ಆದರೆ ದಿನಾಂಕ 10-10-2019 ರಂದು ಎಸ್.ಡಿ.ಪಿ.ಐ ಯ ಜಿಲ್ಲಾ ಅಧ್ಯಕ್ಷರಾದ ಟಿ.ಎಚ್ ಅಬೂಬಕರ್ ರವರ ನೇತ್ರತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ ಜಿಲ್ಲಾಧಿಕಾರಿಗಳು ನೆರೆ ಹಾವಳಿಯಿಂದ ಹಾನಿಗೀಡಾದ ಚೆರಿಯಪರಂಬು,ಬಲಮುರಿ,ಕೊಟ್ಟಮುಡಿ ಮುಂತಾದ ಪ್ರದೇಶಗಳಿಗೆ ಒಂದು ವಾರದಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ದಿನಾಂಕ 11-10-2019 ರಂದು ನಡೆಸಲು ತೀರ್ಮಾನಿಸಿದ ಪ್ರತಿಭಟನೆ ಮುತ್ತಿಗೆಯನ್ನು ಮುಂದೂಡಲಾಗಿದೆ,ಜಿಲ್ಲಾಧಿಕಾರಿಗಳ ಹಾನಿ ಪ್ರದೇಶಗಳ ಪರಿಶೀಲನೆಯ ನಂತರವು ಸೂಕ್ತ ರೀತಿಯ ಸ್ಪಂದನೆ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ತರದ ಹೋರಾಟವನ್ನು ರೂಪಿಸಲಾಗುವುದು ಎಂದು SDPI ಕೊಡಗು ಜಿಲ್ಲಾ ಕಾರ್ಯದರ್ಶಿ ಕಬೀರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಭೇಟಿಯ ತಂಡದಲ್ಲಿ ಎಸ್.ಡಿ.ಪಿ.ಐ ಯ ಜಿಲ್ಲಾ ಉಪಾಧ್ಯಕ್ಷರಾದ ಕೆ.ಜಿ ಪೀಟರ್,ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಡ್ಕಾರ್,ಕಾರ್ಯದರ್ಶಿ ಕಬೀರ್ ಹಾಗೂ ನಗರ ಸಮಿತಿ ಅಧ್ಯಕ್ಷರಾದ ಮನ್ಸೂರ್ ರವರು ಹಾಜರಿದ್ದರು.

No comments
Post a Comment