ಅಮ್ಮತ್ತಿಯ ತಹಲೀಮುದ್ದೀನ್ ಮದ್ರಸದಲ್ಲಿ ಗಣರಾಜ್ಯೋತ್ಸವ ಆಚರಣೆ

No comments
 
         ಅಮ್ಮತ್ತಿ TOC :- ಆಮ್ಮತ್ತಿ ತಹಲೀಮುದ್ದೀನ್ ಮದ್ರಸಾ , ಸುನ್ನಿ‌ ಬಾಲ ಸಂಘ ಹಾಗು ಶಾಫೀ ಮುಸ್ಲಿಂ ಜಮಾಅತ್ ಇವರ ಸಂಯುಕ್ತ ಆಶ್ರಯದಲ್ಲಿ 71 ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತೌಸೀಫ್ ಅಹ್ಮದ್ ಸ್ವಾಗತ್ ಕೋರಿದರು.
ಅಮ್ಮತ್ತಿ ಮುಸ್ಲಿಂ ಜಮಾಅತ್ ಸಮಿತಿ ಸದಸ್ಯರು ಮತ್ತು ಅಧ್ಯಾಪಕ ವೃಂದದವರು ಸೇರಿ ಧ್ವಜಾರೋಹಣ ಮಾಡಿದರು.
ಅಮ್ಮತ್ತಿ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮುಹಮ್ಮದ್ ಮಾತನಾಡಿ 1947 ರಲ್ಲಿ ನಮ್ಮ ದೇಶ ಸ್ವಾತಂತ್ರ್ಯವಾದರೂ 1950 ರಲ್ಲಿ ಗಣರಾಜ್ಯವಾಯಿತು ಇದರ ವಾರ್ಷಿಕವನ್ನು ನಾವು ಪ್ರತಿವರ್ಷವೂ ಆಚರಿಸುತ್ತಿದ್ದೇವೆ ಎಂದರು.

ಮದ್ರಸಾ ಪ್ರಾಂಶುಪಾಲರಾದ ರಫೀಕ್ ಜ಼ೈನಿ ಮಾತನಾಡಿ ಸ್ವಾತಂತ್ರ್ಯ - ಗಣರಾಜ್ಯ ಇವೆರಡು ನಮ್ಮ ದೇಶದ ಕಣ್ಣುಗಳು , ಸಂವಿಧಾನ ರಚನೆಯ ವಾರ್ಷಿಕವನ್ನು ಆಚರಿಸುವ್ ಈ ಸಂದರ್ಭದಲ್ಲಿ ನಮ್ಮ ಸ್ವಾತಂತ್ರ್ಯವನ್ನು ಕೊಂಡಾಡಬೇಕಾಗಿದೆ , ನಮ್ಮ ಯಾವುದೇ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಹಕ್ಕು ಬೇರೆ ಯಾರಿಗೂ ಇಲ್ಲ ಎಂದರು.
ನಂತರ ಪ್ರತಿಯೊಬ್ಬರಿಂದ ಪ್ರತಿಜ್ಞೆ ಮಾಡಿಸಲಾಯಿತು.
ಹಾಗೂ ಸಿಹಿ ಹಂಚಲಾಯಿತು.
ಈ ಸಂದರ್ಭ ಅಮ್ಮತ್ತಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಉಸ್ಮಾನ್ , ಸುನ್ನೀ ಬಾಲ ಸಂಘದ ಪದಾಧಿಕಾರಿಗಳು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

No comments

Post a Comment