ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಯ ಪ್ರವಾಸಿ ಸ್ಥಳಗಳಿಗೆ 1.64 ಲಕ್ಷ ಕ್ಕೂ ಹೆಚ್ಚು ಜನರು ಭೇಟಿ

No comments
       
      ಮಡಿಕೇರಿ TOC:-ಜಿಲ್ಲೆಯ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿ ವ್ಯಾಪ್ತಿಯಲ್ಲಿ ಪ್ರಮುಖವಾಗಿ ನಗರದ ವಸ್ತು ಸಂಗ್ರಹಾಲಯ, ರಾಜರ ಗದ್ದುಗೆ ಹಾಗೂ ನಾಲ್ಕುನಾಡು ಅರಮನೆ ಒಳಗೊಂಡಿದ್ದು, ಈ ಪ್ರವಾಸಿ ತಾಣಗಳಿಗೆ ಕಳೆದ ಏಪ್ರಿಲ್‍ನಿಂದ ಡಿಸೆಂಬರ್ ಅಂತ್ಯದ ವರೆಗೆ ಸುಮಾರು 1,64,433 ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಕ್ಯೂರೇಟರ್ ರೇಖಾ ಅವರು ಮಾಹಿತಿ ನೀಡಿದ್ದಾರೆ. 
ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸಿ ಜಿಲ್ಲೆಯ ಇತಿಹಾಸ ಮತ್ತಿತರ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
        ಜಿಲ್ಲೆಯ ಸಂಸ್ಕøತಿಗಳ ವಸ್ತುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 1971 ರಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸಲಾಯಿತು. ಪ್ರಸ್ತುತ, ಸರ್ಕಾರಿ ವಸ್ತು ಸಂಗ್ರಹಾಲಯ, ನಗರದ ಕೋಟೆಯಲ್ಲಿದೆ. ಜೈನ ತೀರ್ಥಂಕರರ ಕಲ್ಲಿನ ಶಿಲ್ಪಗಳು, ಕಂಚಿನ ವಿಗ್ರಹಗಳು ಮತ್ತು ವೀರಗಲ್ಲುಗಳು ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರದೇ ಆದ ಕೆಲವು ಪ್ರಮುಖ ವಸ್ತುಗಳೂ ಈ ವಸು ್ತಸಂಗ್ರಹಾಲಯದಲ್ಲಿ ಪ್ರದರ್ಶಿತವಾಗಿದೆ.
ವಸ್ತು ಸಂಗ್ರಹಾಲಯದ ಕಟ್ಟಡ: ವಸ್ತು ಸಂಗ್ರಹಾಲಯದ ಕಟ್ಟಡ ಕೂಡ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸುಮಾರು 150 ವರ್ಷಗಳ ಹಿಂದಿನ ರೋಮನ್ ಗೋಥಿಕ್ ಶೈಲಿಯ ಚರ್ಚ್ ಇದಾಗಿದೆ. ಪ್ರವೇಶ ದ್ವಾರದ ಮೇಲೆ ಎತ್ತರದ ಕಮಾನು ಇದೆ.  ಈ ಚರ್ಚ್‍ನ ವಿಶಾಲ ಸಭಾಂಗಣ ಮತ್ತು ಪಾರದರ್ಶಕ ಗಾಜಿನ ಕಿಟಕಿಗಳು ಆಕರ್ಷಕವಾಗಿವೆ.
