ಮಡಿಕೇರಿ (TOC NEWS@Ismail Kandakkare): ಕರ್ನಾಟಕ ಪಬ್ಲಿಕ್ ಶಾಲೆ ನೆಲ್ಲಿಹುದಿಕೇರಿಯಲ್ಲಿ 71ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಉಪಾಧ್ಯಕ್ಷ
ಅಚಯ್ಯ ಪಿ.ಸಿ ನೆರವೇರಿಸಿದರು.ಸಹಶಿಕ್ಷಕರಾದ ಶ ಹೆಲೆನ್ ಸಿಕ್ವೇರ ಇವರು ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವ ದಿನದ ಅಂಗವಾಗಿ ಸ್ವಚ್ಛತಾ ಪ್ರತಿಜ್ಞೆ
ಮತ್ತು ಕೈ ಸ್ವಚ್ಛಗೊಳಿಸುವ ಬಗ್ಗೆ ಬೋಧಿಸಿದರು .
ತದನಂತರ ಸಭಾ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೈಕ್ಷಣಿಕವಾಗಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ನೀಡಿ ಪ್ರೋತ್ಸಾಹಿಸಲಾಯಿತು , 2019-20 ನೇ ಸಾಲಿನ ಪಠ್ಯೇತರ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪ್ರಾಂಶುಪಾಲರು ಶ್ರೀ ಅಂತೋಣಿ ವಿವಿಯನ್ ಆಲ್ವರಿಸ್, ಉಪಪ್ರಾಂಶುಪಾಲರು ಶ್ರೀ ಅನಿಲ್ ಕುಮಾರ್, ಮುಖ್ಯೋಪಾಧ್ಯಾಯರು ಶ್ರೀ ಮತಿ ಭಾರತಿ ಪ್ರಶಾಂತ್,
ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ವಸಂತ ಕುಮಾರ್, ಟಿ ಸಿ ಅಶೋಕ್, ಸುಕುಮಾರ್, ಬಿಂದು, ಮಯಿಮೂನಾ, ಮಿನಿ, ಶಫೀದ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಪದ್ಮಾವತಿ, ಗ್ರಾ. ಪಂ. ಸದಸ್ಯರಾದ ಧನಲಕ್ಷ್ಮಿ, ದತ್ತಿನಿಧಿ ಸಂಸ್ಥಾ ಪಕರಾದ ತಂಗಮ್ಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಏಳನೇ ತರಗತಿ ವಿದ್ಯಾರ್ಥಿನಿ ಸ್ನೇಹ ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಹತ್ತನೇ ತರಗತಿಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ ನಿಶ್ಯ ಕೆ ಆರ್, ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿಧ್ಯಾರ್ಥಿನಿಯರಾದ ಶಾಹಿಮ ಪಿ ಎಸ್,ಸ್ವಾತಿ, ಶರೀನ್ ಡಿ' ಕೋತ್, ತಶ್ರೀನ, ನಿಶಾ, ಆಯಿಷತ್ ರಹ್ಯಾನ, ಹಾಗೂ ನಾಫಿರ ಅವರುಗಳಿಗೆ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.
No comments
Post a Comment