ನಾಪೋಕ್ಲು : ಲಸಿಕಾ ಕೇಂದ್ರದಲ್ಲಿ ವ್ಯಾಕ್ಸಿನ್ ಗೆ ಮುಗಿಬಿದ್ದ ಜನರು

No comments

 


ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು (Times Of Coorg) :ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಲಸಿಕೆಗಾಗಿ ಜನರು ಪರದಾಡುತ್ತಿದ್ದು. ತಾ 30ರಂದು ಕೇವಲ 100 ಜನರಿಗೆ ಮಾತ್ರ ಲಭ್ಯವಿರುವಂತೆ ಇಲ್ಲಿನ ಲಸಿಕಾ ಕೇಂದ್ರಕ್ಕೆ ವ್ಯಾಕ್ಸಿನ್ ಬಂದಿದ್ದು  ಬೆಳಿಗ್ಗೆಯಿಂದಲೇ ನೂರಾರು ಜನರು ಅಂತರವನ್ನು ಕಾಯ್ದುಕೊಳ್ಳದೇ ವ್ಯಾಕ್ಸಿನ್ ಗಾಗಿ ಮುಗಿಬೀಳುವ ದೃಶ್ಯ ಕಂಡು ಬಂತು.

 ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆಶಾ ಕಾರ್ಯಕರ್ತೆಯರಾದ ಆಶಲತಾ ಮತ್ತು ಅಜಿತಾ ರವರು  ವ್ಯಾಕ್ಸಿಂಗ್ ಗಾಗಿ ಮುಗಿಬಿದ್ದ ಜನರನ್ನು ನಿಯಂತ್ರಿಸಲು ತೊಂದರೆ ಅನುಭವಿಸಬೇಕಾಗಿ ಬಂತು. ನಂತರದಲ್ಲಿ ಜನರಿಗೆ ತಿಳಿ ಹೇಳಿ ಸಾಲಾಗಿ ನಿಂತು ಸಹಕರಿಸುವಂತೆ ಅವರು ಜನರಲ್ಲಿ ಮನವಿ ಮಾಡುತ್ತಿರುವುದು ಕಂಡು ಬಂತು. ಇವರ ಈ ಕಾರ್ಯಕ್ಕೆ ಅಭಿನಂದಿಸಲೇಬೇಕು.ನಂತರದಲ್ಲಿ  ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ ವ್ಯಾಕ್ಸಿನ್ ನೀಡಲಾಯಿತು.

ನಾಪೋಕ್ಲು ದೊಡ್ಡ ಹೋಬಳಿಯಾಗಿದ್ದು ಇಲ್ಲಿ ಸುಮಾರು 30ಸಾವಿರಕ್ಕೂ ಅಧಿಕ ಜನಸಂಖ್ಯೆ ಇರೋದರಿಂದ ಇಲ್ಲಿಗೆ ಪ್ರತಿ ದಿನ ಕನಿಷ್ಠ 250 ಜನರಿಗೆ ವ್ಯಾಕ್ಸಿನ್ ನೀಡಬೇಕೆಂದು ನಾಪೋಕ್ಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಖುರೇಶಿ, ಹಾಗೂ ಸದಸ್ಯರಾದ ಕನ್ನಂಬಿರ ಸುಧಿ ತಿಮ್ಮಯ್ಯ ಜಿಲ್ಲಾ ಆರೋಗ್ಯ ಇಲಾಖೆ ಅವರನ್ನು ಒತ್ತಾಯಿಸಿದ್ದಾರೆ.





No comments

Post a Comment