ಸೋಮವಾರಪೇಟೆ (web@timesofcoorg) : ಸೋಮವಾರ ಪೇಟೆಯಿಂದ ಕೂತಿ, ಶಾಂತಳ್ಳಿ ಮಾರ್ಗದ ರಾಜ್ಯ ಹೆದ್ದಾರಿಯ ಪಟ್ಟಣ ಸಮೀಪದ ಚೌಡ್ಲುವಿನ ತಿರುವಿನಲ್ಲಿ ರಸ್ತೆಯಲ್ಲಿ ಗುಂಡಿಗಳಾಗಿ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.
ಅಲ್ಲದೇ ಕೊಡಗು ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತಕ್ಕೂ ಇದೇಮಾರ್ಗದ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು ಈ ರಸ್ತೆಯ ತಿರುವಿನಲ್ಲಿ ಗುಂಡಿಗಳಾಗಿ ವಾಹನಗಳು ಸಂಚರಿಸುವಾಗ ಅಪಘಾತಕ್ಕೆ ಅಹ್ವಾನಿಸುವಂತೆ ಕಾಣುತ್ತಿದ್ದು. ಅದಲ್ಲದೇ ಈ ಮಾರ್ಗವಾಗಿ ಸಾರಿಗೆ ಬಸ್ಸುಗಳು ಹಾಗೂ ಇತರೆ ಸಾಕಷ್ಟು ಪ್ರವಾಸಿಗರ ವಾಹನಗಳು ಸಂಚರಿಸುತ್ತಿದ್ದು.ಆದ್ದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆಯವರು ರಸ್ತೆಯಲ್ಲಿರುವ ಗುಂಡಿ ಮುಚ್ಚಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಈ ವಿಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
No comments
Post a Comment