Showing posts with label ಪಾಲಿಬೆಟ್ಟ. Show all posts
Showing posts with label ಪಾಲಿಬೆಟ್ಟ. Show all posts

ಚೆನ್ನಯ್ಯನಕೋಟೆ ಹೊಲಮಾಳ ಸೀಲ್ ಡೌನ್ ಪ್ರದೇಶಕ್ಕೆ ಕರುಣೆಯ ಹಸ್ತ ಚಾಚಿದ ಮರ್ಕಝ್



ಪಾಲಿಬೆಟ್ಟ (Times Of Coorg) : ಕೆಲವು ದಿನಗಳ ಹಿಂದೆಯಷ್ಟೇ ಚೆನ್ನಯ್ಯನಕೋಟೆ (ಹೊಲಮಾಳ) ಯಲ್ಲಿ ಒಬ್ಬ ವ್ಯಕ್ತಿಯಲ್ಲಿ ಕೊರೊನ ಸೋಂಕು ದೃಢಪಟ್ಟಿದ್ದು ಜಿಲ್ಲಾಧಿಕಾರಿಗಳ ಆದೇಶದಂತೆ 110 ಮನೆಗಳನ್ನು ಒಳಗೊಂಡ ಆ ಒಂದು ಭಾಗವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿತ್ತು.

ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಈ ಸೀಲ್ ಡೌನಿಂದ್ ಅಲ್ಲಿರುವ ಗ್ರಾಮಸ್ಥರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನು ಮನಗಂಡ ನೆರೆಯ ಗ್ರಾಮವಾದ ಹುಂಡಿಯ ಮರ್ಕಜ್ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ಈ ಪ್ರದೇಶದ ಸುಮಾರು 110 ಮನೆಗಳಿಗೆ ಬೇಕಾದ ಎಲ್ಲಾ ಆಹಾರ ಪದಾರ್ಥ ಗಳನ್ನು ಒಳಗೊಂಡ ಕಿಟ್ ಮರ್ಕಝ್  ಕಾರ್ಯಕರ್ತರ ಮುಖಾಂತರ ಅವರ ಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕೊರೊನ ಮಹಾಮಾರಿಯು ತಾಂಡವವಾಡುತ್ತಿರುವ ಇಂತಹ ಸಂದರ್ಭದಲ್ಲಿ ಮರ್ಕಜ್ ಪಬ್ಲಿಕ್ ಶಾಲೆ ಹುಂಡಿ ತಮ್ಮ ನೆರೆಯ ಗ್ರಾಮದ ಸಹೋದರರ ಸಂಕಷ್ಟಕ್ಕೆ ಮಿಡಿದು ಇವರು ಮಾಡಿರುವ ಈ ನಿಸ್ವಾರ್ಥ ಸೇವೆಯನ್ನು ಗ್ರಾಮಸ್ಥರು ಅಭಿನಂದಿಸಿದರು.