ಶಿಲ್ಪಗಳು: ವಸ್ತು ಸಂಗ್ರಹಾಲಯದಲ್ಲಿ ಹಲವಾರು ಉತ್ತಮ ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ. ಜೈನ ತೀರ್ಥಂಕರ ಶಿಲ್ಪಗಳು, ಹಿಂದೂ ದೇವ, ದೇವತೆಯರ ಶಿಲ್ಪಗಳು ಕ್ರಿ.ಶ 12 ರಿಂದ 15 ನೇ ಶತಮಾನ) ಹಾಗೂ ಸ್ಥಳೀಯ ಜಾನಪದೀಯ ಶಿಲ್ಪಗಳು ಹಾಗೂ ವೀರಗಲ್ಲುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಜೈನ ಶಿಲ್ಪಗಳಲ್ಲಿ ಹೆಚ್ಚಿನ ಕುಸುರಿ ಕೆಲಸವನ್ನು ಕಾಣಬಹುದಾಗಿದೆ.
ವೀರಗಲ್ಲುಗಳು : ಈ ವಸ್ತುಸಂಗ್ರಹಾಲಯದಲ್ಲಿ ಉತ್ತಮ ವಿನ್ಯಾಸವುಳ್ಳ ವೀರಗಲ್ಲುಗಳು ಪ್ರದರ್ಶಿಸಲ್ಪಟ್ಟಿವೆ. ವೀರಗಲ್ಲುಗಳನ್ನು ಈ ಜಿಲ್ಲೆಯಲ್ಲಿಯೇ ಸಂಗ್ರಹಿಸಿರುವುದು ಈ ಭಾಗದ ಪ್ರಾಚೀನ ವೀರಪರಂಪರೆಯ ದ್ಯೋತಕವಾಗಿದೆ.
ಲೋಹದ ವಿಗ್ರಹಗಳು: ಜಿಲ್ಲೆಯಲ್ಲಿನ ವಸ್ತು ಸಂಗ್ರಹಾಲಯದಲ್ಲಿ ಹಲವಾರು ಅತ್ಯಂತ ಸುಂದರವಾದ ಕಂಚಿನ ವಿಗ್ರಹಗಳಿವೆ. ಇವುಗಳಲ್ಲಿ ಉಮಾಮಹೇಶ್ವರ ಮೂರ್ತಿ, ಕಾಳಿ ಹಾಗೂ ನೇಪಾಳದ್ದು ಎನ್ನಲಾದ ಶಿವಪಾರ್ವತಿಯರ ವಿಗ್ರಹ ಮತ್ತು ಅತ್ಯಂತ ಕುತೂಹಲಕಾರಿಯಾದ ಗ್ರಾಮದೇವತೆಗಳ ಸೀಸದ ವಿಗ್ರಹಗಳು ಪ್ರಮುಖವಾದವಾಗಿವೆ.
ಆಯುಧಗಳು: ಮಡಿಕೇರಿಯ ವಸ್ತು ಸಂಗ್ರಹಾಲಯದಲ್ಲಿ ವಿವಿಧ ಆಯುಧಗಳ ಸಂಗ್ರಹಣೆ ಇದೆ. ಇವುಗಳಲ್ಲಿ ‘ವಿ’ ಎಂಬ ಅಕ್ಷರವಿರುವ ಒಡಿಕತ್ತಿ ಹಾಗೂ ಪೀಚೆಕತ್ತಿಗಳು ಪ್ರಮುಖವಾದವು. ಇವು ಕೊಡಗಿನ ವೈಶಿಷ್ಯಪೂರ್ಣ ಆಯುಧಗಳಾಗಿವೆ. ಇವುಗಳಲ್ಲದೆ ಉದ್ದನೆಯ ಖಡ್ಗಗಳು ಅವುಗಳನ್ನು ಇರಿಸುವ ಓರಿಗಳು ಅಥವಾ ಕವಚ ಇವೆ. ಒಂದು ಖಡ್ಗದ ಹಿಡಿಯು ಹುಲಿಯ ಮುಖದ ವಿನ್ಯಾಸವನ್ನು ಹೊಂದಿದೆ. ಮತ್ತು ಅದರ ಮೇಲೆ ‘ಶ್ರೀ ಗಣೇಶ’ ಎಂದು ದೇವನಾಗರಿ ಲಿಪಿಯಲ್ಲಿ ಕೊರೆದ ಬರಹವಿದೆ. ಇವುಗಳಲ್ಲದೆ, ಜಮಾದಾರ್, ಚೂರಿಗಳು ಮತ್ತು ಬಿಳಿ ಲೋಹದ ಕತ್ತಿಗಳೂ ಇವೆ. ಇವುಗಳ ಜೊತೆಗೆ ಏಕ ಕೊಳವೆ ಮತ್ತು ದ್ವಿ ಕೊಳವೆಗಳುಳ್ಳ ಕೇಪಿನ ಕೋವಿಗಳು ಮತ್ತು ಪಿಸ್ತೂಲ್‍ಗಳು ಇವೆ. ವಿವಿಧ ವಿನ್ಯಾಸದ ಮತ್ತು ಗಾತ್ರದ ಫಿರಂಗಿಗಳೂ ಮತ್ತು ಇವುಗಳಿಗೆ ಉಪಯೋಗಿಸುತ್ತಿದ್ದ ಉಕ್ಕಿನ ಗುಂಡುಗಳೂ ಇವೆ. ಇವುಗಳಲ್ಲಿ ಅತ್ಯಂತ ಗಮನಾರ್ಹವಾಗಿವೆ ಎಂದು ಕ್ಯೂರೇಟರ್ ರೇಖಾ ಅವರು ಮಾಹಿತಿ ನೀಡಿದ್ದಾರೆ.

No comments

Post a Comment