗು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಕೆ.ಕೆ. ಮಂಜುನಾಥ್ ಕುಮಾರ್ ಅವರು ಮಾತನಾಡಿ ಪಕ್ಷದ ರಾಜ್ಯ ಪ್ರಧಾನ ಹುದ್ದೆ ಅಲಂಕರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರ ಸಮಾರಂಭ ಕಾರ್ಯಕ್ರಮದ ನೇರ ಪ್ರಸಾರ ಕೊಡಗು ಜಿಲ್ಲೆಯ ಎಲ್ಲಾ ವಲಯದಲ್ಲಿ ಎಕಕಾಲಕ್ಕೆ ಸಮಾರಂಭ ಅಯೋಜಿಸಿ ಕಾರ್ಯಕರ್ತರುಗಳಿಗೆ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ಪ್ರಧಾನ ಕಛೇರಿಯಲ್ಲಿ ಕಾರ್ಯಕ್ರಮ ನಡೆಯುವಂತೆ ವಲಯಗಳಲ್ಲಿ ಅಯೋಜಿಸುವ ಕಾರ್ಯಕ್ರಮದಲ್ಲಯೂ ಕಾರ್ಯಕರ್ತರು ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ವಿರಾಜಪೇಟೆ ಬ್ಲಾಕ್ ನಲ್ಲಿ ಒಟ್ಟು 18 ವಲಯಗಳಿದ್ದು ಒಟ್ಟು 20 ಸ್ಥಳಗಳಲ್ಲಿ ಪದಗ್ರಹಣ ಸಮಾರಂಭದ ವಿಕ್ಷಣೆ ಕಾರ್ಯಕ್ರಮ ಅಯೋಜಿಸಲಾಗಿದೆ. ವಲಯ ಅಧ್ಯಕ್ಷರು ಮತ್ತು ಕಾರ್ಯಕರ್ತರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗಿದ್ದು, ಕೊರೊನಾ ಸೋಂಕು ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿಕೊಂಡು ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಕಾಂಗ್ರೆಸ್ ನಗರ ಅದ್ಯಕ್ಷ ಜಿ.ಜಿ ಮೊಹನ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಪೊನ್ನಕ್ಕಿ, ಸಾಮಾಜಿಕ ಜಾಲಾತಾಣದ ಮೈಸೂರು ಘಟಕದ ಮುಖ್ಯಸ್ಥ ಚಿಣ್ಣಪ್ಪ, ಬ್ಲಾಕ್ ಉಸ್ತುವಾರಿ ಪಿ.ರಾಜು ಹಾಗೂ ಪಕ್ಷದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರು, ಪಟ್ಟಣ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಯುವ ಕಾಂಗ್ರೇಸ್ ಪಧಾಧಿಕಾರಿಗಳು, ಕಾರ್ಯಕರ್ತರು ಹಿತೈಷಿಗಳು ಪಕ್ಷದ ಮುಖಂಡರು ಹಾಜರಿದ್ದರು.


No comments
Post a Comment