ಶನಿವಾರಸಂತೆ (web@timesofcoorg) : ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಬಳಿಯ ಗೋಪಾಲಪುರ ಚರ್ಚ ವತಿಯಿಂದ ದಾನಿಗಳ ಸಹಕಾರದಿಂದ ಎಡ್ವರ್ಡ್ ಫೌಂಡೇಶನ್, ಕೊರೊನಾ ಸಮಯದಲ್ಲಿ ಬಡವರಿಗೆ ತೊಂದರೆ ಅನುಭವಿಸಿದ್ದ ಜನರಿಗೆ ಸಹಾಯ ಮಾಡುವಂತೆ ಚರ್ಚ್ ನ ಫಾದರ್ ಜಾಕಬ್ ಕೊಲ್ಲ ನೂರುರವರು ಎಡ್ವರ್ಡ್ ಫೌಂಡೇಷನ್ ನವರಿಗೆ ಕೇಳಿಕೊಂಡ ಮೇರೆಗೆ, ಅವರ ತುಂಬು ಹೃದಯದ ಒಪ್ಪಿಕೊಂಡು ಇಂದು ತಾರೀಕು 24/8/2021 ರಂದು ಬಡಜನರಿಗೆ ಒಟ್ಟು 650 ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಹಂಚಿಕೊಂಡ ಶನಿವಾರಸಂತೆಯ ವೃತ್ತ ನಿರೀಕ್ಷಕರು ಪರಶಿವಮೂರ್ತಿ ರವರು ಮತ್ತು ಎಡ್ವರ್ಡ್ ಓವಿಲ್ ಮತ್ತು ಶ್ರೀ ಮಾರು ಮತ್ತು ಶ್ರೀಮತಿ ಮಾರು ಮತ್ತು ಫಾದರ್ ಜೇಕಬ್ ಕೊಲ್ಲೂರು ವೇದಿಕೆ ಹಂಚಿಕೊಂಡರು. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷ ಕ ಪರಶಿವಮೂರ್ತಿ ರವರು ಮಾತನಾಡುತ್ತಾ ದಾನದಲ್ಲಿ ದಾನ ಅನ್ನದಾನ ಹಾಗಾಗಿ ಬಡವರಿಗೆ ಈ ಕಿಟ್ ಗಳನ್ನು ವಿತರಣೆ ಮಾಡುತ್ತಿರುವುದು. ತುಂಬಾ ಸಂತೋಷಕರ ವಿಷಯ ಇದಕ್ಕೆ ಗೋಪುರ ಚರ್ಚ್ ನ ಫಾದರ್ ರವರಿಗೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಗೋಪಾಲಪುರ ಚರ್ಚ್ ನ ಫಾದರ್ ಜಾಕಬ್ ಕೊಲ್ಲ ನೂರು ಮಾತನಾಡಿ, ಈ ಕಿಟ್ ಗಳನ್ನು ಗೋಪಾಲಪುರ ಚರ್ಚ್ ವತಿಯಿಂದ ವಿತರಣೆ ಮಾಡುತ್ತಿದ್ದೆವೆ. ಇದು ಬಡವರಿಗೆ ಸಲ್ಲುವಂಥ ಕಿಟ್ ಗಳು ಈ ಕಿಟ್ ಗಳು, ನಾವ್ಯಾಕೆ ವಿತರಣೆ ಮಾಡುತ್ತಿದ್ದೆವೆಂದರೆ, ಇಲ್ಲಿ ತುಂಬಾ ಕಡುಬಡವರನ್ನು ನಾನು ನೋಡಿರುತ್ತೇನೆ, ಹಾಗಾಗಿ ಇಲ್ಲಿರುವ ಎಲ್ಲರಿಗೂ ನಾವು ಪಡಿತರ ಕಿಟ್ ಗಳು ವಿತರಣೆ ಮಾಡುತ್ತಿದ್ದೆವೆ. ಮತ್ತು ಇದೇ ಸಂದರ್ಭದಲ್ಲಿ ಪಡಿತರ ಕಿಟ್ ಕೊಟ್ಟಂತಹ ದಾನಿಗಳಾದ ಎಡ್ವರ್ಡ್ ಫೌಂಡೇಶನ್ ಮತ್ತು ಶ್ರೀ ಮಾರೋ ಮತ್ತು ಶ್ರೀಮತಿ ಮಾರು ರವರೆಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಎಲ್ಲರಿಗೂ ಟೋಕನ್ ಮೊದಲೇ ಕೊಡಲಾಗಿತ್ತು. ಟೋಕನ್ ಇದ್ದವರಿಗೆ ಎಲ್ಲರಿಗೂ ಪಡಿತರ ಕಿಟ್ ಗಳನ್ನು ವಿತರಣೆ ಮಾಡಲಾಯಿತು .ಈ ಸಮಯದಲ್ಲಿ ವೃತ್ತ ನಿರೀಕ್ಷಕರು ಪರಶಿವಮೂರ್ತಿ ಮತ್ತು ಎಡ್ವರ್ಡ್ ಓವೆಲ್ ಮತ್ತು ಶ್ರೀ ಮತ್ತು ಶ್ರೀಮತಿ ಮಾರು ಮತ್ತು ಫಾದರ್ ಜೇಕಬ್ ಕೊಲ್ಲೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಒಳ್ಳೆಯ ಕೆಲಸ ನೋಡಿ ಆರೋಗ್ಯ ಇಲಾಖೆಯ ಸ್ವಚ್ಚತಾ ಗಾರರಿಗೆ ಮತ್ತು ಡಿ ಗ್ರೂಪ್ ನೌಕರರಿಗೆ ಸಂದರ್ಭದಲ್ಲಿ ಕಿಟ್ ಗಳನ್ನು ವಿತರಣೆ ಮಾಡಲಾಯಿತು ಮತ್ತು ಕೊರೊನಾ ಸಂದರ್ಭದಲ್ಲಿ ಪತ್ರಕರ್ತರು ಒಳ್ಳೆಯ ಕೆಲಸ ಮಾಡಿದ್ದರಿಂದ ಪತ್ರಕರ್ತರನ್ನು ಗುರುತಿಸಿ ಅವರಿಗೆ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಕೊರೊನಾ ಸಮಯದಲ್ಲಿ ಹೋಮ್ ಗಾರ್ಡ್ಸ್ ಗಳು ಒಳ್ಳೆಯ ಕೆಲಸ ಮಾಡಿ ಅವರನ್ನು ಗುರುತಿಸಿ ಕಿಟ್ ವಿತರಣೆ ಮಾಡಲಾಯಿತು ಮತ್ತು ಗೋಪಾಲ್ ಪುರ ಚರ್ಚ್ ನಿಂದ ಬಡವರಿಗೆ ಎಲ್ಲರಿಗೂ ಕಿಟ್ ವಿತರಣೆ ಮಾಡಲಾಯಿತು.
No comments
Post a Comment