ನೆಲ್ಯಹುದಿಕೇರಿಯಲ್ಲಿ ಮಿಲಾದುನ್ನಬಿ ಸಮ್ಮೇಳನ.ಗಮನ ಸೆಳೆದ ಸಂದೇಶ ಮೆರವಣಿಗೆ

No comments
 ಸಿದ್ದಾಪುರ :- ವಿಶ್ವ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಮೀಲಾದುನ್ನಬಿ ಸಂದೇಶ ಮೆರವಣಿಗೆ ನೆಲ್ಯಹುದಿಕೇರಿ ಪಟ್ಟಣದಲ್ಲಿ ಎಲ್ಲರ ಗಮನ ಸೆಳೆಯಿತು .ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಬಂದವರು ಪ್ರವಾದಿಯವರ ಸಂದೇಶ ಸಾರಿದರು ವಿದ್ಯಾರ್ಥಿಗಳ ದಫ್ ಪ್ರದರ್ಶನ ನೋಡುಗರ ಗಮನ ಸೆಳೆಯಿತು .ದಾರುನ್ನಜಾತ್ ಸುನ್ನಿ ಸೆಂಟರ್ ನಲ್ಲಿ ನಡೆದ ಮಿಲಾದ್ ಸಮ್ಮೇಳನದಲ್ಲಿ  ಕಲಾ, ಸಾಹಿತ್ಯ, ಬುರ್ದಾ ಮಜ್ಲಿಸ್, ದಫ್ ಪ್ರದರ್ಶನ ಸ್ಪರ್ಧೆ ನಡೆಯಿತು.ಸ್ಪರ್ಧೆಯಲ್ಲಿ  ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಸಯ್ಯಿದ್ ಖಾತಿಂ ತಂಙಳ್ ಅಲ್ ಐದರೂಸಿ, ಬಶೀರ್ ಸಖಾಫಿ ತ್ಯಾಗತ್ತೂರು, ಝುಬೈರ್ ಸಅದಿ ಅಲ್ ಅಫ್ಳಲಿ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ದಾರ್ಮಿಕ ಕಾರ್ಯಕ್ರಮ ನಡೆಯಿತು.ಮದರಸ ಕಟ್ಟಡ ಉದ್ಘಾಟನೆ ಧಾರ್ಮಿಕ-ಲೌಖಿಕ ವಿದ್ಯಾಕೇಂದ್ರದ ದಾರುನ್ನಜಾತ್ ಎಜುಕೇಶನಲ್ ಅಕಾಡೆಮಿಯ ನೂತನ ಮದರಸ ಕಟ್ಟಡವನ್ನ ಧಾರ್ಮಿಕ ಪಂಡಿತ ಮಾರ್ನಹಳ್ಳಿ ಸಯ್ಯಿದ್ ಶಾಫಿ ಜಮಲುಲ್ಲೈಲಿ ತಂಙಳ್ ಉದ್ಘಾಟಿಸಿ ಶುಭ ಹಾರೈಸಿದರು.ಸಂಸ್ಥೆಯ ಅಧ್ಯಕ್ಷ ಎಂ.ಎಂ ಮುಸ್ತಫಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ,  ನೆಲ್ಯಹುದಿಕೇರಿ ಜುಮಾ ಮಸ್ಜಿದ್ ಅಧ್ಯಕ್ಷ ಒ.ಎಂ ಅಬ್ದುಲ್ಲ ಹಾಜಿ,ಉಪಾಧ್ಯಕ್ಷ ಇಖ್ಬಾಲ್ ಮೌಲವಿ, ಜುಮಾ ಮಸ್ಜಿದ್ ಖತೀಬ್ ಸಿದ್ದೀಖ್ ರಹ್ಮಾನಿ,ಸ್ವಾಗತ ಸಮಿತಿ ಸಂಚಾಲಕ ಕೆ. ಎಂ ಸೈಯದ್ ಬಾವಾ, ಪ್ರಮುಖರಾದ ಶಿಹಾಬುದ್ದಿನ್ ತಂಞಳ್ ವಿಪಿಎಸ್, ಅಲವಿ ಹಾಜಿ, ಮಜೀದ್ ಸಿ.ಎಂ,ಖಾದರ್ ಎಂ.ಎ, ಅಬ್ದುಲ್ಲ ಪಿ.ಎ, ಹಂಝ ಸಿ.ಎಂ,ಹಸನ್ ಎನ್ ಎಂ, ರಶಾದ್ ,ಎಂ.ಎ ರಫೀಕ್,ಎ.ಪಿ ಉಮರ್, ಅಶ್ರಫ್, ಲತೀಫ್,ಸರ್ಫುದ್ದೀನ್  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

No comments

Post a Comment