ನಾಳೆ NRC CAA NPR ವಿರೋಧಿಸಿ ಸಾಲೆತ್ತೂರಿನಲ್ಲಿ ಬೃಹತ್ ಪ್ರತಿಭಟನೆ

No comments
ಬಂಟ್ವಾಳ (TOC NEWS@junaid Kodagu ) : ಸಂವಿಧಾನ ಸಂರಕ್ಷಣಾ ಸಮಿತಿ ಕೊಳ್ನಾಡು ಸಾಲೆತ್ತೂರು ಇದರ ವತಿಯಿಂದ CAA NRC NRP ವಿರುದ್ಧ ನಾಳೆ ಜನವರಿ 31ರಂದು ಶುಕ್ರವಾರ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ಸಾಲೆತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಹಾಜಿ  ಅಬ್ದುಲ್ ಖಾದರ್  ಬಂಬ್ರಾಣ ಉಸ್ತಾದ್, ಡಾ.ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ, ವಂದನೀಯ ಹ್ಯಾಂಡ್ರಿ ಡಿಸೋಜ, ಜ್ಞಾನ ಪ್ರಕಾಶ್ ಸ್ವಾಮೀಜಿ, ಮಹೇಂದ್ರ ಕುಮಾರ್ ಕೊಪ್ಪ, ಧ್ವಾರಕನಾಥ್ ಸರ್, ಅಬ್ದುಲ್ ಮಜೀದ್ ಕೂಡ್ಲಿಪೇಟೆ ಭಾಷಣ ಮಾಡಲಿದ್ದಾರೆ.

ಹಲವು ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು, ಪ್ರಮುಖ  ಸಾಹಿತಿಗಳು ವಾಗ್ಮಿಗಳು ಹಾಗೂ  ವಿವಿಧ ಸಮಾನ ಮನಸ್ಕ ಸಂಘಟನೆಗಳ ಮುಖಂಡರು,ಜಾತ್ಯತೀತ ಸಂಘಟನೆಗಳ ಮುಖಂಡರು,ಸಮಾನ ಮನಸ್ಕ ನಾಗರಿಕರು, ಹಲವಾರು ಪ್ರಮುಖ ಗಣ್ಯರು,ವಿದ್ಯಾರ್ಥಿಗಳು,ಯುವಕರು,ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

ಎಂದು ಸ್ವಾಗತ ಸಮಿತಿಯ ಅಬ್ದುಲಾ A.B, ಕಾದರ್ ಕಟ್ಟತ್ತಿಲಾ, ಹಕೀಂ ಪರ್ತಿಪ್ಪಾಡಿ, ದಾವೂದ್ ಕಾಡುಮಠ, ಬಶೀರ್ ಕೊಳ್ನಾಡು, ಅಬ್ದುಲ್ಕಾದರ್ S K ಸಾಲೆತ್ತೂರು, ಅಶ್ರಪ್ ಸಾಲೆತ್ತೂರು, ಕಲಂದರ್ ಪರ್ತಿಪ್ಪಾಡಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವರದಿ : ಜುನೈದ್ ಕೊಡಗು

No comments

Post a Comment