ಕೊಡಗಿನವರು ಕೇರಳದಲ್ಲಿ ಒಟ್ಟಾಗಿ ಸೇರಿ ಆಚರಣೆ ಮಾಡುವ ಬೈತೂರಪ್ಪ ದೇವರ ಉತ್ಸವ

No comments
ವರದಿ:-ಲಕ್ಷ್ಮೀಕಾಂತ್ ಕೋಮರಪ್ಪ

     ಸೋಮವಾರಪೇಟೆTOC:-ರಾಜ್ಯದ ಗಡಿಭಾಗದಲ್ಲಿ ದಿನನಿತ್ಯ ತಂಟೆತಕರಾರು ನಡೆಯುತ್ತಲೇ ಇರುತ್ತದೆ.ಆದರೆ ಕರ್ನಾಟಕದ ಕೊಡಗು-ಕೇರಳ ರಾಜ್ಯದ ಸಂಬಂಧ ಹಾಗಲ್ಲ.ಇಲ್ಲಿ ಎರಡು ರಾಜ್ಯಗಳ ನಡುವಿನ ಸಂಬಂಧ ಹೇಗಿದೆ ಎಂಬೂದಕ್ಕೆ ಕೊಡಗಿನವರು ಕೇರಳದಲ್ಲಿ  ಒಟ್ಟಾಗಿ ಸೇರಿ ಆಚರಣೆ ಮಾಡುವ ಬೈತೂರಪ್ಪ ದೇವರ ಉತ್ಸವವೇ ಸಾಕ್ಷಿ.
ಕೊಡಗಿನ ಪುಗ್ಗೇರ ಕುಟುಂಬದವರು ಈ ದೇವಾಲಯದ ತಕ್ಕಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತಿದ್ದು.ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಒಟ್ಟು 11 ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಕೊಡಗಿನವರು ಮೂರು ದಿನ ಪಾಲ್ಗೊಳ್ಳುತ್ತಾರೆ.
ಇದರಲ್ಲಿ ಜನವರಿ 24 ರಂದು ಮೊದಲ ಹಬ್ಬ ನಡೆಯುತ್ತದೆ. ಅದರಂತೆ ದೇವರಿಗೆ ವಿಶೇಷ ಪೂಜಾ ಕಾರ್ಯ ನಡೆದ ತಕ್ಷಣ ಸ್ಥಳೀಯ ಚಂಡೆ ವಾದ್ಯದೊಂದಿಗೆ ಆನೆಯ ಮೇಲೆ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿದ ನಂತರ ದೇವರು ಹೊತ್ತ ಬ್ರಹ್ಮಣರಿಂದ ಚಂಡೆ ವಾದ್ಯಕ್ಕೆ ನೃತ್ಯ ಪ್ರದರ್ಶನ ನಡೆಯಿತು.

