ಇಂದು ವಿರಾಜಪೇಟೆಯಲ್ಲಿ ಕೆಎಂಸಿಸಿ ಸಾಂತ್ವನ ಮನೆ ಆರೈಕೆ ಕೇಂದ್ರ ಉದ್ಘಾಟನೆ.
ವಿರಾಜಪೇಟೆ :ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಖಿಲ ಭಾರತ ಕೆಎಂಸಿಸಿ ಸಂಘಟನೆ ವತಿಯಿಂದ ಜಿಲ್ಲೆಯಲ್ಲಿ ಮೊದಲ ಬಾರಿಗೆ ಆರೋಗ್ಯ ಸಮಸ್ಯೆಯಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಶಿಹಾಬ್ ತಂಗಳ್ ಸಾಂತ್ವನ ಮನೆ ಆರೈಕೆ ಕೇಂದ್ರವನ್ನು ವಿರಾಜಪೇಟೆಯ ಆರ್ಜಿ ಗ್ರಾಮದಲ್ಲಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ವಿರಾಜಪೇಟೆ ಕೆಎಂಸಿಸಿ ವಲಯದ ಅಧ್ಯಕ್ಷ ರಫೀಕ್ ತಿಳಿಸಿದ್ದಾರೆ. (ಏಪ್ರಿಲ್ 10ರಂದು) ಇಂದು ಮಧ್ಯಾಹ್ನ 3ಗಂಟೆಗೆ ಆರ್ಜಿ ಗ್ರಾಮದ ಸನ್ಸದನ್ ಕಟ್ಟಡದಲ್ಲಿರುವ ಆರೈಕೆ ಕೇಂದ್ರ ಧಾರ್ಮಿಕ ಪಂಡಿತರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದ್ದುಆರೈಕೆ ಸೇವೆಯನ್ನು ಸದುಪಯೋಗಪಡಿಸಿಕೊಳ್ಳ ಬೇಕೆಂದು ರಫೀಕ್ ಮನವಿ ಮಾಡಿದ್ದಾರೆ.ಉದ್ಘಾಟನಾ ಕಾರ್ಯಕ್ರಮಕ್ಕೆ ಪಾಣಕ್ಕಾಡ್ ಸೈಯದ್ ಮುನವರಲಿ ಶಿಹಾಬ್ ತಂಗಳ್,ಕೇರಳ ಲೋಕಸಭಾ ಸದಸ್ಯ ಇ. ಟಿ ಮೊಹಮ್ಮದ್ ಬಶೀರ್ , ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಜಿ ಬೋಪಯ್ಯಸೇರಿದಂತೆ ಧಾರ್ಮಿಕ ಪಂಡಿತರು, ಮುಖಂಡರುಗಳು,ಜನಪ್ರತಿನಿಧಿಗಳು,ಸಮಾಜ ಸೇವಕರು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
No comments
Post a Comment