ಎಮ್ಮೆಮಾಡು ಎಸ್ಎಸ್ಎಫ್ ಸೆಂಟ್ರಲ್ ಸಮಿತಿಗೆ ನೂತನ ಸಾರಥ್ಯ

No comments

 

ನಾಪೋಕ್ಲು: ಎಸ್ ಎಸ್ ಎಫ್  ರಾಜ್ಯ ಸಮಿತಿಯ ಆದೇಶದನ್ವಯ ರಾಜ್ಯದ ವಿವಿಧ ಶಾಖೆಗಳಲ್ಲಿ ನಡೆಸಲ್ಪಡುವ  ವಾರ್ಷಿಕ ಕೌನ್ಸಿಲ್ ಪ್ರಯುಕ್ತ ಎಮ್ಮೆಮಾಡು ವಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸೆಂಟ್ರಲ್ ಶಾಖೆಯ ವಾರ್ಷಿಕ ಜನರಲ್ ಬೋಡಿಯನ್ನು ಶಾಖಾಧ್ಯಕ್ಷರಾದ ನಝೀರ್ ಬಾಖವಿ ಯವರ ಅಧ್ಯಕ್ಷತೆಯಲ್ಲಿ ಪುದಿಯಾರೆ ಹನೀಫ್ ರವರ ಮನೆಯಲ್ಲಿ ನಡೆಸಲಾಯಿತು. ಸೊಗಸಾದ ರೀತಿಯಲ್ಲಿ ತರಗತಿಯನ್ನು ಎಮ್ಮೆಮಾಡು ಈಸ್ಟ್ ಅಧ್ಯಕ್ಷರಾದ ಫಾರೂಕ್ ಅಹ್ಮದ್ ರವರು ನಡೆಸಿಕೊಟ್ಟರು. 

ಉದ್ಘಾಟನೆಯನ್ನು ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಶೌಕತ್ ಎಮ್ಮೆಮಾಡು ನಿರ್ವಹಿಸಿದರು. ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸೆಫ್ ಮಡಿಕೇರಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸಲಾಹುದ್ದೀನ್ ಕೊಟ್ಟಮುಡಿ ಮತ್ತು ರಶೀದ್ ಮುಸ್ಲಿಯಾರ್ ರವರು ನೂತನ ಸಾರಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ಮತ್ತು ಮುಂದಾಳತ್ವ ವಹಿಸಿದರು. ವರದಿವಾಚನ ಹಾಗೂ ಲೆಕ್ಕಪತ್ರ ಮಂಡನೆ ಕಾರ್ಯದರ್ಶಿ ನೌಹಾರ್ ಮಂಡಿಸಿದರು. ಮಹಾಸಭೆಯಲ್ಲಿ ಹಲವಾರು ಕಾರ್ಯಕರ್ತರು ಹಾಗೂ ಸ್ಥಳೀಯ  ನಾಯಕರುಗಳು ಉಪಸ್ಥಿತರಿದ್ದರು. ಸ್ವಾಗತವನ್ನು ಹಾಗೂ ವಂದನೆಯನ್ನು ಕ್ರಮವಾಗಿ ಮಾಜಿ ಹಾಗೂ ಹಾಲಿ ಕಾರ್ಯದರ್ಶಿಗಳು ನಿರ್ವಹಿಸಿದರು. ನೂತನ ಅಧ್ಯಕ್ಷರಿಗೆ ಮಾಜಿ ಅಧ್ಯಕ್ಷರು ಧ್ವಜವನ್ನು ಹಾಗು ನಿಕಟಪೂರ್ವ ಕಾರ್ಯದರ್ಶಿ ನೂತನ ಕಾರ್ಯದರ್ಶಿ ಕಡತಗಳನ್ನು ಹಸ್ತಾಂತರಿಸಿದರು. ಈ ಕೆಳಕಂಡವರನ್ನು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹಾರಿಸ್ ಬಿ.ಎಂ(ಅಧ್ಯಕ್ಷರು) ಸ್ವಾದಿಕ್ ಸಅದಿ ಅಲ್ ಹಾದಿ, ಜಂಶೀರ್ ಅನ್ವಾರಿ(ಉಪಾಧ್ಯಕ್ಷರು) ಶರೀಫ್ (ಪ್ರ.ಕಾರ್ಯದರ್ಶಿ) ಶಾಫಿ ಕೆ.ಎಚ್,ಮಶ್ಹೂದ್,ಝಿಯಾದ್,ಹಾಫಿಲ್ ಶಮ್ಮಾಸ್,ರಿಯಾಸ್ ಕಾರ್ಯದರ್ಶಿಗಳು.

No comments

Post a Comment