ಕೊಡಗು-ಕೇರಳ ನಡುವಿನ ಸೌಹಾರ್ದತೆ ಸಾರುವ ಬೈತೂರು ಉತ್ಸವಕ್ಕೆ ಚಾಲನೆ

No comments
ವರದಿ : ಲಕ್ಷ್ಮೀಕಾಂತ್ ಕೋಮರಪ್ಪ
ಸೋಮವಾರಪೇಟೆ(ಕೂತಿ / www.timesofcoorg.in):- ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ನಡುವೆ ಪುರಾತನ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ.
ಇದಕ್ಕೆ ಸಾಕ್ಷಿ ಎಂದರೆ ಕೊಡಗಿನ ಜನತೆ ಕೇರಳದಲ್ಲಿ ಆಚರಣೆ ಮಾಡುವ ಮೈರೋಮಾಂಚನಗೊಳಿಸುವಂತಹ ಬೈತೂರು ಉತ್ಸವ ಹೌದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಉಳ್ಳಿಕಲ್ ಎಂಬಲ್ಲಿ ಕೊಡಗು ಜಿಲ್ಲೆಯ ಜನತೆ ಹಾಗು ಕೇರಳದ ಜನತೆ ಒಟ್ಟಾಗಿ ಸೇರಿ ಬೈತೂರು ಉತ್ಸವವನ್ನು ಶ್ರದ್ದಾಭಕ್ತಿಯಿಂದ ಆಚರಣೆ ಮಾಡಲಾಯಿತು.

 ಕೊಡಗಿನ ಪುಗ್ಗೇರ ಕುಟುಂಬದವರು ಈ ದೇವಾಲಯದ ತಕ್ಕಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತಿದ್ದು.ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಒಟ್ಟು 11 ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಕೊಡಗಿನವರು ಮೂರು ದಿನ ಪಾಲ್ಗೊಳ್ಳುತ್ತಾರೆ.
ಇದರಲ್ಲಿ ಜನವರಿ 24 ರಂದು ಮೊದಲ ಹಬ್ಬ ನಡೆಯುತ್ತದೆ. ಅದರಂತೆ ದೇವರಿಗೆ ವಿಶೇಷ ಪೂಜಾ ಕಾರ್ಯ ನಡೆದ ತಕ್ಷಣ ಸ್ಥಳೀಯ ಚಂಡೆ ವಾದ್ಯದೊಂದಿಗೆ ಆನೆಯ ಮೇಲೆ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.
ನಂತರ ಉತ್ಸವ ಮೂರ್ತಿಯನ್ನು ಹೊತ್ತವರು ಕುಣಿಯುವುದು ರೋಮಾಂಚನಗೊಳಿಸಿತ್ತು.
ಕೊಡವರು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆ ಸಂದರ್ಭ ಹಾಡು ಹೇಳುತ್ತಾ ದೇವಾಲಯದ ಸುತ್ತಲೂ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಮೊದಲು ದಿನ ಆಗಮಿಸುವ ಕೊಡಗಿನ ಭಕ್ತರು ಹಾಗೂ ವೃತಧಾರಿಗಳು ಇಲ್ಲಿಯೇ ವಾಸ್ತವ್ಯ ಹೂಡಿ ದಿನಾಂಕ 25 ರಂದು ಎಲ್ಲಾ ದೇವಾತಾ ಕಾರ್ಯ ಮುಗಿಸಿ ಮರಳುತ್ತಾರೆ.
ಉತ್ಸಹವಕ್ಕೆ ಆಗಮಿಸುವ ಎಲ್ಲಾ ಭಕ್ತಾಧಿಗಳಿಗೆ ಇಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕೇರಳ ಹಾಗೂ ಕೊಡಗಿನವರು ತಮ್ಮ ಊರಿನಲ್ಲಿ ನಡೆಯುವ ಹಬ್ಬ ಎಂಬಂತೆ ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುವುದು ವಿಶೇಷವಾಗಿತ್ತು.

No comments

Post a Comment