ಎಸ್ ವೈ ಎಸ್ ರಾಜ್ಯಸಮಿತಿ ನೂತನ ಅಧ್ಯಕ್ಷರಾಗಿ ಪಿ.ಎಂ. ಉಸ್ಮಾನ್ ಸಅದಿ ಮಂಗಳೂರು ಆಯ್ಕೆ

No comments
           TOCಅಮ್ಮತ್ತಿ:- ಹಲವಾರು ಸಮಾಜಮುಖೀ ಕಾರ್ಯಗಳಲ್ಲಿ ನಿರತರಾಗಿರುವ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (SYS) ಇದರ ರಾಜ್ಯ ಮಹಾಸಭೆಯು ಕೊಡಾಜೆ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಿತು.
       ಪ್ರಸ್ತುತ ಸಭೆಯಲ್ಲಿ ರಾಜ್ಯ ಸಮಿತಿಯ ನೂತನ ಅಧ್ಯಕ್ಷರಾಗಿ ಪಿ.ಎಂ. ಉಸ್ಮಾನ್ ಸಅದಿ ಮಂಗಳೂರು ಅವರನ್ನು ಆಯ್ಕೆ ಮಾಡಲಾಯಿತು. ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಎಂ.ಎಸ್.ಎಂ  ಅಬ್ದುಲ್ ರಶೀದ್ ಸಖಾಫಿ ಝೈನಿ ಅಲ್ ಕಾಮಿಲ್ , ಕೋಶಾಧಿಕಾರಿಯಾಗಿ ಅಬ್ದುಲ್ ಹಕೀಮ್ ಕೊಡ್ಲಿಪೇಟೆ , ಉಪಾಧ್ಯಕ್ಷರಾಗಿ ಉಮರ್ ಸಖಾಫಿ ಕಂಬಳಬೆಟ್ಟು , ವೆಲ್ಫೇರ್ ಅಧ್ಯಕ್ಷರಾಗಿ ಜಿಎಂ ಮಹಮ್ಮದ್ ಕಾಮಿಲ್ ಸಖಾಫಿ , ಡೆಪ್ಯೂಟಿ ಅಧ್ಯಕ್ಷರಾಗಿ ಹಾಜಿ ನವಾಜ್ ಅಹಮದ್ ಬಳ್ಳಾರಿ , ಶಿಕ್ಷಣ ವಿಭಾಗದ ಕಾರ್ಯದರ್ಶಿಯಾಗಿ ಹೊಸೈನುಲ್ ಅಹಮದ್ ಬಾಖವಿ ಚಿಕ್ಕಮಂಗಳೂರು , ಹಾಗೂ ಇನ್ನಿತರರನ್ನು ಆಯ್ಕೆಮಾಡಲಾಯಿತು.
 
       ಪ್ರಸ್ತುತ ಸಭೆಯನ್ನು ಝೈನುಲ್ ಉಲಮಾ ಮಾಣಿ ಉಸ್ತಾದ್  ಉದ್ಘಾಟಿಸಿದರು. ಜಿಎಂಎಂ ಕಾಮಿಲ್ ಸಖಾಫಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆಪಿ ಹುಸೈನ್ ಸಅದಿ ಕೆಸಿರೋಡು ಹಾಗೂ ಕುಂಬಡಾಜೆ ಅಬೂಬುಕರ್ ಪೈಝಿ ಸಂಘ ಬದುಕಿನ ಮಹತ್ವದ ಬಗ್ಗೆ ಬೋಧನೆ ನೀಡಿದರು. ಸುನ್ನಿ ಕೊಡಿನೇಷನ್ ಸಮಿತಿ ಅಧ್ಯಕ್ಷ ಎಸ್'ಪಿ ಹಂಝ ಸಖಾಫಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯದ್ ಮನ್ಶರ್ ತಂಙಳ್, ಎಸ್ಇಡಿಸಿ ರಾಜ್ಯಾಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ ಶುಭ ಹಾರೈಸಿದರು. ಡಾಕ್ಟರ್ ಎಮ್ಮೆಸ್ಸೆಂ ಝೈನಿ ಕಾಮಿಲ್ ವಿಷಯ ಮಂಡಿಸಿದರು. ಡಿಕೆ ಉಮರ್ ಸಖಾಫಿ ಸ್ವಾಗತಿಸಿದರು. ಅಶ್ರಫ್ ಕಿನಾರ ವಂದಿಸಿದರು.

No comments

Post a Comment