ಕೊಡ್ಲಿಪೇಟೆ ಎಸ್.ಎಸ್.ಎಲ್‌.ಸಿ ಪರೀಕ್ಷಾ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷರ ಭೇಟಿ

No comments

ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) :ಕೊಡ್ಲಿಪೇಟೆಯ ಎಸ್.ಎಸ್.ಎಲ್ ಸಿ ಪರೀಕ್ಷಾ ಕೆಂದ್ರಕ್ಕೆ ಸೋಮವಾರಪೇಟೆ  ಕ್ಷೇತ್ರ ಶಿಕ್ಷಣಾದಿಕಾರಿಗಳಾದ ಹೆಚ್.ಕೆ. ಪಾಂಡು ರವರು ಬೇಟಿ ನೀಡಿ, ಪರೀಕ್ಷಾ ಕೇಂದ್ರದಲ್ಲಿನ ವ್ಯವಸ್ಥೆ ಗಳ ಬಗ್ಗೆ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೆರ್ಯ ತುಂಬಿದರು.
ಪ್ರಶ್ನೆ ಪತ್ರಿಕೆ ಸರಬರಾಜು ಅಧಿಕಾರಿಯಾದಂಥಹ ಡಾ.ಸದಾಶಿವ ಪಲ್ಯದ್ ರವರು ಹಾಜರಿದ್ದರು.

ಪರೀಕ್ಷಾ ವಿದ್ಯಾರ್ಥಿಗಳಿಗೆ ಬಿಸ್ಕಟ್ ವಿತರಣೆ


ತಾಲೂಕು  ಶಿಕ್ಷಣಾಧಿಕಾರಿಯವರ ( ಬಿ ಇ ಓ) ಕೋರಿಕೆ ಮೇರೆಗೆ ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು  ಪರೀಕ್ಷಾ ಕೇಂದ್ರದಲ್ಲಿ ಎಸ್.ಎಸ್.ಎಲ್.ಎಸಿ. ಯ ಎಲ್ಲಾ 190 ವಿದ್ಯಾರ್ಥಿಗಳಿಗೆ  ತಾಲೂಕು ಪಂಚಾಯಿತಿ ಅಧ್ಯಕ್ಷರಾದ  ಶ್ರೀಮತಿ ಪುಷ್ಪ ರಾಜೇಶ್ ರವರು ಇಂದು ಬೆಳಿಗ್ಗೆ ಬಿಸ್ಕೇಟ್ ವಿತರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಆದಿಕ್ಷಕರಾದ ಅಬ್ದುಲ್ ರಬ್ಬ್ , ಸಿ.ಆರ್.ಪಿ‌‌. ಸುರೇಶ್, ಪರೀಕ್ಷಾ ಕೊಠಡಿ ಮೆಲ್ವಿಚಾರಕರಾದ ರಾಘವೆಂದ್ರ , ಮೊಬೈಲ್ ಸ್ವಾಧಿನದಿಕಾರಿಗಳಾದ ಫಯಾಝ್ ಮಾಸ್ಟರ್ ಹಾಗೂ ದೇವರಾಜೇ ಗೌಡ , ಪ್ರಶ್ನೆ ಪತ್ರಿಕೆ ಪಾಲಕರಾದ ಜಯಕುಮಾರ್ ಶನಿವಾರಸಂತೆ , ಸ್ಕೌಟ್ & ಗ್ಯೆಡ್ ಶಿಕ್ಷಕಿ ಆಶಾ ಶಿವಶಂಕರ್ ಹಾಜರಿದ್ದರು.



No comments

Post a Comment