ಮಡಿಕೇರಿ (Times Of Coorg) : ಕೋವಿಡ್ ಮಹಾಮಾರಿಯ ಕರಿ ನೆರಳಿನಿಂದಾಗಿ ಕಳೆದ ವರ್ಷಗಳಿಂದ ನಡೆಯದಿದ್ದ ಕೊಡಗಿನವರ ಈದ್ ಮಿಲನ ಕ್ರೀಡಾ ಕೂಟ ಯಶಸ್ವಿಯಾಗಿ ಈ ಭಾರಿ ದುಬೈಯಲ್ಲಿ ಕೂರ್ಗ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆಯಿತು, ಬಕ್ರೀದ್ ಹಬ್ಬದಂದು ಅಲ್ಕೂಸ್ ಡಲ್ಸ್ಕೋ ಸ್ಪೋರ್ಟ್ಸ್ ಎರೇನಾದಲ್ಲಿ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಗಳು ನಡೆದರೆ ಬಕ್ರೀದ್ ಹಬ್ಬದ ಮಾರನೇ ದಿನ ಅಲ್ ಕ್ವಾಸಿಸ್ ನಲ್ಲಿರುವ ಜುವೆಂಟಸ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾವಳಿ ನೆರವೇರಿತು, ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಭಾಗಗಳಿಂದ ನೂರಾರು ಕೊಡಗಿನ ಕ್ರೀಡಾಭಿಮಾನಿಗಳು ಮತ್ತು ಆಟಗಾರರು ಆಗಮಿಸಿದರು.
ಪ್ರಸ್ತುತ ಕ್ರಿಕೆಟ್ ಟ್ರೋಫಿಯನ್ನು ರೋಚಕ ಫೈನಲ್ ಪಂದ್ಯದಲ್ಲಿ ಬುಲೆಟ್ ಕೊಂಡಂಗೇರಿ ತಂಡ ತಮ್ಮದಾಗಿಸಿದರೆ ಜಾಸಿ ನಾಯಕತ್ವದ ಚೆರಿಯಪರಂಬು ತಂಡ ಎರಡನೇ ಸ್ಥಾನ ಪಡೆದರು, ವಾಲಿಬಾಲ್ ಪಂದ್ಯಾವಳಿಯಲ್ಲಿ ಜಿಮ್ಯಾಕ್ ಎಮ್ಮೆಮಾಡು ತಂಡ ಜಯಭೇರಿ ಬಾರಿಸಿದರೆ ಪ್ರಾಮ್ಟ್ ತಂಡ ದ್ವಿತೀಯ ಸ್ಥಾನ ಪಡೆದರು, ಬಕ್ರೀದ್ ಪ್ರಯುಕ್ತ ನಡೆದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಂಸಿ ನಾಯಕತ್ವದ ಛಾಮೆ ತಂಡ ಮೊದಲ ಸ್ಥಾನ ಪಡೆದರೆ ರಫೀಕಲಿ ಕುಂಡಂಡ ನಾಯಕತ್ವದ ರಾಪ್ಟರ್ಸ್ ಕುಂಜಿಲ ತಂಡ ಪೆನಾಲ್ಟಿ ಮೂಲಕ ಸೋತು ಎರಡನೇ ಸ್ಥಾನ ಪಡೆದು ಟ್ರೋಫಿ ತಮ್ಮದಾಗಿಸಿದರು.
ಕ್ರಿಕೆಟ್ ಪಂದ್ಯಾವಳಿಯನ್ನು ಖಲೀಲ್ ಛಾಮೆ, ರಫೀಕಲಿ ಕುಂಜಿಲ ಮತ್ತು ಸಮೀರ್ ಹೊಳಮಾಳ ಅವರು ಆಯೋಜಿಸಿದರೆ, ವಾಲಿಬಾಲ್ ಪಂದ್ಯಾವಳಿಯನ್ನು ಅಕ್ಬರ್ ಗುಂಡಿಕೆರೆ ಅವರು ಸಂಘಟಿಸದರು ಮತ್ತು ಕಾಲ್ಚೆಂಡು ಪಂದ್ಯಾವಳಿಯನ್ನು ರಫೀಕಲಿ ಕುಂಡಂಡ ಕುಂಜಿಲ ಅವರು ಆಯೋಜಿಸಿದರು.

No comments
Post a Comment