ನೆಲ್ಯಹುದಿಕೇರಿ :ಅತ್ತಿಮಂಗಲ- ನಲ್ವತ್ತೇಕರೆ ಸಂಪರ್ಕದ ರಸ್ತೆ ಬಿಡಿಸುವಂತೆ ಒತ್ತಾಯ.

No comments
ಸಿದ್ದಾಪುರ (Times Of Coorg) :ಕಳೆದ ಐವತ್ತು ವರ್ಷಗಳಿಂದಲೂ ಸಂಚಾರ ಮಾಡುತ್ತಿದ್ದ ಸಂಪರ್ಕ ರಸ್ತೆಯನ್ನು  ಬೆಳೆಗಾರರೊಬ್ಬರು  ಗುಂಡಿ ತೆಗೆದು ಕಡಿತಗೊಳಿಸಿರುವುದನ್ನು ಬಿಡಿಸಿಕೊಡಬೇಕೆಂದು ಒತ್ತಾಯಿಸಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಮುಂದೆ (ಇಂದು ಜೂ 30)ರಂದು ಸಾಂಕೇತಿಕ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಗ್ರಾಮ ಹೋರಾಟ ಸಮಿತಿಯ ಸಂಚಾಲಕ ಪಿ.ಆರ್ ಭರತ್ ತಿಳಿಸಿದ್ದಾರೆ. ಗ್ರಾಮಸ್ಥರ ಸಭೆಯ ನಂತರ ಮಾತನಾಡಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿ ಮಂಗಲ ಮುಖ್ಯ ರಸ್ತೆಯಿಂದ ನಲ್ವತ್ತೇಕರೆ, ಬರಡಿ, ಕಾಲೋನಿಗೆ ತೆರಳುವ ಏಕೈಕ ರಸ್ತೆಯಾಗಿ ಕಳೆದ  50  ವರ್ಷಗಳಿಂದಲೂ  ಸಾರ್ವಜನಿಕರು. ವಾಹನ ಸವಾರರು ಸಂಚರಿಸುತ್ತಿದ್ದರು. ಈ ರಸ್ತೆಗೆ ಕಳೆದ ಹಲವು ವರ್ಷಗಳಿಂದಲೂ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಶಾಸಕರ ನಿಧಿಯಿಂದಲೂ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿತ್ತು.ಈ ರಸ್ತೆಯನ್ನು  ನಂಬಿ  ಸಾವಿರಾರು ಕುಟುಂಬಗಳು ಅವಲಂಬಿತರಾಗಿದ್ದರು.

ಇತ್ತೀಚೆಗೆ ರಸ್ತೆ ಗುಂಡಿ ಮಯವಾಗಿ ನಡೆದಾಡಲೂ ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಸಾರ್ವಜನಿಕರು ರಸ್ತೆ ಸರಿಪಡಿಸಬೇಕೆಂದು ಪ್ರತಿಭಟನೆಯನ್ನು ಮಾಡಿದ್ದರು.ಇದೀಗ  ರಸ್ತೆಯ ಒಂದು ಭಾಗ ಬೆಳೆಗಾರ ರೊಬ್ಬರಿಗೆ ಸೇರಿದೆ ಎಂದು ಜೆಸಿಬಿ ಮೂಲಕ  ಗುಂಡಿ ತೆಗೆದು ರಸ್ತೆ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಬಿಡಿಸಿ ಕೊಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು ಕೂಡಲೇ ರಸ್ತೆ ಬಿಡಿಸಿಕೊಡಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಮುಂದೆ ಇಂದು ಗ್ರಾಮಸ್ಥರು ಸೇರಿ ಪ್ರತಿಭಟನೆ ಮಾಡಲಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕೆಂದು ಒತ್ತಾಯಿಸಿದ್ದಾರೆ.  ಈ ಸಂದರ್ಭ ಗ್ರಾಮಸ್ಥರಾದ ಬೀರಾನ್ ಕುಟ್ಟಿ, ಪ್ರಕಾಶ್, ಸಂತೋಷ್, ಮಣಿ, ಮುಸ್ತಫಾ' ಗಣಪತಿ,ಶಶಿ, ಯೊಗೇಶ್,ಜೋಸ್, ಕುಮಾರ್, ಕಿಶೋರ್  ಸೇರಿದಂತೆ ಮತ್ತಿತರರು ಇದ್ದರು .


No comments

Post a Comment