ವಾಹನ ಸವಾರರಿಗೆ ಸವಾಲಾದ ಕೋಕೇರಿ ರಸ್ತೆ : ಕೂಡಲೇ ರಸ್ತೆ ದುರಸ್ತಿಗೆ ಗ್ರಾಮಸ್ಥರ ಒತ್ತಾಯ -ಪ್ರತಿಭಟನೆಯ ಎಚ್ಚರಿಕೆ

No comments

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು (web@timesofcoorg) : ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದಿಂದ ಕೋಕೇರಿ ಗ್ರಾಮಕ್ಕೆ ಹೋಗುವ ರಸ್ತೆಯು ಕಳೆದ ಹಲವು ವರ್ಷಗಳಿಂದ ತೀರ ಹದಗೆಟ್ಟು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

 ಅಲ್ಲದೆ ಈ ರಸ್ತೆಯಲ್ಲಿ ಡಾಂಬರೀಕರಣ  ಇಲ್ಲದೆ ಬರೀ ಗುಂಡಿಗಳು ಹಾಗೂ ಕಲ್ಲುಗಳು ಗೋಚರಿಸುತ್ತಿದೆ. ಈ ರಸ್ತೆಯನ್ನು ದುರಸ್ತಿ ಪಡಿಸಲು ಗ್ರಾಮಸ್ಥರು ಹಲವಾರು ಬಾರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರೂ ಸರ್ಕಾರವಾಗಲೀ, ಜಿಲ್ಲಾಡಳಿತವಾಗಲೀ ಈ ರಸ್ತೆಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದ ಈ ರಸ್ತೆಯು ಇಂದು ಹದಗೆಟ್ಟು ನಡೆಯಲಾರದಂತಹ ಪರಿಸ್ಥಿತಿಗೆ ತಲುಪಿದೆ.


ಈ ರಸ್ತೆಯಲ್ಲಿ ಖಾಸಗಿ ಬಸ್ಸುಗಳು ಓಡಾಟ ನಡೆಸುತ್ತಿದ್ದರೂ  ಈಗ ಈ ರಸ್ತೆ ಡಾಂಬರಿಕರಣ ಗೊಳ್ಳದೇ ಹಾಳಾಗಿರುವುದರಿಂದ  ಈ ರಸ್ತೆಯಲ್ಲಿ ಯಾವುದೇ ಬಸ್ಸುಗಳು ಸಂಚರಿಸಿದೆ ಈ ವಿಭಾಗದ ಜನರು ನಾಪೋಕ್ಲು ಪಟ್ಟಣ ಹಾಗೂ ಇನ್ನಿತರ ಕಡೆಗಳಿಗೆ ಹೋಗಲು ಬಾಡಿಗೆ ವಾಹನಗಳ ಮೊರೆ ಹೋಗಬೇಕಾಗಿದೆ. ಆದರೇ ಈ ರಸ್ತೆಯಲ್ಲಿ ಎಲ್ಲಾ ಬಾಡಿಗೆ ವಾಹನಗಳ ಸವಾರರು ಬರಲು ಹಿಂಜರಿಯುತ್ತಿದ್ದು ಇದರಿಂದ ಈ ವಿಭಾಗದ ಜನರು ನಡೆದುಕೊಂಡು ಹೋಗ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೆ ಯಾವುದೇ ತುರ್ತು ಸಂದರ್ಭಗಳಲ್ಲಿ ಈ ಹದಗೆಟ್ಟ ರಸ್ತೆಯಿಂದಾಗಿ ವಾಹನ ಸವಾರರು ಬಾರದೇ ತುಂಬಾ ತೊಂದರೆ ಅನುಭವಿಸಬೇಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಆದುದರಿಂದ ಕೂಡಲೇ ಈ ರಸ್ತೆಯನ್ನು ಡಾಂಬರೀಕರಣ ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು  ಈ ವಿಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.  ಕೂಡಲೇ ದುರಸ್ಥಿ ಪಡಿಸದೆ ಇದ್ದಲ್ಲಿ ವಿರಾಜಪೇಟೆ -ನಾಪೋಕ್ಲು ಮುಖ್ಯರಸ್ತೆಯ ಕೊಳಕೇರಿ ಬಳಿಯಲ್ಲಿ ರಸ್ತೆ ತಡೆಯನ್ನು ನಡೆಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.


ಕಳೆದ ಹಲವು ವರ್ಷಗಳಿಂದ ಈ ರಸ್ತೆಯನ್ನು ದುರಸ್ತಿ ಪಡಿಸಲು ಹಲವು ಬಾರಿ ಪ್ರತಿಭಟನೆ ನಡೆಸಿದರೂ ಈ ಬಗ್ಗೆ ಸರ್ಕಾರವಾಗಲಿ ಜಿಲ್ಲಾಡಳಿತವಾಗಲಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಭಾಗದ ಜನರು ವಿವಿಧ ಕಡೆಗಳಿಗೆ ಹೋಗಲು ವಾಹನಗಳು ಬಾರದೇ ಹರಸಾಹಸ ಪಡುತ್ತಿದ್ದು ಕೂಡಲೇ ಈ ರಸ್ತೆಯನ್ನು ಡಾಂಬರೀಕರಣ ಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು."

 = ಪೊನ್ನಚಂಡ ಪಳಂಗಪ್ಪ (ಗ್ರಾಮಸ್ಥರು ಕೋಕೇರಿ)

ಕೋಕೇರಿ ರಸ್ತೆಯು ತೀರಾ ಹದಗೆಟ್ಟಿದ್ದರಿಂದ ಇಲ್ಲಿ ಗೆ ಆಟೋ ರಿಕ್ಷಾದಲ್ಲಿ ಬಾಡಿಗೆ ಬಂದರೆ ಆಟೋ ಗ್ಯಾರೇಜಿಗೆ ಹೋಗೋದು ಗ್ಯಾರಂಟಿ ಆದ್ದರಿಂದ ಇಲ್ಲಿಗೆ ಚಾಲಕರು ಬಾಡಿಗೆ ಬರಲು ಹಿಂಜರಿಯುತ್ತಾರೆ. ಆದುದರಿಂದ ಸಂಬಂಧ ಪಟ್ಟವರು ಕೂಡಲೇ ರಸ್ತೆಯನ್ನು ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ. " 

 = ಎಂ. ಎಚ್. ರಫೀಕ್ (ಆಟೋ ಚಾಲಕ ಕೊಳಕೇರಿ)

No comments

Post a Comment