ಸಿದ್ದಾಪುರ : ಪೈಸಾರಿ ಪ್ರೀಮಿಯರ್ ಲೀಗ್ (ಪಿಪಿಎಲ್)ಕ್ರಿಕೆಟ್ ಪಂದ್ಯಾಟದಲ್ಲಿ ಬ್ಲಾಕ್ ಪ್ಯಾಂಥರ್ಸ್ ತಂಡ ಅತ್ಯುತ್ತಮ ಆಟದೊಂದಿಗೆ ಜಯಗಳಿಸುವ ಮೂಲಕ ಪಿಪಿಎಲ್ ಕ್ರಿಕೆಟ್ ಟ್ರೋಫಿ ತನ್ನದಾಗಿಸಿಕೊಂಡಿದೆ.
ನೆಲ್ಯಹುದಿಕೇರಿಯ ಎಂಜಿ ಕಾಲನಿಯ ಗದ್ದೆ ಮೈದಾನದಲ್ಲಿ ನಡೆದ ಪೈಸಾರಿ ಪ್ರಿಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಬ್ಲಾಕ್ ಪ್ಯಾಂಥರ್ಸ್ ಹಾಗೂ ಡ್ರೀಮ್ 46 ತಂಡದ ನಡುವೆ ನಡೆದ ಅಂತಿಮ ಪಂದ್ಯಾಟದಲ್ಲಿ ಕ್ಯಾಪ್ಟನ್ ಸಿಯಾದ್ ನೇತೃತ್ವದ ಪ್ಯಾಂಥರ್ಸ್ ತಂಡ ಪ್ರಥಮ ಬಹುಮಾನ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಜಯ ಗಳಿಸುವಲ್ಲಿ ಯಶಸ್ವಿಯಾಗಿದೆ.ಅಂತಿಮ ಹಣಾಹಣಿಯಲ್ಲಿ ಡ್ರೀಮ್ 46 ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.ಪಿಪಿಎಲ್ ಕ್ರಿಕೆಟ್ ನ ಪ್ರಥಮ ವರ್ಷದ ಆಟಕ್ಕೆನೆಲ್ಯಹುದಿಕೇರಿ ವ್ಯಾಪ್ತಿಯ ಫೈರ್ ಬಾಯ್ಸ್, ಪವರ್ ಬಾಯ್ಸ್, ಕೂರ್ಗ್ ರೈಡರ್ಸ್, ಎಂಜಿಸಿ ಬ್ಲೂಸ್, ಲಾಕ್ ಡೌನ್ ಬ್ರದರ್ಸ್, ಬೂಮ್ ಬಶೀರ್, ಜಿಸಿಸಿ, ಲಯನ್ ವಾರಿಯರ್ ಭಾಗವಹಿಸಿದ್ದವು . ಆಟದ ಮೈದಾನದ ಕೊರತೆ ನಡುವೆ ಗದ್ದೆ ಮೈದಾನದಲ್ಲಿ ಆಟವಾಡಿ ಕ್ರಡಾಪಟುಗಳು ಸಂಭ್ರಮಿಸಿದರು.

No comments
Post a Comment