ಅದರಂತೆ ಶನಿವಾರವು ಹಲವು ದೇವರ ಪೂಜಾ ಕಾರ್ಯಕ್ರಮ ನಡೆಯಿತು...
ಈ ದೇವಾಲಯದಲ್ಲಿ ಮೈಮೇಲೆ ದೇವರುಗಳು ಬರುತ್ತದೆ.ಅದು ಒಂದೆರಡು ದೇವೆತೆಗಳಲ್ಲ.ಬದಲಾಗಿ ನೂರಾರು ದೇವತೆಗಳು. 
ಒಂದು ಕೈಯಲ್ಲಿ ಕತ್ತಿ ಇನ್ನೊಂದು ಕೈಯಲ್ಲಿ ಬೆತ್ತ ಹಿಡಿದುಕೊಂಡು  ದೇವಾಲಯದಲ್ಲಿ ನೃತ್ಯ ಮಾಡುವುದೇ ನೋಡಲು ರೋಮಾಂಚನ ಹೌದು  ಕೊಡಗು ಜಿಲ್ಲೆಯಿಂದ ಆಗಮಿಸಿ  ಕೇರಳದಲ್ಲಿನ
ಮೂಲ ದೇವರ ಆರ್ಶೀವಾದ ಪಡೆಯಲು ಕಾತರದಿಂದ ಕಾಯುವ ದೇವತೆಗಳ ದೃಶ್ಯಗಳು ರೋಮಾಂಚನಗೊಳಿಸುತ್ತದೆ.
ನಮ್ಮ ನೆರೆಯ ರಾಜ್ಯ ಕೇರಳದ ಉಳ್ಳಿಕಲ್ ನಲ್ಲಿ.ಕೊಡಗಿನ ಜನತೆ ಇಂದಿಗೂ ಕೂಡ ದೇವರನ್ನು ನಂಬುತ್ತಾರೆ.ಅದರಲ್ಲೂ ಮೈಮೇಲೆ ಬರುವ ದೇವರುಗಳನ್ನು ಶ್ರದ್ದಾಭಕ್ತಿಯಿಂದ ನೋಡುತ್ತಾರೆ.ದೇವರು ಹೇಳುವುದೇ ಸರಿ ಎಂದು ನಂಬಿ ಜೀವನ ಸಹ ಇದೆ.
ಅದಕ್ಕೆ ಸಾಕ್ಷಿ ಕೊಡಗು ಜಿಲ್ಲೆಯ ಈ ದೇವತೆಗಳು. ಕೇರಳದ ಬೈತೂರಪ್ಪ ಕ್ಷೇತ್ರ ಎಂಬಲ್ಲಿ ಪ್ರತೀ ವರ್ಷ ಈ ದೇವರುಗಳು ಹಾಜರಾಗುತ್ತಾರೆ.ಇಲ್ಲಿ ಒಂದಕ್ಕಿಂತ ಮತ್ತೊಂದು ದೇವತೆ ಭಿನ್ನವಾಗಿರುತ್ತದೆ. ಕೊಡಗು ಹಾಗೂ ಕೇರಳ ರಾಜ್ಯದ ನಡುವೆ ಪುರಾತನ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.ಕೊಡಗಿನವರು ಕೇರಳದವರು ಒಟ್ಟಾಗಿ ಸೇರಿ ಆಚರಣೆ ಮಾಡುವ ಈ ಹಬ್ಬದಲ್ಲಿ ಕೊಡಗಿನ ಎಲ್ಲಾ ದೇವರುಗಳು ಒಂದೆಡೆ ಸೇರುವುದನ್ನು ನೋಡುವುದೇ ಒಂದು ರೋಮಾಂಚನಕಾರಿ ಅನುಭವ.
ಇಲ್ಲಿ ಮಹಿಳೆಯರು ಹೊರತಾಗಿಲ್ಲ.ಮಹಿಳೆಯರ ಮೇಲೂ ದೇವತೆಗಳ ಉಗ್ರಾವತಾರ ಇರುತ್ತದೆ.ಕೈಯಲ್ಲಿ ಕಡತ್ತಲೆ ಹಾಗೂ ಬೆತ್ತವನ್ನು ನೋಡಿದರೆ ಹತ್ತಿರ ಹೋಗುವುದಕ್ಕೂ ಭಯವಾಗುವಂತಹ ವಾತಾವರಣ ಇರುತ್ತದೆ.
 ಕೊಡಗಿನ ಎಲ್ಲಾ ದೇವಾಲಯಗಳಲ್ಲಿ ಮೈಮೇಲೆ ಬರುವಂತಹ ದೇವರುಗಳಿವೆ.ಈ ಎಲ್ಲಾ ದೇವರುಗಳು ಕೇರಳದಿಂದ ಬಂದಿರುತ್ತವೆ ಎಂಬೂದು ಇತಿಹಾಸ.ಆದ್ದರಿಂದ ಪ್ರತೀ ವರ್ಷ ಕೊಡಗಿನ ನೂರಾರು ದೇವಾನುದೇವತೆಗಳು ಬೈತೂರು ಉತ್ಸವಕ್ಕೆ ಬಂದು ಇಲ್ಲಿಯ ಕೋಮರತಚ್ಚ ದೇವರ ಆರ್ಶೀವಾದ ಪಡೆಯಲೇಬೇಕು.ಈ ದೇವರ ಅನುವಾದ ಪಡೆದರೆ ದೇವತೆಗಳ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.ಅದಕ್ಕೆ ಸಾಕ್ಷಿ ಇಲ್ಲಿ ನಾ ಮುಂದು ತಾ ಮುಂದು ಎಂದು ಮೂಲ ದೇವತೆಯ ಆರ್ಶೀವಾದ ಪಡೆಯಲು ಮುನ್ನಗುತ್ತಿರುವುದು.ಇದಕ್ಕೂ ಮೊದಲು ಅಂದರೆ ರಾತ್ರಿ ಇಲ್ಲಿ ಕಲಾತಂಡಗಳ ಅತ್ಯಾಕರ್ಷಕವಾದ ಮೆರವಣಿಗೆ ಕಣ್ಮನ ಸೆಳೆಯುತ್ತದೆ.ಸುಮಾರು ಐದು ಕಿ.ಮೀ ದೂರು ಈ ಕಲಾತಂಡಗಳು ಸಾಗಿ ಬಂದು ದೇವಾಲಯದಲ್ಲಿ ಸಮಾಪ್ತಿಯಾಗುತ್ತದೆ.ಕಲಾತಂಡಗಳ ನೃತ್ಯ,ಅವರ ವೇಷಭೂಷಣ,ಚಂಡೆವಾದ್ಯಗಳು ಇದನ್ನು ನೋಡುತ್ತಿದ್ದರೆ ದೇವರನಾಡಲ್ಲಿ ದೇವಲೋಕ ತೆರೆದುಕೊಂಡಂತಹ ಅನುಭವವಾಗುತ್ತದೆ.
ಒಟ್ಟಿನಲ್ಲಿ ಕೊಡಗು ಜಿಲ್ಲೆಯ ಆಚಾರ -ವಿಚಾರ ಹೇಗೆ ಭಿನ್ನವೋ ಅದೇ ರೀತಿ ಹಬ್ಬದ ಆಚರಣೆಯಲ್ಲೂ ವಿಶೇಷತೆಯನ್ನು ಮೆರೆದಿದೆ.ಅದರ ಜೊತೆಗೆ ಇಂದಿಗೂ ಕೇರಳ ರಾಜ್ಯದಲ್ಲೂ ತನ್ನ ಆಚರಣೆಯನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ..

