"ಹಿಂದೂ ಮಲಯಾಳಿ ಸಮಾಜದವರು ಶೈಕ್ಷಣಿಕವಾಗಿ ಪ್ರಗತಿಸಿ ಸಾಧಿಸಿ , ಸಮಾಜದ ಮುಖ್ಯವಾಹಿನಿಗೆ ಬನ್ನಿ: ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್ ರಮೇಶ್...."
ಮಡಿಕೇರಿ: ಹಿಂದೂ ಮಲಯಾಳಿ ಸಮುದಾಯದವರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದರೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ಕೊಡಗು ಜಿಲ್ಲಾ ಮಲಯಾಳಿ ಸಮಾಜದ ಅಧ್ಯಕ್ಷರಾದ ಕೆ.ಎಸ್ ರಮೇಶ್ ಹೇಳಿದರು. ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ಹತ್ತನೇ ವರ್ಷದ ಓಣಂ ಆಚರಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಕೆ.ಎಸ್ ರಮೇಶ್ ಮಾತನಾಡಿದರು. ಇಂದಿನ ಮಲಯಾಳಿ ಸಮಾಜದ ಯುವ ಜನತೆಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಬಗ್ಗೆ ತಿಳಿಸಿ ಕೊಡುವ ಕೆಲಸ ಆಗಬೇಕಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಸಮಯವನ್ನು ಕಳೆಯುವ ಮಲಯಾಳಿ ಯುವ ಪೀಳಿಗೆಗೆ ಮಲಯಾಳಿ ಸಂಸ್ಕೃತಿಯ ಮನದಟ್ಟು ಮಾಡುವ ಕೆಲಸವನ್ನು ಮಾಡಿದರೆ ಮಾತ್ರ ಮಲಯಾಳಿ ಸಂಸ್ಕೃತಿ ಉಳಿಯುವುದು ಎಂದರು.
ಕೊಡಗಿನ ಮೂಲೆ ಮೂಲೆಯಲ್ಲಿರುವ ಮಲಯಾಳಿಗಳು ಸಂಘಟಿತರಾಗಿ , ಒಗ್ಗಟ್ಟು ಪ್ರದರ್ಶಿಸಬೇಕು, ಅಲ್ಲದೇ ಸಾಮಾಜಿಕ , ರಾಜಕೀಯ ,ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಕೆ.ಎಸ್.ರಮೇಶ್ ಹೇಳಿದರು. 12 ವರ್ಷಗಳ ಹಿಂದೆ ಮೂರ್ನಾಡಿನಲ್ಲಿ ಆರಂಭಗೊಂಡ ಮಲಯಾಳಿ ಸಮಾಜವು ,ಇಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಮಾಜಗಳನ್ನು ನಿರ್ಮಿಸಿರುವುದು ಸಂತೋಷ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಮಲಯಾಳಿ ಸಮುದಾಯದ ಹತ್ತನೇ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಮಡಿಕೇರಿಯಲ್ಲಿ ಏರ್ಪಡಿಸಲಾಗುವುದು. ಮುಂದಿನ ತಿಂಗಳು ನವಂಬರ್ ಮಡಿಕೇರಿಯಲ್ಲಿ ನಡೆಯುವ ಜಿಲ್ಲಾ ಮಲಯಾಳಿ ಸಮಾಜದ ಓಣಂ ಆಚರಣೆ ಕಾರ್ಯಕ್ರಮ ನಡೆಯಲಿದ್ದು ಎಲ್ಲರೂ ಭಾಗವಹಿಸಿ ಯಶಸ್ವಗೊಳಿಸಬೇಕಾಗಿ ಕೇಳಿಕೊಂಡರು. ಅಲ್ಲದೇ ಮುಂದಿನ ವರ್ಷ ವಿಷು ಅಂಗವಾಗಿ ಮಡಿಕೇರಿಯಲ್ಲಿ ಮಲಯಾಳಿ ಸಮುದಾಯದ ದೊಡ್ಡ ಸಮಾವೇಶ ನಡೆಯಲಿದೆ ಎಂದು ಇದೇ ಸಂದರ್ಭ ಕೆ.