ವರದಿ : ಚಂದನ್ ನಂದರಬೆಟ್ಟು
ಮಡಿಕೇರಿ (Times Of Coorg) : ಭಾರತ್ ಸ್ಕೌಟ್ಸ್ ಹಾಗು ಗೈಡ್ಸ್ ನ ವತಿಯಿಂದ ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ ಪನ್ನೇಕರ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಡೆಸಲಾಯಿತು ಸರಳವಾಗಿ ವರಿಷ್ಠಾಧಿಕಾರಿಗಳ ವಸತಿ ಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎರಡು ವರ್ಷಗಳ ಅವಧಿಯಲ್ಲಿ ಪನ್ನೇಕರ್ ಅವರು ಕೊಡಗಿನಲ್ಲಿ ನಡೆಸಿದ ನಿಷ್ಠಾವಂತ ಹಾಗು ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಆತ್ಮೀಯವಾಗಿ ಸನ್ಮಾನಿಸಲಾಯ್ತು. ಕೊಡಗು ಜಿಲ್ಲಾ ಸ್ಕೌಟ್ಸ್ ಗೈಡ್ಸ್ ನ ಉಪಾಧ್ಯಕ್ಷರಾದ ಕೆ.ಟಿ ಬೇಬಿ ಮ್ಯಾಥ್ಯೂ ಮಾತನಾಡಿ ಎರಡು ವರ್ಷಗಳ ಕಾಲ ಕೊಡಗಿನ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾ, ನೆರೆ ಸಂಕಷ್ಟ ಕಾಲದಲ್ಲಿ ಮಾಡಿದ ಸೇವೆ ಅತ್ಯಧ್ಭುತವಾದುದೆಂದರು. ಕೊಡಗು ಜಿಲ್ಲಾ ಸ್ಕೌಟ್ಸ್ ಗೈಡ್ಸ್ ನ ಪ್ರಧಾನ ಆಯುಕ್ತರು ಹಾಗು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿರುವ ಪಿ.ಎಸ್ ಮಚ್ಚಾಡೋ ಅವರು ವರಿಷ್ಠಾಧಿಕಾರಿಗಳು ವರ್ಗಾವಣೆಗೊಂಡು ತೆರಳುತ್ತಿರುವುದು ನೋವಿನ ಸಂಗತಿ. ಮುಂದಿನ ಅವರ ಭವಿಷ್ಯಕ್ಕೆ ಒಳಿತಾಗಲಿ ಎಂದರು.
ಸನ್ಮಾನದ ನಂತರ ಮಾತನಾಡಿದ ಪನ್ನೇಕರ್ ಅವರು ಭಾರತ್ ಸ್ಕೌಟ್ಸ್ ಗೈಡ್ಸ್ ಬಹಳ ಒಳ್ಳೆಯ ಸೇವಾ ಸಂಸ್ಥೆ. ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸ್ಕೌಟ್ಸ್ ಗೈಡ್ಸ್ ಯಾವುದೇ ಆಕಾಂಕ್ಷೆಗಳಿಲ್ಲದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದು ಪ್ರಶಂಸನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ ಪನ್ನೇಕರ್ ಹಾಗು ಕುಟುಂಬ ವರ್ಗ, ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತರಾದ ಪಿ.ಎಸ್ ಮಚ್ಚಾಡೋ,ಸ್ಕೌಟ್ಸ್ ಗೈಡ್ಸ್ ಉಪಾಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯೂ, ಸ್ಕೌಟ್ಸ್ ನ ಜಿಲ್ಲಾ ಆಯುಕ್ತರಾದ ಶ್ರೀ ಜಿಮ್ಮಿ ಸಿಕ್ವೇರಾ,
ಸ್ಥಾನಿಕ ಆಯುಕ್ತರಾದ ಹೆಚ್ ಆರ್ ಮುತ್ತಪ್ಪ, ಕಾರ್ಯದರ್ಶಿ ಚಂದ್ರಶೇಖರ್ ಟಿ.ಎಸ್, ದೇವಾನಂದ ಎನ್.ಸಿ, ಶ್ರೀಮತಿ ವಸಂತಿ,ಜಿಲ್ಲಾ ಸಂಘಟಕರಾದ ಯು.ಸಿ. ದಮಯಂತಿ, ರಂಜನಿ ಹಾಜರಿದ್ದರು.ಜಿಮ್ಮಿ ಸಿಕ್ವೇರಾ ಅವರು ಸರ್ವರನ್ನು ಸ್ವಾಗತಿಸಿ ವಂದಿಸಿದರು.


No comments
Post a Comment