ಪಯಸ್ವಿನಿ ಯುವಕ ಮಂಡಲ (ರಿ) ಸಂಪಾಜೆ-ಕೊಡಗು ಇವರ ವತಿಯಿಂದ ವಿವಿಧ ವಿಶೇಷ ಕಾರ್ಯಗಳಿಗೆ ಚಾಲನೆ

No comments
          ಸುಂಟಿಕೊಪ್ಪ TOC :-   ಕೊಡಗು ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ  ನೆಹರು ಯುವ ಕೇಂದ್ರ ಕೊಡಗು ಜಿಲ್ಲೆ,ಮಡಿಕೇರಿ (ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ) ಮತ್ತು ಪಯಸ್ವಿನಿ ಯುವಕ ಮಂಡಲ, ಸಂಪಾಜೆ  ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಹುತಾತ್ಮ ದಿನಾಚರಣೆಯ ಮತ್ತು ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮವು ದಿನಾಂಕ 30.01.2019 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಪಾಜೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯೊಂದಿಗೆ ಪಯಸ್ವಿನಿ ಯುವಕ ಮಂಡಲದ ಉಪಾಧ್ಯಕ್ಷರಾದ ಶ್ರೀ ತೀರ್ಥ ಪ್ರಸಾದ್ ದುಗ್ಗಳ ಇವರ ಅಧ್ಯಕ್ಷತೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕುಮಾರ್ ಚೆದ್ಕಾರ್, ಅಧ್ಯಕ್ಷರು ಗ್ರಾಮ ಪಂಚಾಯತ್ ಸಂಪಾಜೆ ಇವರು ನೆರವೇರಿಸಿದರು.
ಶ್ರೀ ಸಂತೋಷ್ ಕುಮಾರ್, ರಾಷ್ಟ್ರೀಯ ಯುವ ಕಾರ್ಯಕರ್ತರು, ಮಡಿಕೇರಿ ತಾಲೋಕು ಇವರು ಸಮಾರಂಭದಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀಧರ್ ಪಡ್ಪು, ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಸಂಪಾಜೆ, ಶ್ರೀಮತಿ ಸಾವಿತ್ರಿ, ಮುಖ್ಯೋಪಾಧ್ಯಾಯರು ಸಂಪಾಜೆ ಶಾಲೆ, ಶ್ರೀಮತಿ ರಮಾದೇವಿ ಕಳಗಿ, ಸದಸ್ಯರು ಗ್ರಾಮ ಪಂಚಾಯತ್ ಸಂಪಾಜೆ, ಶ್ರೀ ಕೆ.ಆರ್ ವಿಠಲ್, ನಿವೃತ್ತ ಮುಖ್ಯೋಪಾಧ್ಯಾಯರು ಸಂಪಾಜೆ,
ಶ್ರೀ ಪಿ. ಮಲ್ಲಿಕಾರ್ಜುನ್, ಅಡಳಿತಾಧಿಕಾರಿಗಳು (ಉದ್ಭವ ಟ್ರಸ್ಟ್) ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಇವರೆಲ್ಲರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ
ಶ್ರೀ ಮಾಯಿಲಪ್ಪ ಮೂಲ್ಯ, ನಿವೃತ ಯೋಧರು ಭಾರತೀಯ ಸೇನೆ ಇವರು ಭಾಗವಹಿಸಿದ್ದರು.
ಸಭೆಯಲ್ಲಿ ಸಂಪಾಜೆ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಶ್ರೀ ಅನಂತ್ ಕುಮಾರ್ ರವರು ಹುತಾತ್ಮರ ದಿನಾಚರಣೆಯನ್ನು ಸ್ಮರಿಸುತ್ತಾ ಸ್ಪರ್ಶ್ ಕುಷ್ಠ ರೋಗ ಅರಿವು ಜಾಗೃತಿ ಆಂದೋಲನದ ಬಗ್ಗೆ ವಿವರಣೆ ನೀಡಿದರು, ಆರೋಗ್ಯ ಕೇಂದ್ರ ಅಡಳಿತಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ್ ರವರು  ಮಾತನಾಡಿ ಕುಷ್ಠರೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಮತ್ತು ಜನವರಿ 30 ರಿಂದ ಫೆಬ್ರವರಿ 13ನೇ ದಿನಾಂಕದ ವರೆಗೆ ನಡೆಯುವ ಜಾಗೃತಿ ಆಂದೋಲನದ ಬಗ್ಗೆ ಅರಿವು ಮೂಡಿಸಿದರು. ಪಯಸ್ವಿನಿ ಯುವಕ ಮಂಡಲ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ನಿವೃತ ಯೋಧರಾದ ಶ್ರೀ ಮಾಯಿಲಪ್ಪ ಮೂಲ್ಯ ರವರು ಭಾರತೀಯ ಸೇನೆಯಲ್ಲಿ ತನ್ನ ಸೇವಾ ಸಂಧರ್ಭದಲ್ಲಿ ಆದಂತಹ ಘಟನೆಗಳನ್ನು ವಿವರಿಸುತ್ತಾ ಯುವಕರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.  ಸಮಾರಂಭದಲ್ಲಿ  ಚರಣ್ ಬಿ ಜೆ ಮತ್ತು ಮಿಥುನ್ ಎಂ.ಬಿ, ರಾಷ್ಟ್ರೀಯ ಯುವ ಕಾರ್ಯಕರ್ತರು, ಮಡಿಕೇರಿ ತಾಲೋಕು, ಹಾಗೂ ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ, ಪಯಸ್ವಿನಿ ಯುವಕ ಮಂಡಲದ ಸರ್ವ ಸದಸ್ಯರುಗಳು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಾಲಾ ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ ಚೇತನ್ ರವರು ಗಣ್ಯರನ್ನು ಸ್ವಾಗತಿಸಿ ವಂದಿಸುತ್ತಾ ಕಾರ್ಯಕ್ರಮವನ್ನು ನಿರೂಪಿಸಿದರು, ನಂತರ ಪಯಸ್ವಿನಿ ಯುವಕ ಮಂಡಲ ಸಂಪಾಜೆ ಇದರ ಸರ್ವ ಸದಸ್ಯರುಗಳು ಸೇರಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಿಹಿ ತಿಂಡಿ ಹಂಚಿದರು.

No comments

Post a Comment