ಬೆಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ವತಿಯಿಂದ ಕೋವಿಡ್-19 ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

No comments

ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) : ಕೊಡ್ಲಿಪೇಟೆ ಸಮೀಪದ ಬೆಸೂರು ಪ್ರಾಥಮಿಕ ಪತ್ತಿನ ಸಹಕಾರ ಬ್ಯಾಂಕ್ ವತಿಯಿಂದ ಕರೋನಾ ಸೋಂಕು ಹರಡದಂತೆ ರೋಗವನ್ನು ತಡೆಗಟ್ಟುವ ಬಗ್ಗೆ ಗ್ರಾಮಿಣ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಜನರಲ್ಲಿ ಜಾಗ್ರತಿ ಮೂಡಿಸುವ ಮೂಲಕ ಕರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ ಬೆಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶಾ ಕಾರ್ಯಕರ್ತರಾದ ಪಾರ್ವತಿ ,ವಿಜಯ , ಜ್ಯೋತಿ , ರತಿ ,ಉದಯಕುಮಾರಿ ,
ರವರುಗಳನ್ನು ಮೂರು ಸಾವಿರ ರೂಪಾಯಿಗಳ ಸಾಹಯ ಧನ ನೀಡಿ ಸನ್ಮಾನಿಸಲಾಯಿತು.

ಜಿಲ್ಲಾ ಸಹಕಾರ ಬ್ಯಾಂಕ್ ನ ಸೂಚನೆಯ ಮೇರೆಗೆ
ನಮ್ಮ ಸಂಘದ  ಎಲ್ಲಾ ನಿರ್ದೆಶಕರುಗಳ  ಸಭೆಯಲ್ಲಿ ತಿರ್ಮಾನಿಸಿ , ಈ ಸಂದ್ವಿಗ್ನ ಪರಿಸ್ಥಿತಿಯಲ್ಲಿ ಕರೋನಾ ಬೀತಿಯ ಹಿನ್ನಲೆಯಲ್ಲಿ ಜನರೊಂದಿಗೆ ನಿಂತು ಆತಂಕ ದೂರಮಾಡಿ ತಿಳುವಳಿಕೆ  ನೀಡುತ್ತಿರುವ  ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ನೀಡಿ ಪ್ರೊತ್ಸಾಹಿಸುವುದು ನಮ್ಮ ಕತ್ಯವ್ಯವನ್ನು ನಾವು ಮಾಡಿದ್ದೆವೆಂದು ಬ್ಯಾಂಕ್ ಅದ್ಯಕ್ಷರಾದ ಬಿ.ಕೆ‌.ವೆಂಕಟೇಶ್ ರವರು ತಿಳಿಸಿದರು .


ಉಪಾದ್ಯಕ್ಷರಾದ ರತ್ನಮ್ಮ, ನಿರ್ದೆಶಕರುಗಳಾದ ಹಾಲಪ್ಪ ,
ವಿರೂಪಾಕ್ಷ , ಶಂಕರಪ್ಪ ,ಚಂದ್ರಚಾರಿ , ಲೋಲಾಕ್ಷ ,ಚಂದ್ರಕಲಾ , ಕ್ರಷ್ಣ , ಕುಮಾರ ,ಪುರುಷೋತ್ತಮ ,
ಶಿವಣ್ಣ , ಬ್ಯಾಂಕ್ ಕಾರ್ಯ ನಿರ್ವಹಣಾದಿಕಾರಿ ಪುರುಷೊತ್ತಮ , ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



No comments

Post a Comment