ಕೊಡಗು ಜಿಲ್ಲೆಯ ಪ್ರತೀ ಗ್ರಾಮಗಳಲ್ಲಿ ವಿವಿಧ ಹೆಸರಿನ ದೇವಾಲಯಗಳಿವೆ.ಈ ದೇವಾಲಯಗಳಲ್ಲಿ ಮೈಮೇಲೆ ಬರುವಂತಹ ದೇವರುಗಳಿರುತ್ತವೆ.ಮೈಮೇಲೆ ಬರುವಂತಹ ಈ ಎಲ್ಲಾ ದೇವತೆಗಳು ಮಾತನಾಡುವುದು ಮಲಯಾಳ ಭಾಷೆಯಲ್ಲಿ.ಹೌದು,ಇತಿಹಾಸವನ್ನು ನೋಡಿದಾಗ ಕೊಡಗಿನಲ್ಲಿ ನೆಲೆನಿಂತಿರುವ ಎಲ್ಲಾ ದೇವತೆಗಳು ಕೇರಳದಿಂದ ಬಂದಿರುವುದು ಗೊತ್ತಾಗುತ್ತದೆ.ಆದ್ದರಿಂದ ಮೈಮೇಲೆ ದೇವರು ಬರುವಂತ ಪ್ರತೀಯೊಬ್ಬರು ಪ್ರತೀ ವರ್ಷ ಈ ದೇವಾಲಯಕ್ಕೆ ಬಂದು ಮೂಲ ದೇವರಾದ ಕೋಮರತಚ್ಚ ದೇವರ ಅನುವಾದ ಪಡೆಯುತ್ತವೆ..ಕೋಮರತಚ್ಚ ಎಂದರೆ ಈಶ್ವರ ಎಂದರ್ಥ.ಈ ದೇವರ ಆರ್ಶೀವಾದ ಪಡೆದು ಹೋದರೆ ಮುಂದಿನ ಒಂದು ವರ್ಷದವರೆಗೆ ದೇವತೆಗಳಿಗೆ ವಿಶೇಷ ಶಕ್ತಿ ಇರುತ್ತದೆ ಎಂಬ ನಂಬಿಕೆಗಳು ಇದೆ.

(ಮೊದಲ ದಿನದಿಂದ ಆಗಮಿಸುವ ಕೊಡಗಿನ ಭಕ್ತರು ಹಾಗೂ ವೃತ್ತಧಾರಿಗಳು ಇಲ್ಲಿಯೇ ವಾಸ್ತವ್ಯ ಹೂಡಿ ಶನಿವಾರದಂದು ಎಲ್ಲಾ ದೇವತಕಾರ್ಯ ಮುಗಿಸಿ ಮರಳಿದರು.)

