ಮಾಜಿ ಸೈನಿಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಜಾಗ ಒದಗಿಸಲು ಮನವಿ

No comments
        ಮಡಿಕೇರಿ TOC:-ಸೈನಿಕ ಮತ್ತು ಪುನರ್‍ವಸತಿ ಇಲಾಖೆಯ ಹಿರಿಯ ಅಧಿಕಾರಿಗಳ ನಾಲ್ಕನೇ ದಕ್ಷಿಣ ವಲಯದ ಸಮವೇಶ ಸಭೆಯು ನಗರದ ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ದಕ್ಷಿಣ ವಲಯದ ಇಎಸ್‍ಡಬ್ಲ್ಯು ಕಾರ್ಯದರ್ಶಿ ಸಂಜೀವಿನಿ ಕುಟ್ಟಿ  ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
    ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಮಾಜಿ ಸೈನಿಕರು ಮಾತನಾಡಿ ಕೊಡಗಿನಲ್ಲಿರುವ ಮಾಜಿ ಸೈನಿಕರ ಸಂಘಕ್ಕೆ ಸೂಕ್ತ ಕಟ್ಟಡದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಕಟ್ಟಡ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. 
     ಅತಿವೃಷ್ಠಿಯಿಂದ ಅಂದಾಜು 20 ರಿಂದ 50 ಮಂದಿ ಮಾಜಿ ಸೈನಿಕರು ಆಸ್ತಿ ಪಾಸ್ತಿ ಕಳೆದುಕೊಂಡಿದ್ದು, ಸೂಕ್ತ ಪರಿಹಾರ ನೀಡಬೇಕು ಮನವಿ ಮಾಡಿದರು.
     ಮಾಜಿ ಸೈನಿಕರಿಗೆ ಕಂದಾಯ ಇಲಾಖೆಯಿಂದ ವಿಶೇಷ ಕಂದಾಯ ಅದಾಲತ್ ನಡೆಸಿ ಕಂದಾಯ ಭೂಮಿ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತುರ್ತು ವಿಲೇವಾರಿ ಮಾಡಬೇಕು ಮಾಜಿ ಸೈನಿಕರು ಕೋರಿದರು.
     ಜಿಲ್ಲೆಯಲ್ಲಿ ಮಾಜಿ ಸೈನಿಕ ಕಲ್ಯಾಣ ಮಂಡಳಿ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮಾಜಿ ಸ್ಯನಿಕರ ಕುಂದುಕೊರತೆ ನಿವಾರಿಸಲು ಸಭೆ ನಡೆಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮಾಜಿ ಸೈನಿಕರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. 
      ಕೊಡಗಿನಲ್ಲಿ ಡಿಸೆಂಬರ್ ನಿಂದ ಮಾರ್ಚ್‍ವರೆಗೆ ಕೃಷಿ ಚಟುವಟಿಕೆ ನಡೆಯುತ್ತದೆ. ಮಾಜಿ ಸೈನಿಕರ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಮಾರ್ಚ್ ತಿಂಗಳ ನಂತರ ಸಭೆ ನಡೆಸುದರಿಂದ ಹೆಚ್ಚಿನ ಮಾಜಿ ಸೈನಿಕರು ಸಭೆಗೆ ಬರಲು ಅನುಕೂಲವಾಗುತ್ತದೆ ಎಂದು ಮಾಜಿ ಸೈನಿಕರೊಬ್ಬರು ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಮಾಜಿ ಸೈನಿಕರ ಹಲವು ಕುಂದು ಕೊರತೆ ಕುರಿತು ವಿಸ್ತ್ರುತ ಚರ್ಚೆ ನಡೆಸಿದರು. 
      ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಕಲ್ಯಾಣ ಸಮಿತಿಯ ಜಂಟಿ ಕಾರ್ಯದರ್ಶಿ ಹರಿಪ್ರಸಾದ್, ದಕ್ಷಿಣ ವಲಯದ ಇಸಿಎಚ್‍ಎಸ್ ಉಪಾಧ್ಯಕ್ಷರಾದ ಬ್ರಿಗೇಡಿಯರ್ ಎಸ್.ಕೆ.ಎಸ್ ಸಿಂಗ್, ಜಿಲ್ಲಾ ಸೈನಿಕ ಕಲ್ಯಾಣಾಧಿಕಾರಿ ಗೀತಾ, ಸಿ.ಎಸ್.ಡಿ ಕ್ಯಾಂಟಿನ್‍ನ ನಿರ್ದೇಶಕರು ಇತರರು ಪಾಲ್ಗೊಂಡಿದ್ದರು.

No comments

Post a Comment