ಎಸ್.ರಮೇಶ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಚೆಟ್ಟಳ್ಳಿ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಕೆ ಶಶಿಕುಮಾರ್ , ಪ್ರತಿ ವರ್ಷ ಚೆಟ್ಟಳ್ಳಿ ಮಲಯಾಳಿ ಸಮಾಜದಿಂದ ಓಣಂ ಆಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು, ಕಳೆದ ವರ್ಷ ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪದ ಕಾರಣದಿಂದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಈ ವರ್ಷ ಓಣಂ ಆಚರಣೆ ಕಾರ್ಯಕ್ರಮವು ಸರಳ ರೀತಿಯಲ್ಲಿ ನಡೆಸಿದ್ದೇವೆ ಎಂದರು. ಕಳೆದ ಹತ್ತು ವರ್ಷಗಳಲ್ಲಿ ಚೆಟ್ಟಳ್ಳಿ ಮಲಯಾಳಿ ಸಮಾಜದ ಕಾರ್ಯಕ್ರಮಗಳ ಬಗ್ಗೆ ಶಶಿಕುಮಾರ್ ವಿವರಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ , ಶಭರೀಶಾ ಚಂಡೆ ಮೇಳವೂ ನೆರದಿದ್ದವರ ಗಮನ ಸೆಳೆಯಿತು. ಮಹಿಳೆಯರು ಹಾಗೂ ಮಕ್ಕಳು ಮಲಾಯಳಿ ಸಮಾಜದ ಸಾಂಪ್ರದಾಯಿಕ ಉಡುಪು ತೊಟ್ಟು ಗಮನ ಸೆಳೆದರು. ಕೇರಳದ ಸಾಂಪ್ರದಾಯಿಕ ಆಹಾರ ಓಣಂ ಸದ್ಯವನ್ನು ಏರ್ಪಡಿಸಲಾಗಿತ್ತು. ಹಿಂದೂ ಮಲಯಾಳಿ ಸಮಾಜದ ಎಸ್.ಎಸ್.ಎಲ್.ಸಿ.ಹಾಗೂ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಭಾರತೀಯ ಸೇನೆಯಲ್ಲಿ ಕಾರ್ಯಕ್ರನಿರ್ವಹಿಸಿದ ಮಾಜಿ ಯೋಧ ಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಸಾಂಸ್ಕೃತಿಕ -ಕಲಾ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭ ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವತ್ಸಲ , ಮಲಯಾಳಿ ಚೆಟ್ಟಳ್ಳಿ ಸಮಾಜದ ಉಪಾಧ್ಯಕ್ಷ ಚಂದ್ರನ್, ಉಪಾಧ್ಯಕ್ಷೆ ಸರೋಜಿನಿ, ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಸಂತೋಷ್ ಕುಮಾರ್, ನಂಜರಾಯಪಟ್ಟಣ ಮಲಯಾಳಿ ಸಮಾಜದ ಅಧ್ಯಕ್ಷ ಪ್ರೇಮಾನಂದ, ಮೂರ್ನಾಡು ಮಲಯಾಳಿ ಸಮಾಜದ ಅಧ್ಯಕ್ಷ ಹಾಗೂ ಜಿಲ್ಲಾ ಮಲಯಾಳಿ ಸಮಾಜದ ಖಜಾಂಜಿ ಬಾಬು ಇದ್ದರು. ಕಾರ್ಯಕ್ರಮವನ್ನು ಚೆಟ್ಟಳ್ಳಿ ಮಲಾಯಳಿ ಸಮಾಜದ ಕೋಶಾಧಿಕಾರಿ ಸುರೇಶ್ ಬಾಬು ಕಾರ್ಯಕ್ರಮವನ್ನು ನಿರೂಪಿಸಿದರು.








No comments
Post a Comment