ಭಾರತದ ಮಹಿಳಾ ಹಾಕಿ ತಂಡದ ತರಬೇತುದಾರರಾಗಿದ್ದ ಅಂಕಿತಾ ಸುರೇಶ್‍ಗೆ ಶಾಸಕ ಕೆ.ಜಿ ಬೋಪಯ್ಯ ಅಭಿನಂದನೆ

No comments

ಮಡಿಕೇರಿ ಆ.25(web@timesofcoorg):-ಶಾಸಕರಾದ ಕೆ.ಜಿ.ಬೋಪಯ್ಯ ಅವರು ಬೆಂಗಳೂರಿನ ಕಚೇರಿಯಲ್ಲಿ ಇತ್ತೀಚೆಗೆ ಟೋಕಿಯೋ ಒಲಂಪಿಕ್ಸ್‍ನಲ್ಲಿ ಭಾರತದ ಮಹಿಳಾ ಹಾಕಿ ತಂಡದ ತರಬೇತುದಾರರಾಗಿದ್ದ ಕೊಡಗು ಜಿಲ್ಲೆಯ ಅಂಕಿತಾ ಸುರೇಶ್ ಅವರನ್ನು ಬುಧವಾರ ಅಭಿನಂದಿಸಿದರು.  

ಒಲಂಪಿಕ್ಸ್‍ನಲ್ಲಿ ಹಾಕಿ ತಂಡ ಮುನ್ನೆಡಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಂಕಿತಾ ಸುರೇಶ್ ಅವರು ತಾತ್ಕಾಲಿಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಶಾಸಕರ ಗಮನಕ್ಕೆ ತಂದರು. 

ಈ ಸಂಬಂಧ ಕ್ರೀಡಾ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.

No comments

Post a Comment