ಮಡಿಕೇರಿ TOC :-ಹುಟ್ಟು ಎಂಬುದು ಆಕಸ್ಮಿಕ. ಯಾವುದೇ ಜಾತಿ ಧರ್ಮದ ಎಲ್ಲೆಗಳನ್ನೂ ಮೀರಿದ ಮಾನವೀಯತೆಯೇ ನಮ್ಮ ಧರ್ಮವಾಗಬೇಕು ಎಂದು ಶಾಸಕರಾದ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ನಗರದ ಡಿ.ದೇವರಾಜ ಅರಸು ಭವನದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಸಂತ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಬಳಿಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಎಲ್ಲಾ ಮಹನೀಯರ ಜೀವನ ಮತ್ತು ಚಿಂತನೆಗಳನ್ನು ಪುನರ್ ಸ್ಮರಿಸುವ ಮತ್ತು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದರು.
ನಿಜಶರಣ ಅಂಬಿಗರ ಚೌಡಯ್ಯ ಮತ್ತು ಸಂತ ವೇಮನ ಅವರು ಬಹಳ ಹಿಂದಿನ ಕಾಲದಲ್ಲಿಯೇ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಇವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಮನನ ಮಾಡಿಕೊಂಡು ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಸರ್ವರಿಗೂ ನಿಜಶರಣ ಅಂಬಿಗರ ಚೌಡಯ್ಯ ಮತ್ತು ವೇಮನ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ನೂರಾರು ವರ್ಷಗಳ ಹಿಂದೆ ಸಮಾಜಕ್ಕೆ ಸೇವೆ ಸಲ್ಲಿಸಿದ ಮಹನೀಯರ ವಿಚಾರಗಳನ್ನು ಸ್ಮರಿಸಲು ಸರ್ಕಾರ ಜಯಂತಿಯನ್ನು ಆಚರಿಸುತ್ತಾ ಬಂದಿದೆ. ಅವರ ಆದರ್ಶಗಳನ್ನು ತಿಳಿದುಕೊಂಡು ಮತ್ತೊಬ್ಬರಿಗೂ ತಿಳಿಸುವ ಕಾರ್ಯವಾಗಬೇಕು ಎಂದರು. ವೇಮನ ಮತ್ತು ಅಂಬಿಗರ ಚೌಡಯ್ಯನವರು ಸಮಾನತೆಗಾಗಿ, ಸ್ತ್ರೀ ಶೋಷಣೆಯ ವಿರುದ್ದವಾಗಿ ಧ್ವನಿ ಎತ್ತಿದವರು. ಅವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಹೆಬ್ಬಾಲೆ ಪ್ರೌಢಶಾಲೆಯ ಶಿಕ್ಷಕರಾದ ಮೆ.ನಾ.ವೆಂಕಟನಾಯಕ ಅವರು ಮಾತನಾಡಿ, 12 ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಅಲ್ಲಮಫ್ರಭು ಅವರು ಅನುಭವ ಮಂಟಪ ನಿರ್ಮಿಸಿ ವಚನಗಳ ಮೂಲಕ ಜನರಲ್ಲಿ ಸಾಮಾಜಿಕ ಅರಿವು ಮೂಡಿಸಿದರು. ಆ ಕಾಲಘಟ್ಟದಲ್ಲಿಯೇ ಬಂಡಾಯ ಸ್ವರೂಪಿಯಾಗಿ ಅಂಬಿಗರ ಚೌಡಯ್ಯ ನಮ್ಮ ಮುಂದೆ ನಿಲ್ಲುತ್ತಾರೆ ಎಂದರು.
ಅಂಬಿಗರ ಚೌಡಯ್ಯ ಒಬ್ಬ ಅದ್ಭುತ ಚಿಂತಕ. ಸಮಾನತೆಯ ಸಾರವನ್ನು ತನ್ನ ಕಠಿಣ ಪದಗಳ ಮೂಲಕ ಜನರಿಗೆ ತಿಳಿಸಿದ ಶ್ರೇಷ್ಠ ವಚನಕಾರ ಎಂದರು. ಶರಣರಲ್ಲಿಯೇ ಇದ್ದ ಅಸಮಾನತೆಯ ವಿರುದ್ಧ ಆತ ಸಾತ್ವಿಕ ಹೋರಾಟ ಮಾಡಿದವನು ಎಂದರು. ಜಾತಿ ಪದ್ಧತಿ, ಮೇಲು ಕೀಳು ಎಂಬ ಭಾವಗಳನ್ನು ವಿರೋಧಿಸಿ, ಸಮಾನತೆಯನ್ನು ಎತ್ತಿಹಿಡಿದರು ಎಂದರು.
ಕರ್ನಾಟಕದಲ್ಲಿ ಹೇಗೆ ಸರ್ವಜ್ಞನನ್ನು ನಾವು ಸ್ಮರಿಸುತ್ತೇವೆಯೋ, ಅಂತೆಯೇ ಆಂಧ್ರಪ್ರದೇಶದಲ್ಲಿ ವೇಮನನನ್ನು ಸ್ಮರಿಸುತ್ತಾರೆ. ಆಂಧ್ರಪ್ರದೇಶಲ್ಲಿ ವೇಮನ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದರು. ತೆಲುಗಿನ ಕವಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಮಾತನಾಡಿ, ವಚನಕಾರರು ಅತ್ಯಂತ ಪ್ರಭಾವಯುಕ್ತವಾಗಿ ವಚನಗಳನ್ನು ವಿಶ್ವಕ್ಕೆ ನೀಡಿದರು. ವಚನಕಾರರು ಮತ್ತು ಸಾಹಿತಿಗಳು ಬೃಹತ್ ಆಗಿ ಬೆಳೆದ ಆಲದ ಮರವಿದ್ದಂತೆ. ಆ ಮರದಡಿಯಲ್ಲಿ ಯಾವುದೇ ಜಾತಿ-ಧರ್ಮದ ವಿಚಾರಗಳಿಲ್ಲದೆ ಸಾಹಿತ್ಯದ ನೆರಳನ್ನು ಎಲ್ಲರಿಗೂ ನೀಡುತ್ತಾರೆ ಎಂದರು.
ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ರಾಜು ಮತ್ತು ತಂಡದವರು ನಾಡಗೀತೆ ಹಾಡಿದರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದರ್ಶನ ಕೆ.ಟಿ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರು, ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು.

No comments
Post a Comment