ನಾಪೋಕ್ಲು (web@timesofcoorg) : ನಾಪೋಕ್ಲು ಪಟ್ಟಣ ಮಡಿಕೇರಿ ತಾಲೂಕಿನಲ್ಲಿ ಎರಡನೇ ದೊಡ್ಡ ಪಟ್ಟಣವೆಂಬ ಹೆಗ್ಗಳಿಕೆಯನ್ನು ಗಳಿಸಿದೆ. ಆದರೆ ನಾಪೋಕ್ಲು ನಗರ ರಾತ್ರಿ ಕಗ್ಗತ್ತಲೆಯಿಂದ ಕೂಡಿದೆ ಕಾರಣ ಇಲ್ಲಿ ಪಟ್ಟಣದುದ್ದಕ್ಕೂ ಬೀದಿ ದೀಪಗಳು ಉರಿಯುತ್ತಿಲ್ಲ.
ನಾಗರಿಕರು ಬೇರೇ ನಗರಗಳಿಂದ ರಾತ್ರಿ ನಾಪೋಕ್ಲು ಪಟ್ಟಣಕ್ಕೆ ಬಂದರೆ ಕ್ಕುಗ್ರಾಮಕ್ಕೆ ಬಂದಂತಹ ಅನುಭವವಾಗುತ್ತದೆ ಎಂದು ನಾಗರಿಕರು ಹೇಳೋದು ಕೇಳಿಬಂತು. ಅದರಂತೆ ನಗರದಲ್ಲಿ ರಾತ್ರಿ ನಡೆದಾಡಲು ಟಾರ್ಚ್ ಲೈಟ್ ಹಾಗೂ ಮೊಬೈಲ್ ಲೈಟ್ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅದಲ್ಲದೆ ನಾಪೋಕ್ಲು ಗ್ರಾಮ ಪಂಚಾಯಿತಿಯಲ್ಲಿ 23 ಜನ ಸದಸ್ಯರಿದ್ದು ಅವರೂ ಸಹ ಕತ್ತಲಿನಲ್ಲೇ ತಿರುಗಾಡುತ್ತಿದ್ದರೂ ಇದು ಅವರ ಗಮನಕ್ಕೆ ಬಾರದೇ ಇರೋದು ವಿಷಾಧಕರ. ಎಲ್ಲಾ ನಗರಗಳಲ್ಲಿ ಉತ್ತಮ ಗುಣಮಟ್ಟದ ವಿವಿಧ ವಿನ್ಯಾಸದ (ಎಲ್ ಇ ಡಿ )ಬೀದಿ ದೀಪಗಳು ಇದ್ದರೆ ನಾಪೋಕ್ಲು ನಗರದಲ್ಲಿ ಹಳೇ ಕಾಲದ ಬಲ್ಬುಗಳು ವಿದ್ಯುತ್ ಕಂಬಗಳಲ್ಲಿ ತೂಗಾಡುತಿದ್ದರೂ ಪ್ರಯೋಜನ ಇಲ್ಲಾಂತ್ತಾಗಿದೆ.
ನಾಪೋಕ್ಲು ಗ್ರಾಮ ಪಂಚಾಯತಿ ಇನ್ನೂ ನಿದ್ರಾವಸ್ಥೆಯಲ್ಲಿದೆ ಎಂದು ನಗರದ ನಾಗರಿಕರು ದೂರಿದ್ದಾರೆ. ಕೂಡಲೇ ನಾಪೋಕ್ಲು ನಗರದಲ್ಲಿ ಬೀದಿ ದೀಪಗಳನ್ನು ಅಳವಡಿಸದಿದ್ದರೆ ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ನಾಗರಿಕರು ಎಚ್ಚರಿಸಿದ್ದಾರೆ.
No comments
Post a Comment