ಮಂಗಳೂರು ಬಾಂಬ್ ಸ್ಫೋಟದ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ SDPI ಕೊಡಗು ಜಿಲ್ಲಾ ಸಮಿತಿಯಿಂದ ಪ್ರತಿಭಟನೆ
ಕೊಡಗು (www.timesofcoorg.in) : 2020 ಜನವರಿ 23:- ಮಂಗಳೂರಿನ ಬಾಂಬ್ ಪ್ರಕರಣವನ್ನು ಬಯಲಿಗೆಳೆಯದೆ ಪ್ರಕರಣವನ್ನು ಸರಕಾರ ಮತ್ತು ಕೆಲ ಮಾಧ್ಯಮಗಳು ಮುಚ್ಚು ಹಾಕಲು ಯತ್ನಿಸುತ್ತಿರುವುದರ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ ಡಿ ಪಿ ಐ) ಕೊಡಗು ಜಿಲ್ಲಾ ವತಿಯಿಂದ ಇಂದು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ ಕೊಡಗು ಜಿಲ್ಲಾಧ್ಯಕ್ಷರಾದ ಟಿ.ಎಚ್ ಅಬೂಬಕ್ಕರ್ ರವರು ಮಾತನಾಡಿ " ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದನ್ನು ಕೇಳಿದಾಗ ತುಂಬಾ ಅಘಾತವಾಯಿತು ಈ ವಿಷಯದ ಪ್ರತಿಯೊಂದನ್ನು ಎಳೆ ಎಳೆಯಾಗಿ ಸೂಕ್ಷ್ಮದಿಂದ ಪರೀಕ್ಷಿಸುವ ನಗರ ವಿಮಾನ ನಿಲ್ದಾಣದಲ್ಲಿ ಒಂದು ಬ್ಯಾಗ್ ನಲ್ಲಿ ಬಾಂಬ್ ಅನ್ನು ಹೇಗೆ ಆದಿತ್ಯರಾವ್ ಎಂಬುವವನು ಒಳಗೆ ಕೊಂಡು ಹೋದ? ನಿಜಕ್ಕೂ ಇದು ಅಲ್ಲಿನ ಪೋಲಿಸ್ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆಯ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯತನ ಕೋಮುಗೆ ಅನುಗುಣವಾಗಿ ಆರೋಪಿಯ ಲೇಬಲ್ ಬದಲಾಗುತ್ತಿದೆ ಒಬ್ಬ ಬಿ ಇ ಇಂಜಿನಿಯರ್ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿದ ಭಯೋತ್ಪಾದಕ ಆದಿತ್ಯ ಕೆಲ ಮಾಧ್ಯಮದವರಿಗೆ ಮಾನಸಿಕ ಅಸ್ವಸ್ಥನಾದ ಇದನ್ನೆಲ್ಲಾ ಗಮನಿಸುವಾಗ ಪ್ರಕರಣದ ದಿಕ್ಕನ್ನು ಬದಲಾಯಿಸುವ ಕುತಂತ್ರ ಎಂದು ಅರಿವಾಗುತ್ತಿದೆ.. ಇದರ ಬಗ್ಗೆ ಸರ್ಕಾರವೂ ಸಮಗ್ರವಾದ ತನಿಖೆ ನಡೆಸಿ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾಧ್ಯಕ್ಷರಾದ ಜನಾಬ್ ಅಮೀನ್ ಮುಹಸ್ಸಿನ್ ಈ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ಮಾಡಿ ಇದರ ಹಿಂದಿರುವ ಜಾಲವನ್ನು ಪತ್ತೆಮಾಡಿ ಸರ್ಕಾರವು ಕ್ರಮ ಕೈಗೊಳ್ಳಬೇಕು ಇಂತಹ ಸ್ಪೋಟವನ್ನು ಒಬ್ಬನಿಂದಲೇ ಸಿದ್ದಪಡಿಸಲು ಸಾಧ್ಯವಿದೆಯಾ ಅದೇ ರೀತಿಯಲ್ಲಿ ಬಾಂಬ್ ಪತ್ತೆಯಾದ ತಕ್ಷಣ ಪ್ರತಿಕ್ರಿಯೆ ನೀಡಿದ್ದ ಕರ್ನಾಟಕದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲಾಗುವುದೆಂದು ತಿಳಿಸಿದ್ದರು ಆದರೆ ಇಂದು ಆರೋಪಿಯ ಹೆಸರು ತಿಳಿದ ತಕ್ಷಣ ಆತನಿಗೆ ಮನಸಿಕ ಅಸ್ವಸ್ಥತೆಯ ಪಟ್ಟ ಕಟ್ಟಿ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಮಾನಸಿಕ ಅಸ್ವಸ್ಥನಿಗೆ ಬಾಂಬ್ ತಯಾರಿ ಮಾಡಲು ಕಲಿಸಿ ಕೊಟ್ಟವರಾರು ಎಂದು ಪ್ರಶ್ನಿಸಿದರು .
ಒಟ್ಟಿನಲ್ಲಿ ಈ ಒಂದು ಪ್ರಕರಣವನ್ನು ಮರೆಮಾಚಲು ಮತ್ತು ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ದದ ಪ್ರತಿಭಟನೆಗಳ ದಿಕ್ಕು ತಪ್ಪಿಸಲು ಸರಕಾರವೇ ಆಯೋಜಿಸಿದ ನಾಟಕವಬಂತೆ ಬಾಸವಾಗುತ್ತಿದೆ ಆದರಿಂದ ಈ ಭಯೋತ್ಪಾದನ ಕೃತ್ಯವನ್ನು ನಿವೃತ ನ್ಯಾಯದೀಶರ ಮೇಲುಸ್ತುವಾರಿಯಲ್ಲಿ ಉನ್ನತ ದಕ್ಷ ಪೋಲಿಸ್ ಅಧಿಕಾರಿಗಳ ಮೂಲಕ ತನಿಖೆ ನಡೆಸಿ ತೆರೆಮನೆಯಲ್ಲಿ ಕೆಲಸ ಮಾಡಿದ ಎಲ್ಲಾ ಆರೋಪಿಗಳನ್ನು ಬಂದಿಸಬೇಕೆಂದು ಆಗ್ರಹಿಸಿದರು..
ಈ ಸಂಧರ್ಭದಲ್ಲಿ ಎಸ್.ಡಿ.ಪಿ.ಐ. ಕೊಡಗು ಜಿಲ್ಲಾಧ್ಯಕ್ಷ ಟಿ.ಎಚ್. ಅಬೂಬಕ್ಕರ್ ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷ ಜನಾಬ್ ಅಮೀನ್ ಮುಹಸ್ಸಿನ್ , ಎಸ್.ಡಿ.ಪಿ.ಐ. ಪ್ರಧಾನ ಕಾರ್ಯದರ್ಶಿ ಅಬ್ಧುಲ್ಲಾ ಅಡ್ಕರ್ , ಕಾರ್ಯದರ್ಶಿ ಅಹಮದ್ ಕಬೀರ್, ನಗರಾಧ್ಯಕ್ಷ ಮನ್ಸೂರ್ ಅಲಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿರಿದ್ದರು



No comments
Post a Comment