ಮಡಿಕೇರಿ (www.timesofcoorg.in):-ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2021-22 ನೇ ಸಾಲಿನಲ್ಲಿ ಬಿಎಡ್ ಹಾಗೂ ಡಿಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳಿಗೆ 25 ಸಾವಿರ ರೂ ವಿಶೇಷ ಪ್ರೋತ್ಸಾಹಧನ ಯೋಜನೆ” ಅಡಿ ಆಫ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಇಲಾಖಾ ವೆಬ್ಸೈಟ್ https://dom.karnataka.gov.xn--in-tsh8ki2l/ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಗೆ ಸಲ್ಲಿಸಬಹುದು. ಅಗತ್ಯ ಮಾಹಿತಿಗೆ ಇಲಾಖಾ ವೆಬ್ಸೈಟ್ https://dom.karnataka.gov.in ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, “ಮಾಹಿತಿ ಕೇಂದ್ರ”ಮೌಲಾನಾ ಅಜಾದ್ ಭವನ, ಎಫ್ಎಂಸಿ. ಕಾಲೇಜು ಹತ್ತಿರ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿ ದೂರವಾಣಿ ಸಂಖ್ಯೆ: 08272-225528/ 220214 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ್ ಡಿ.ಗಡ್ಡಿಗೌಡರ್ ಅವರು ತಿಳಿಸಿದ್ದಾರೆ.
No comments
Post a Comment