ಕೊಡಗು ಹಾಗೂ ಕೇರಳ ಜನತೆ ಒಟ್ಟಾಗಿ ಸೇರಿ ಹಬ್ಬದಾಚಾರಣೆಯನ್ನು ಆಚರಿಸುವುದರ ಹಿನ್ನೆಲೆ

ಸುಮಾರು 15 ನೇ ಶತಮಾನದಲ್ಲಿ ಕೊಡಗು ಜಿಲ್ಲೆಯಲ್ಲಿ ಪಾಳೆಯಗಾರರು ರಾಜ್ಯಭಾರ ಮಾಡುತ್ತಿದ್ದರು.ಈ ಸಂದರ್ಭ ಚೆಟ್ಟಿಚ ಎಂಬವನು ಸೈನ್ಯವನ್ನು ಕಟ್ಟಿಕೊಂಡು ಕೊಡಗಿನ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿದ.ಕೇಳರದ ಬೈತೂರು ದೇವರನ್ನು ಪ್ರಾರ್ಥಿಸಿಕೊಂಡರೆ ಪಾಳೆಯಗಾರರನ್ನು ಸದೆಬಡಿಯಬಹುದೆಂದು ಪುಗ್ಗೇರ ಕುಟುಂಬಕ್ಕೆ ವ್ಯಕ್ತಿಯೊಬ್ಬನು ಹೇಳಿರುತ್ತಾನೆ.ಅದರಂತೆ ಪುಗ್ಗೇರ ಕುಟುಂಬಕ್ಕೆ ಪಾಳೆಯಯಗಾರರು ಬಂದಾಗ ಬೈತೂರು ದೇವರನ್ನು ನೆನೆದು ಅವರನ್ನು ಮಟ್ಟಹಾಕಲಾಗುತ್ತದೆ.ನಂತರ ಪುಗ್ಗೇರ ಕುಟುಂಬದವರು ಬೈತೂರಿಗೆ ಬಂದು ಹರಕೆಯನ್ನು ಒಪ್ಪಿಸುತ್ತಾರೆ.ಇದೇ ಸಂದರ್ಭ ಪ್ರತೀ ವರ್ಷ ಹಬ್ಬಕ್ಕೆ ಬರುವಾಗ ಮನೆಯಿಂದ ಅಕ್ಕಿಯನ್ನು ತಂದು ದೇವಾಲಯಕ್ಕೆ ನೀಡಬೇಕು ಹಾಗೂ ನೀವೇ ದೇವಾಲಯದ ತಕ್ಕರಾಗಿ ಕರ್ತವ್ಯ ನಿವರ್ಹಿಸಬೇಕು ಎಂದು ಕೋಮರತಚ್ಚ ದೇವರು ಹೇಳುತ್ತದೆ.ಅಂದಿನಿಂದ ಇಂದಿನವರೆಗೂ ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿರುತ್ತದೆ.
ಬೈತೂರು ದೇವಾಲಯದಲ್ಲಿ ಇಂದಿಗೂ ಕೂಡ ಪುಗ್ಗೇರ ಮನೆಯವರು ತರುವಂತಹ ಅಕ್ಕಿಯಿಂದ ಅಡುಗೆ ಮಾಡಿ ಭಕ್ತಾದಿಗಳಿಗೆ ಊಟ ನೀಡಲಾಗುತ್ತದೆ.
ಮತ್ತೊಂದು ವಿಶೇಷ ಎಂದರೆ ಪ್ರತೀ ವರ್ಷ ಈ ಕೋಮರತಚ್ಚ ದೇವರು ಕೊಡಗಿನ ದೇವಾಲಯಗಳಿಗೆ ಹಾಗೂ ಮನೆಗಳಿಗೆ ಭೇಟಿ ನೀಡುವ ಸಂಪ್ರಾಯ ಇಂದಿಗೂ ಇದೆ.ಈ ಎಲ್ಲಾ ಕಾರಣಗಳಿಂದ ಕೊಡಗು ಜಿಲ್ಲೆಗೂ ಹಾಗೂ ಕೇರಳಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಲಾಗುತ್ತದೆ.ಏನೇ ಇದ್ದರೂ ಇದು ಅವರವರ ಭಕ್ತಿಭಾವ ಮತ್ತು ನಂಬಿಕೆಗಳ ಮೇಲೆ ಅವಲಂಭಿತವಾಗಿರುತ್ತದೆ.

No comments

Post a Comment